newsfirstkannada.com

SSLC ವಿದ್ಯಾರ್ಥಿನಿ ತಲೆ ಕತ್ತರಿಸಿ ಕೊಂದಿದ್ದ ಕೇಸ್​​​ಗೆ ಬಿಗ್​ ಟ್ವಿಸ್ಟ್​​.. ಅಸಲಿಗೆ ನಡೆದಿದ್ದೇನು?

Share :

Published May 11, 2024 at 5:57am

Update May 11, 2024 at 12:08pm

  ಪರೀಕ್ಷೆ ಪಾಸದ ದಿನವೇ ವಿದ್ಯಾರ್ಥಿನಿಯ ರುಂಡ ತುಂಡರಿಸಿದ ನರರಾಕ್ಷಸ!

  ನಿಶ್ಚಿತಾರ್ಥ​ ಮುಗಿಸಿ ಹೋದವನು ವಾಪಸ್ ಆಗಿ ಬರ್ಬರವಾಗಿ ಕೊಂದಿದ್ದೇಕೆ?

  ಅತ್ತ ಪ್ರೀತಿಯೂ ಉಳಿದಿಲ್ಲ ಇತ್ತ ಪ್ರೀತಿಸಿದವರು ಉಳಿಯಲಿಲ್ಲ ದುರಂತ ಕೇಸ್​

ಮಡಿಕೇರಿ: ಮೀನಾ ಮತ್ತು ಪ್ರಕಾಶ್​ ಇಬ್ಬರಿಗೂ ಮದುವೆ ಮಾಡ್ಬೇಕು ಅಂತ ಕುಟುಂಬಸ್ಥರು ಡಿಸೈಡ್ ಮಾಡ್ತಾರೆ. ಅದಕ್ಕೂ ಮುಂಚೆ ಸಂಪ್ರದಾಯವಾಗಿ ನಿಶ್ಚಿತಾರ್ಥ ಮಾಡೋಣ ಅಂತ ನಿರ್ಧರಿಸಿ ಅದಕ್ಕೂ ಮುಹೂರ್ತ ಇಡ್ತಾರೆ. ಆದರೆ ನಿಶ್ಚಿತಾರ್ಥ ದಿನವೇ ಆ ದುರಂತ ನಡೆದು ಬಿಡುತ್ತೆ. ಪ್ರಕಾಶ ಮತ್ತು ಮೀನಾ ಅವರದ್ದು ಒಂದು ವರ್ಷದ ಲವ್ ಎನ್ನಲಾಗಿದೆ. ಕೆಲವ್ರು ಇವರದ್ದು ಟು ಸೈಡ್​ ಲವ್ ಅಂತಾರೆ. ಇನ್ನು ಕೆಲವ್ರು ಇವರದ್ದು ಒನ್​ ಸೈಡ್​ ಅಂತಾರೆ. ಕಳೆದ ವರ್ಷದಿಂದನೇ ಪ್ರಕಾಶ, ಮೀನಾಳ ಹಿಂದೆ ಬಿದ್ದಿದ್ದನಂತೆ. ಪ್ರೀತ್ಸು ಪ್ರೀತ್ಸು ಅಂತ ಪಿಡಿಸುತ್ತಿದ್ದನಂತೆ. ಪ್ರಕಾಶನ ಕಾಟಕ್ಕೆ ತಡೆಯಲಾರದೇನೇ ಮೀನಾನೂ ಅವನ ಪ್ರೀತಿಯನ್ನ ಒಪ್ಪಿಕೊಂಡಿದ್ದಳು ಎಂದು ಹೇಳಲಾಗ್ತಿದೆ.

ಎಸ್​ಎಸ್​ಎಲ್​ಸಿ ಓದುತ್ತಿದ್ದ ಮೀನಾಳ ಮೇಲೆ ಮನಸ್ಸು ಜಾರಿಸಿಕೊಂಡಿದ್ದ ಪ್ರಕಾಶ್, ಅವಳಿಗಾಗಿ ಏನೂ ಮಾಡೋದಕ್ಕೂ ಹಿಂಜರಿಯುತ್ತಿರಲಿಲ್ಲ. ಪ್ರಕಾಶನ ತಾಯಿ ಹೇಳುವ ಪ್ರಕಾರ, ಕಳೆದ ಆರು ತಿಂಗಳಿಂದ ಪ್ರಕಾಶ್, ತಮ್ಮ ಮನೆಯಲ್ಲಿರೋದಕ್ಕಿಂತ ಮೀನಾಳ ಮನೆಯಲ್ಲೇ ಇದ್ದನಂತೆ. ಮೀನಾಳನ್ನ ಓದಿಸೋದು, ಸ್ಕೂಲ್​ಗೆ ಕರೆದುಕೊಂಡು ಹೋಗೋದು, ಬರೋದು ಎಲ್ಲವೂ ಅವನೇ ನೋಡಿಕೊಳ್ಳುತ್ತಿದ್ದನಂತೆ. ಅಷ್ಟೇ ಯಾಕೆ ರಿಸೆಂಟ್​ ಆಗಿ ನಡೆದಿದ್ದ ಎಸ್​ಎಸ್​ಎಲ್​ಸಿ ಪರೀಕ್ಷೆ ಸಮಯದಲ್ಲೂ ಪ್ರಕಾಶನೇ ಕರೆದುಕೊಂಡು ಹೋಗಿ ಕರೆದುಕೊಂಡು ಬರ್ತಿದ್ದನಂತೆ. ಅಷ್ಟರ ಮಟ್ಟಿಗೆ ಮೀನಾಳ ಜೊತೆ ಪ್ರಕಾಶ್​ ಪ್ರೀತಿಯಲ್ಲಿ ಬಿದ್ದಿದ್ದ ಅನ್ನೋದು ಎಲ್ಲರಿಗೂ ಗೊತ್ತಿತ್ತು.

ಎಂಗೇಜ್​ಮೆಂಟ್​ ದಿನ ನಡೆದಿದ್ದೇನು? ಅವತ್ತೇ ಮೀನಾಳನ್ನ ಕೊಂದಿದ್ದೇಕೆ?

34 ವರ್ಷದ ಪ್ರಕಾಶ್​, 16ರ ಮೀನಾನ ಮದುವೆ ಮಾಡಿಕೊಡಿ ಅಂತ ಡಿಮ್ಯಾಂಡ್ ಮಾಡಿದ್ದ. ಮನೆಯವರು, ಮಗಳು ಓದುತ್ತಿದ್ದಾಳೆ ಇನ್ನೊಂದೆರಡು ವರ್ಷ ಬೇಡ, ಆಮೇಲೆ ಮದುವೆ ಮಾಡೋಣ ಅಂತಿದ್ದರು. ಆದರೆ ಪ್ರಕಾಶ್​ನಿಗೆ ಇನ್ನು ಎರಡು ವರ್ಷ ಕಾಯುವ ತಾಳ್ಮೆ ಇರಲಿಲ್ಲ. ಅದಾಗಲೇ ವಯಸ್ಸು 34 ವರ್ಷ. ಬಲವಂತ ಮಾಡಿ ಪ್ರೀತಿಗೆ ಒಪ್ಪಿಸಿದ್ದ. ಈ ಎರಡು ವರ್ಷದಲ್ಲಿ ಏನ್ ಬೇಕಾದರೂ ಆಗಬಹುದು ಎಂಬ ಆತಂಕಕ್ಕೆ ಬಿದ್ದಿದ್ದ. ಹಾಗಾಗಿಯೇ ಮನೆಯವರನ್ನ ಬಲವಂತವಾಗಿ ಒಪ್ಪಿಸಿ ನಿಶ್ಚಿತಾರ್ಥ​ಗೆ ಮುಹೂರ್ತ ಇಡಿಸಿದ್ದ. ನಿಗದಿಯಂತೆ ಗುರುವಾರ ಬೆಳಗ್ಗೆ ಮೀನಾ ಮತ್ತು ಪ್ರಕಾಶನ ನಿಶ್ಚಿತಾರ್ಥ ನಡೆಯಬೇಕಿತ್ತು. ಆಗಲೇ ನೋಡಿ ಅನಿರೀಕ್ಷಿತ ಬೆಳವಣಿಗೆಯೊಂದು ನಡೆದೋಗುತ್ತೆ.

16 ವರ್ಷದ ಮೀನಾಳಗೆ ಮದುವೆ ಮಾಡ್ತಿದ್ದಾರೆ ಅನ್ನೊ ಸುದ್ದಿ ಪೊಲೀಸರ ಕಿವಿಗೆ ಬೀಳುತ್ತೆ. ಅಪ್ರಾಪ್ತೆ ಬಾಲಕಿಗೆ ಬಲವಂತವಾಗಿ ಮದುವೆ ಮಾಡಿಸ್ತಿದ್ದಾರೆ ಅನ್ನೋ ವಿಚಾರ ಗಮನಕ್ಕೆ ಬರ್ತಿದ್ದಂತೆ ಸೋಮವಾರಪೇಟೆ ಪೊಲೀಸರು ಸ್ಥಳಕ್ಕೆ ಬಂದು ಅಡ್ಡಿ ಪಡಿಸಿದ್ದರು. ಹುಡುಗಿ ಮೇಜರ್ ಆಗೋವರೆಗೂ ವೇಯ್ಟ್​ ಮಾಡಿ, ಇಲ್ಲ ಅಂದ್ರೆ ಕಾನೂನಿನ ಪ್ರಕಾರ ಆ್ಯಕ್ಷನ್ ತಗೋಬೇಕಾಗುತ್ತದೆ ಅಂತ ವಾರ್ನ್ ಮಾಡಿ ಹೋದರು. ಅಷ್ಟಕ್ಕೇ ಆತಂಕಗೊಂಡ ಮೀನಾ ಮನೆಯವರು ಅವಸರ ಅವಸರದಲ್ಲಿ ನಿಶ್ಚಿತಾರ್ಥ ಮಾಡಿ ಮುಗಿಸಿದ್ರು.​

