Advertisment

AC ಬಳಕೆ ಹೆಚ್ಚಾದ್ರೆ ಎಷ್ಟು ಅಪಾಯ? ತಜ್ಞರು ನೀಡುವ ಸಲಹೆಗಳನ್ನು ತಪ್ಪದೇ ಪಾಲಿಸಿ

author-image
Gopal Kulkarni
Updated On
AC ಬಳಕೆ ಹೆಚ್ಚಾದ್ರೆ ಎಷ್ಟು ಅಪಾಯ? ತಜ್ಞರು ನೀಡುವ ಸಲಹೆಗಳನ್ನು ತಪ್ಪದೇ ಪಾಲಿಸಿ
Advertisment
  • ಏರ್ ಕಂಡಿಷನರ್ ಅತಿಯಾಗಿ ಬಳಸುವುದರಿಂದ ಇದೆ ಸಾಕಷ್ಟು ಅಪಾಯ
  • ಅನುಕೂಲಗಳಷ್ಟೇ ಅನಾನುಕೂಲಗಳನ್ನು ತಂದೊಡ್ಡುತ್ತದೆ ಏರ್ ಕಂಡಿಷನರ್
  • ಹಲವು ಸಮಸ್ಯೆಗಳನ್ನು ದೂರ ಮಾಡುವ AC, ಅತಿಯಾದ್ರೆ ಅಪಾಯವೂ ಹೌದು

ಬೇಸಿಗೆಯ ಬೇಗೆಯಲ್ಲಿ ನಮ್ಮನ್ನ, ನಮ್ಮ ಜೀವವನ್ನು ಕಾಪಾಡುವ ಆಪತ್ಬಾಂಧವ ಅಂದ್ರೆ ಅದು ಏರ್ ಕಂಡಿಷನರ್. ಆದ್ರೆ ಅತಿಯಾದ್ರೆ ಅಮೃತವೂ ಕೂಡ ಕೆಲವೊಮ್ಮೆ ವಿಷವಾಗಿ ಪರಿಣಮಿಸುತ್ತದೆ. ನಾವು ಇಡೀ ದಿನ ACಯಲ್ಲಿಯೇ ಕಳೆದರೆ. ACಯಲ್ಲಿಯೇ ನಿತ್ಯ ಬದುಕು ಸಾಗಿದರೆ ಎದುರಾಗುವ ಅಪಾಯಗಳೇನು?ಎಸಿಯಲ್ಲಿ ಕೂರುವುದರಿಂದ ಆಗುವ ಅನುಕೂಲಳೇನು ಈ ಎರಡನ್ನು ಸ್ಪಷ್ಟವಾಗಿ ಹೇಳುತ್ತಾರೆ ತಜ್ಞ ವೈದ್ಯರು.

Advertisment

ಇದನ್ನೂ ಓದಿ:Weak Knees; ಮೊಣಕಾಲು ನೋವು ಇದ್ದರೂ ನೀವು ಓಡಬಹುದಾ? ತಜ್ಞರು ಈ ಬಗ್ಗೆ ಏನು ಹೇಳುತ್ತಾರೆ?

ಎಸಿಗಳಿಂದ ಆಗುವ ಅನುಕೂಲ ಹಾಗೂ ಅನಾನುಕೂಲಗಳನ್ನು ತೆರದಿಡುತ್ತಾರೆ ಹೈದ್ರಾಬಾದ್​​ನ ಕೇರ್ ಆಸ್ಪತ್ರೆಯ ಶ್ವಾಸಕೋಶ ತಜ್ಞ ( Pulmonologist ) ಡಾ. ಸತೀಶ್ ರೆಡ್ಡಿ. ಎಸಿಗಳು ತಾಪಾಮಾನವನ್ನು ನಿಯಂತ್ರಿಸುವುದರಲ್ಲಿ ಹಾಗೂ ಏರ್ ಕ್ವಾಲಿಟಿಯನ್ನು ಪವಾಡದ ರೀತಿ ಕಾಪಾಡಬಲ್ಲ ಒಂದು ಯಂತ್ರ. ಇದು ಅನೇಕ ಸಮಸ್ಯೆಗಳಿಂದ ಮನುಷ್ಯನನ್ನು ದೂರ ಮಾಡುತ್ತದೆ. ಹೀಟ್ ಸ್ಟ್ರೋಕ್, ಡಿಹೈಡ್ರೇಷನ್​ನಂತಹ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ನಮ್ಮನ್ನು ದೂರ ಇಡುತ್ತದೆ. ಅದು ಪ್ರಮುಖವಾಗಿ ಬೇಸಿಗೆ ಕಾಲದಲ್ಲಿ. ಅದರಲ್ಲೂ ಆಧುನಿಕ ಎಸಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಸಣ್ಣ ಸಣ್ಣ ಧೂಳಿನ ಕಣಗಳನ್ನು ಕೂಡ ಫಿಲ್ಟರ್ ಮಾಡಿ ಮನೆಯೊಳಗಿನ, ಆಫೀಸ್ ಒಳಗಿನ ಏರ್​ಕ್ವಾಲಿಟಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇದರಿಂದಾಗಿ ಉಸಿರಾಟದ ಸಮಸ್ಯೆಗಳು, ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗಗಳು ನಮ್ಮಿಂದ ದೂರ ಇರುತ್ತವೆ. ಅದು ಮಾತ್ರವಲ್ಲ ಹ್ಯೂಮಿಡಿಟಿಯನ್ನು ಕೂಡ ಎಸಿಗಳು ನಿಯಂತ್ರಿಸುವುದರಿಂದ ಅಸ್ತಮಾ ಅಲರ್ಜಿಯಂತಹ ಸಮಸ್ಯೆಗಳಿಂದಲೂ ಕೂಡ ನಾವು ದೂರ ಇರಬಹುದು.

