/newsfirstlive-kannada/media/post_attachments/wp-content/uploads/2024/10/KOHLI-3.jpg)
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಪುತ್ರಿಯ ಹೆಸರು ವಾಮಿಕಾ, ಪುತ್ರ ಅಕಾಯ್. ದೇಶದ ಟಾಪ್ ಸ್ಟಾರ್ ಸೆಲೆಬ್ರಿಟಿ ಆಗಿರುವ ಇವರು, ತಮ್ಮ ಮಕ್ಕಳ ಲಾಲನೆ, ಪಾಲನೆ ವಿಚಾರದಲ್ಲೂ ಇತರರಿಗೆ ಮಾದರಿ ಆಗಿದ್ದಾರೆ.
ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಮಕ್ಕಳಿಗಾಗಿ ತಾವು ಏನೆಲ್ಲ ಮಾಡ್ತೀವಿ ಅನ್ನೋದನ್ನು ಅನುಷ್ಕಾ ಶರ್ಮಾ ತಿಳಿಸಿದ್ದಾರೆ. ಅನುಷ್ಕ ಶರ್ಮಾ ತಮ್ಮ ಮಕ್ಕಳಿಗೆ ಖುದ್ದು ಅಡುಗೆ ಮಾಡಿ ತಿನ್ನಿಸ್ತಾರಂತೆ. ಅನುಷ್ಕಾ ಶರ್ಮಾ ತಮ್ಮ ಅಮ್ಮನಿಂದ ಬಾಲ್ಯದಲ್ಲಿ ಮಕ್ಕಳಿಗೆ ನೀಡುವ ಸಾಂಪ್ರದಾಯಿಕ ಆಹಾರ, ತಿಂಡಿ ತಿನಿಸುಗಳ ಬಗ್ಗೆ ಜೊತೆಗೆ ಅದನ್ನು ಮಾಡುವುದು ಹೇಗೆ ಎಂದು ತಿಳಿದುಕೊಳ್ತಿದ್ದಾರೆ. ಅದರಂತೆ ಬಿಡುವು ಸಿಕ್ಕಾಗ ಮನೆಯಲ್ಲಿ ಮಾಡಿ ತಿನ್ನಿಸುತ್ತಿದ್ದಾರೆ.
ಮುಖ್ಯವಾಗಿ ಯಾವುದರ ಮೇಲೆ ಗಮನ
ಅನುಷ್ಕಾ ಮತ್ತು ವಿರಾಟ್ ಮಕ್ಕಳ ದಿನಚರಿಯ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ. ಮಕ್ಕಳಿಬ್ಬರು ಸರಿಯಾದ ಸಮಯಕ್ಕೆ ಊಟ ಮಾಡ್ತಾರೋ ಇಲ್ಲವೋ ಎಂದು ನೋಡುತ್ತಾರೆ. ಸರಿಯಾದ ದೈಹಿಕ ಚಟುವಟಿಕೆ ಮಾಡ್ತಿದ್ದಾರಾ? ಇಲ್ಲವೇ? ಅನ್ನೋದನ್ನು ತಿಳಿದುಕೊಳ್ತಾರೆ. ಊಟದಿಂದ ಮಲಗುವವರೆಗಿನ ಚಟುವಟಿಕೆಗಳ ವೇಳಾಪಟ್ಟಿಯನ್ನು ಒಳಗೊಂಡಿದೆ. ಇದನ್ನು ಮಾಡುವುದರಿಂದ ಮಕ್ಕಳು ನಿರ್ದಿಷ್ಟ ದಿನಚರಿಯನ್ನು ಅನುಸರಿಸುತ್ತಾರೆ ಎಂದು ಸಂದರ್ಶನದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:Hong Kong Sixes: ಕೊನೆ ಓವರ್ನಲ್ಲಿ 8 ಬಾಲ್, ಎಲ್ಲಾ ವಿಕೆಟ್ ಬಿದ್ದ ಮೇಲೆ ಸಿಂಗಲ್ ಸೈಡ್ ಬ್ಯಾಟಿಂಗ್..!
ಈ ರೀತಿಯ ಆಹಾರವನ್ನು ಮಕ್ಕಳಿಗೆ ನೀಡಿ
ಮನೆಯಲ್ಲೇ ಮಕ್ಕಳಿಗೆ ಆಹಾರ ತಯಾರಿಸುತ್ತಿದ್ದರೆ ಅದು ಶಕ್ತಿಯುತ ಮತ್ತು ಪೋಷಕಾಂಶಗಳಿಂದ ಇರುವಂತೆ ಕಾಳಜಿ ವಹಿಸಬೇಕು. ಧಾನ್ಯಗಳು, ಗಡ್ಡೆ ಗೆಣಸುಗಳನ್ನು ಬಳಸಿ ನಿತ್ಯ ಆಹಾರ ತಯಾರಿಸಬಹುದು. ತರಕಾರಿಗಳು ಮತ್ತು ಹಣ್ಣುಗಳು, ದ್ವಿದಳ ಧಾನ್ಯಗಳು ಮತ್ತು ಬೀಜಗಳನ್ನು ನೀಡಬೇಕು. ವೈದ್ಯರ ಸಲಹೆಯಂತೆ ನಾನ್ವೆಜ್ ಕೂಡ ನೀಡಬಹುದು
ಮಕ್ಕಳ ಆಹಾರದಲ್ಲಿ ಈ ತರಕಾರಿ ಸೇರಿಸಿ
ಮಕ್ಕಳ ಆಹಾರದಲ್ಲಿ ಸಾಧ್ಯವಾದಷ್ಟು ತರಕಾರಿಗಳು, ಹಣ್ಣುಗಳು, ಧಾನ್ಯಗಳು ಮತ್ತು ಡೈರಿ ಉತ್ಪನ್ನಗಳನ್ನು ಸೇರಿಸಿ. ಬಾಳೆಹಣ್ಣು, ಆವಕಾಡೊ, ಪೇರಳೆ, ಕುಂಬಳಕಾಯಿ, ಬಟಾಣಿ, ಓಟ್ಸ್ ಅಥವಾ ಮೊಸರು ತಿನ್ನಬಹುದು. ಅದ್ಯಾವುದೂ ಅವರಿಗೆ ಅಲರ್ಜಿ ಅಲ್ಲ.
ಇದನ್ನೂ ಓದಿ:ಫಸ್ಟ್ ಬಾಲ್ ಟು ಲಾಸ್ಟ್ ಬಾಲ್.. ಮೊದಲ 10 ಬಾಲ್ನಲ್ಲಿ ಸೂರ್ಯನ ಆಟ ಹೆಂಗಿರುತ್ತೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