ಪ್ರಕಾಶ್​ಗೆ ಯಾರೋ ಉದ್ದೇಶಪೂರ್ವಕವಾಗಿ ನಿಶ್ಚಿತಾರ್ಥ ಕ್ಯಾನ್ಸಲ್ ಮಾಡಿಸಿದ್ರು ಅನ್ನೋ ಆಕ್ರೋಶ ಕಾಡೋಕೆ ಶುರು ಮಾಡ್ತು. ಆ ಕ್ಷಣಕ್ಕೆ ಮನೆಯವರ ಮಾತಿಗೆ ಬೆಲೆಕೊಟ್ಟು ಸುಮ್ಮನಾದ ಪ್ರಕಾಶ್, ಮನೆಯವರನ್ನ ಕರೆದುಕೊಂಡು ತಮ್ಮ ಮನೆಗೆ ವಾಪಸ್ ಹೋಗಿದ್ದ. ಹೋಗುವಾಗ ಮೀನಾಳ ಸಹೋದರರಿಬ್ಬರನ್ನ ಜೊತೆಯಲ್ಲಿ ಕರೆದುಕೊಂಡು ಹೋಗಿದ್ದ. ಆಮೇಲೆ ಸಂಜೆ ವೇಳೆಗೆ ಮೀನಾ ಮನೆಗೆ ವಾಪಸ್ ಬಂದಿದ್ದ ಪ್ರಕಾಶ್, ಕೋವಿ ಹಾಗೂ ಮರ ಕಡಿಯುವ ಮಚ್ಚು ಹಿಡಿದು ಬಂದಿದ್ದ. ಬಂದವನೇ ಮೀನಾಳ ಜೊತೆ ಜಗಳ ತೆಗೆದಿದ್ದಾನೆ. ನೀನೇ ಪೊಲೀಸರಿಗೆ ಹೇಳಿದ್ದಿಯಾ ಅಂತ ಖ್ಯಾತೆ ತೆಗೆದು ಹಲ್ಲೆ ಮಾಡಿದ್ದಾನೆ. ಮಗಳನ್ನ ಹೊಡಿತಿದ್ದಾನೆ ಅಂತ ಅಡ್ಡ ಹೋದ ಮೀನಾಳ ತಾಯಿ ಮೇಲೂ ಮಚ್ಚು ಬೀಸಿದ್ದ. ಈ ವೇಳೆ ತಾಯಿಯ ಕೈ ತುಂಡಾಗಿತ್ತು. ಅಡ್ಡ ಬಂದ ಮೀನಾಳ ತಂದೆ ಮೇಲೂ ಹಲ್ಲೆ ಮಾಡಿದ್ದ.

ಇದನ್ನೂ ಓದಿ: ನಿಶ್ಚಿತಾರ್ಥ ಮುಗಿಸಿ ಮನೆಗೆ ಹೋಗಿದ್ದ.. ವಾಪಸ್ ಬಂದು ಕತ್ತೇ ಕತ್ತರಿಸಿದ; ಅಷ್ಟಕ್ಕೂ ಗುಡ್ಡದಲ್ಲಿ ನಡೆದಿದ್ದೇನು?

ಪ್ರಕಾಶನ ಆರ್ಭಟಕ್ಕೆ ತಂದೆ-ತಾಯಿ ಇಬ್ಬರೂ ಗಾಯಗೊಂಡು ಮನೆಯೊಳಗೆ ಬಿದ್ದರೇ, ಮೀನಾಳನ್ನ ಎಳೆದುಕೊಂಡು ಹೊರಹೋಗಿದ್ದ. ಇನ್ನು ಮನೆಯಲ್ಲಿ ತಂದೆ-ತಾಯಿ ಹಾಗೂ ಮೀನಾ ಬಿಟ್ಟರೇ ಬೇರೆ ಯಾರೂ ಇರಲಿಲ್ಲವಂತೆ. ಗಾಯಗೊಂಡು ಮನೆಯೊಳಗೆ ತಂದೆ-ತಾಯಿ ಬಿದ್ದಿದ್ದರೆ ಮನೆ ಹೊರಗೆ ಮೀನಾಳ ಆರ್ತನಾದ ಅಪ್ಪ-ಅಮ್ಮನಿಗೆ ಕೇಳಿಸಿತ್ತಂತೆ. ಮೀನಾಳ ತಲೆ ತುಂಡರಿಸಿದ್ದ ಪ್ರಕಾಶ್, ರಾತ್ರಿ ಮನೆಗೆ ಹೋಗಿದ್ದಾನೆ. ಕತ್ತಲಲ್ಲಿ ಮಗನನ್ನ ನೋಡಿ ತಾಯಿ ಗಂಗವ್ವ ಬೆಚ್ಚಿಬಿದ್ದಿದ್ದಳು. ಏನಾಯ್ತು ಮಗ ಅಂತ ಕೇಳಿದ್ರೂ ಏನೂ ಇಲ್ಲ, ನೀನು ಹುಷಾರು ಅಂತ ಹೇಳಿ ಹೋದನಂತೆ.

ಆದರೆ ಏನಾಯ್ತು ಅನ್ನೋದರ ಬಗ್ಗೆ ಗಂಗವ್ವಳಿಗೆ ಗೊತ್ತಾಗಿಲ್ವಂತೆ. ಪ್ರಕಾಶ್ ತಂದೆಗೂ ಈ ಬಗ್ಗೆ ಗೊತ್ತಾಗಿಲ್ಲ. ಆದರೇ ಮಗ ಮಾಡಿದ ಕೃತ್ಯವನ್ನ ಮಾತ್ರ ಹೆತ್ತಪ್ಪ ಸಹಿಸೋಕೆ ಆಗ್ದೇ ಕಣ್ಣೀರು ಸುರಿಸಿದ್ದಾರೆ. ಇನ್ನು ಈ ಘಟನೆ ನಡೆದಾಗ ಮೀನಾಳ ಸಹೋದರರಿಬ್ಬರು ಮನೆಯಲ್ಲಿ ಇರಲಿಲ್ಲ. ನಿಶ್ಚಿತಾರ್ಥ​ ಕ್ಯಾನ್ಸಲ್ ಆದ್ಮೇಲೆ ಖುದ್ದು ಪ್ರಕಾಶನೇ, ಸಹೋದರರನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದ. ತನ್ನ ಸಹೋದರರ ಜೊತೆ ಕ್ರಿಕೆಟ್ ಆಡೋಕೆ ಕಳಿಹಿಸಿದ್ದ. ಮೀನಾಳ ರುಂಡ ಕತ್ತರಿಸಿದ ಪ್ರಕಾಶ ಕಾಣೆಯಾಗಿದ್ದಾನೆ. ಮೀನಾಳ ದೇಹವನ್ನ ಮನೆ ಮುಂದೆಯೇ ಗುಡ್ಡದಲ್ಲಿ ಬಿಟ್ಟು ರುಂಡದೊಂದಿಗೆ ಎಸ್ಕೇಪ್ ಆಗಿದ್ದಾನೆ. ಈ ಸಂಬಂಧ ಸೋಮವಾರಪೇಟೆ ಪೊಲೀಸರು ಕೇಸ್ ದಾಖಲಿಸಿಕೊಂಡು, ಪ್ರಕಾಶ್​ಗಾಗಿ ಹುಡುಕಾಟ ನಡೆಸಿದ್ದಾರೆ. ಬಾಳಬೇಕಿದ್ದ ಹೂವೊಂದು ಅರಳುವ ಮುನ್ನವೇ ಬಾಡಿ ಹೋಗಿದೆ. ಪ್ರೀತಿಸಿದವಳ ಜೊತೆ ಭವಿಷ್ಯದ ಕನಸು ಕಂಡಿದ್ದವನು ಹೆಣವಾಗಿದ್ದೇ ದುರಂತ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

SSLC ವಿದ್ಯಾರ್ಥಿನಿ ತಲೆ ಕತ್ತರಿಸಿ ಕೊಂದಿದ್ದ ಕೇಸ್​​​ಗೆ ಬಿಗ್​ ಟ್ವಿಸ್ಟ್​​.. ಅಸಲಿಗೆ ನಡೆದಿದ್ದೇನು?

https://newsfirstlive.com/wp-content/uploads/2024/05/mdk4.jpg

Load More