ಇದನ್ನೂ ಓದಿ:ಪೋಷಕರೇ ಎಚ್ಚರ.. ನಿಮ್ಮ ಮಕ್ಕಳ ಕಣ್ಣಿಗೆ Kajal ಹಚ್ಚುತ್ತಿದ್ದರೆ ಈಗಲೇ ನಿಲ್ಲಿಸಿ; ಯಾಕೆ ಗೊತ್ತಾ?

Advertisment

ಆದ್ರೆ ಎಸಿಯಿಂದ ಇರುವ ಅನುಕೂಲಗಳಷ್ಟೇ ಅನಾನಕೂಲಗಳು ಇವೆ. ಇಡೀ ದಿನ ಎಸಿಯಲ್ಲಿರುವುದರಿಂದಲೂ ಅಪಾಯಗಳಿವೆ. ನಿರಂತರವಾಗಿ ಎಸಿಯಲ್ಲಿ ಕುಳಿತುಕೊಳ್ಳುವದರಿಂದ ಒಣ ಚರ್ಮ ಸೃಷ್ಟಿಯಾಗುವ ಸಮಸ್ಯೆಗಳು ಇವೆ. ಎಸಿ ಎಲ್ಲವನ್ನೂ ಡ್ರೈ ಮಾಡಿ ಹಾಕುತ್ತದೆ. ಹೀಗಾಗಿ ಕಣ್ಣುರಿಯಂತಹ ಸಮಸ್ಯೆಗಳು ಕೂಡ ಕಾಡಬಹುದು. ಎಸಿ ಹೇಗೆ ಉಸಿರಾಟ ಸಂಬಂಧ ಕಾಯಿಲೆಗಳನ್ನು ನಿಯಂತ್ರಿಸುತ್ತದೆಯೋ ಅತಿಯಾದರೇ ಅದರಿಂದಲೇ ಉಸಿರಾಟದ ತೊಂದರೆಯಂತ ಸಮಸ್ಯೆಗಳು ನಮ್ಮನ್ನು ಕಾಡುತ್ತವೆ. ಅತಿಯಾದ ಎಸಿಯಲ್ಲಿ ಕುಳಿತಕೊಳ್ಳುವುರಿಂದ ಶೀತ, ಅಲರ್ಜಿಯಂತಹ ಸಮಸ್ಯೆಗಳು ನಮ್ಮನ್ನು ಕಾಡುತ್ತವೆ. ಅತಿಯಾದ ತಂಪು ವಾತಾವರಣವು ಸ್ನಾಯು ಸೆಳೆತ, ಜಾಯಿಂಟ್ ಪೇನ್​ನಂತಹ ಆರೋಗ್ಯ ಸಮಸ್ಯೆಗಳನ್ನು ತಂದಿಡುತ್ತವೆ.

ಹೀಗೆ ಎಸಿ ಎಷ್ಟು ಉಪಯೋಗಕಾರಿಯೋ ಅಷ್ಟೇ ಅಪಾಯಕಾರಿಯೂ ಕೂಡ ಹೌದು. ಅದನ್ನು ಹಿತಮಿತವಾಗಿ ಬಳಸಿದ್ರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹೀಗಾಗಿ ಆದಷ್ಟು ಹಿತಮಿತವಾಗಿ ಎಸಿಯನ್ನು ಬಳಸಿಕೊಳ್ಳಿ. ಇಲ್ಲವಾದರೆ ಅಪಾಯಗಳು ತಪ್ಪಿದ್ದಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment