newsfirstkannada.com

×

Hong Kong Sixes: ಕೊನೆ ಓವರ್​ನಲ್ಲಿ 8 ಬಾಲ್​, ಎಲ್ಲಾ ವಿಕೆಟ್ ಬಿದ್ದ ಮೇಲೆ ಸಿಂಗಲ್ ಸೈಡ್ ಬ್ಯಾಟಿಂಗ್..!

Share :

Published October 9, 2024 at 12:57pm

    Hong Kong Sixes ರೂಲ್ಸ್ ಭಾರೀ ವಿಚಿತ್ರ, ಹೆಂಗಿದೆ?

    2005ರಲ್ಲಿ ಟ್ರೋಫಿ ಗೆದ್ದು ಬೀಗಿದ್ದ ಭಾರತ ತಂಡ

    ಟೂರ್ನಿಯಲ್ಲಿ ಕಮಾಲ್ ಮಾಡಿದ್ದರು ಕನ್ನಡದ ಕಣ್ಮಣಿ

ಎಂಟರ್​​ಟೈನ್​​​​ಮೆಂಟ್​​ನ ರಾಜ, ಕ್ರಿಕೆಟ್​ ಪ್ರೇಮಿಗಳ ಪಾಲಿನ ಫೇವರಿಟ್​​​​, ಪ್ರತಿ ಎಸೆತದಲ್ಲೂ ಫುಲ್ ಕಿಕ್​ ನೀಡುವ ಹಾಂಗ್ ಕಾಂಗ್ ಸಿಕ್ಸರ್ಸ್​ ಟೂರ್ನಿ ಮತ್ತೆ ಧೂಳೆಬ್ಬಿಸಲು ರೆಡಿಯಾಗಿದೆ. T20 ಕ್ರಿಕೆಟ್ ಅಂದ್ರೆ PURE ಎಂಟರ್​​ಟೈನ್​ಮೆಂಟ್​. ಫ್ಯಾನ್ಸ್​​ ಮೊದಲ ಎಸೆತದಿಂದ ಕೊನೆ ಎಸೆತದ ತನಕ ಮನರಂಜನೆ ಅಲೆಯಲ್ಲಿ ತೇಲಾಡ್ತಾರೆ. ಆದ್ರೀಗ ಇದಕ್ಕಿಂತ ಸ್ಪೀಡ್​​, ಅನ್​​ಪ್ರೆಡಿಕ್ಟ್​​ ಹಾಗೂ ಮೋಸ್ಟ್ ಥ್ರಿಲ್ಲಿಂಗ್​ ಗೇಮ್​​​ವೊಂದಿದೆ. ಅದುವೇ ಹಾಂಗ್ ಕಾಂಗ್​ ಸಿಕ್ಸಸ್ ಟೂರ್ನಮೆಂಟ್​​. ವಿಭಿನ್ನತೆಗೆ ಹೆಸರುವಾಸಿಯದ ಹಾಂಗ್​​​ ಕಾಂಗ್ ಸೂಪರ್ ಸಿಕ್ಸಸ್​​​ ಮತ್ತೆ ಬಂದಿದ್ದು, ಫ್ಯಾನ್ಸ್​​ಗೆ ಫುಲ್​​ ಕಿಕ್​​ ಸಿಗಲಿದೆ.

ಸಿಕ್ಸರ್​​​-ಬೌಂಡ್ರಿಗಳು ಮೈನವಿರೇಳಿಸೋ ಸೂಪರ್​​​​​​ ಹಾಂಗ್​​ ಕಾಂಗ್​ ಸಿಕ್ಸಸ್​ ಟೂರ್ನಿ, 7 ವರ್ಷಗಳ ಬಳಿಕ ಮತ್ತೆ ರಂಜಿಸಲು ಸಜ್ಜಾಗಿದೆ ನವೆಂಬರ್​​​​​​​​​ 1 ರಿಂದ ಟೂರ್ನಿ ಆರಂಭಗೊಳ್ಳಲಿದ್ದು, 12 ತಂಡಗಳು ಇರಲಿವೆ. ವಿಶ್ವದ ಬಲಿಷ್ಠ ತಂಡಗಳಾದ ಪಾಕಿಸ್ತಾನ, ಇಂಗ್ಲೆಂಡ್​​, ಆಫ್ರಿಕಾ, ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ತಂಡಗಳ ಕಾದಾಟಕ್ಕೆ ಸಾಕ್ಷಿಯಾಗಲಿದೆ.

ಇದನ್ನೂ ಓದಿ:ಫಸ್ಟ್​ ಬಾಲ್ ಟು ಲಾಸ್ಟ್​ ಬಾಲ್.. ಮೊದಲ 10 ಬಾಲ್​ನಲ್ಲಿ ಸೂರ್ಯನ ಆಟ ಹೆಂಗಿರುತ್ತೆ..?

ದಶಕದ ಬಳಿಕ ಟೀಮ್ ಇಂಡಿಯಾ ಅಖಾಡಕ್ಕೆ ಎಂಟ್ರಿ
ಟೀಮ್ ಇಂಡಿಯಾ.. ವಿಶ್ವ ಕ್ರಿಕೆಟ್​​ನ ವಿದ್ವಂಸಕಾರಿ ತಂಡ. ಇದೀಗ ಈ ಚಾಂಪಿಯನ್​ ತಂಡವೇ ಹಾಂಗ್​​​​ ಕಾಂಗ್ ಸಿಕ್ಸಸ್​​ ಟೂರ್ನಮೆಂಟ್​​ಗೆ ರಿ-ಎಂಟ್ರಿಕೊಟ್ಟಿದೆ. 2012ರಲ್ಲಿ ಭಾರತ ತಂಡ ಕೊನೆ ಬಾರಿ ಮನರಂಜನೆಯ ಮದವೇರಿಸೋ ಈ ಟೂರ್ನಿಯಲ್ಲಿ ಭಾಗವಹಿಸಿತ್ತು. 20107ರ ಆವೃತ್ತಿಯಲ್ಲಿ ಆಡಿರಲಿಲ್ಲ. ಇದೀಗ​​ ಟೀಮ್ ಇಂಡಿಯಾ ಎಂಟ್ರಿಯಿಂದ, ಹಾಂಗ್​​​ ಕಾಂಗ್​ ಸಿಕ್ಸಸ್​​​​​​ ಟೂರ್ನಿ ಬಗ್ಗೆ ಇನ್ನಿಲ್ಲದ ಕೌತುಕತೆ ಹುಟ್ಟಿದೆ.

2005 ರಲ್ಲಿ ಚಾಂಪಿಯನ್​ ಪಟ್ಟಕ್ಕೇರಿದ್ದ ಭಾರತ
ಹಾಂಗ್​ ಕಾಂಗ್​ ಸಿಕ್ಸಸ್​ ಟೂರ್ನಮೆಂಟ್​​​​​ಗೆ 32 ವರ್ಷಗಳ ಇತಿಹಾಸವಿದೆ. ಅಪಾರ ಜನಮನ್ನಣೆ ಗಳಿಸಿದ ಈ ಟೂರ್ನಿಯಲ್ಲಿ ಭಾರತ ತಂಡ 2005 ರಲ್ಲಿ ಟ್ರೋಫಿ ಗೆದ್ದು ಸಂಭ್ರಮಿಸ್ತು. ದಿಗ್ಗಜ ಸಚಿನ್ ತೆಂಡುಲ್ಕರ್​​, ಮಹೇಂದ್ರ ಸಿಂಗ್​ ಧೋನಿ ಹಾಗೂ ಕನ್ನಡದ ಕಣ್ಮಣಿ ಅನಿಲ್ ಕುಂಬ್ಳೆಯಂತ ಸಾರ್ವಕಾಲಿಕ ಶ್ರೇಷ್ಠ ಆಟಗಾರರು ಈ ಟೂರ್ನಿಯಲ್ಲಿ ಆಡಿ ಮೆರೆದಾಡಿದ್ದಾರೆ.

ಏನಿದು ಹಾಂಗ್​​​ ಕಾಂಗ್ ಸಿಕ್ಸಸ್?
ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಮೆಂಟ್​​ ಎಲ್ಲ ಟೂರ್ನಮೆಂಟ್​​​​​​​​​​ಗಳಂತಲ್ಲ. ಇದು ತೀರ ಭಿನ್ನ. EXPLOSIVE ಬ್ಯಾಟಿಂಗ್​​​, ಅಗ್ರೆಸ್ಸಿವ್ ಬೌಲಿಂಗ್​​ ಹಾಗೂ ಶಾರ್ಪ್​ ಫೀಲ್ಡಿಂಗ್​​ ಫ್ಯಾನ್ಸ್​ಗೆ ಸಖತ್ ಥ್ರಿಲ್ ಕೊಡುತ್ತೆ. ಕ್ಷಣ ಕ್ಷಣಕ್ಕೂ ಟ್ವಿಸ್ಟ್​​​ ಆ್ಯಂಡ್ ಟರ್ನ್​ ಇರುತ್ತೆ. ಇಲ್ಲಿ ಬೇಸರ ಅನ್ನೋದೇ ಇರೋದಿಲ್ಲ.

ಇದನ್ನೂ ಓದಿ:IND vs BAN T20: ಸಂಜು ಸ್ಯಾಮ್ಸನ್​​ಗೆ ಇಂದು ಚಾನ್ಸ್​ ಸಿಗೋದು ಡೌಟ್​; ಓಪನಿಂಗ್ ಗೇಮ್ ಪ್ಲಾನ್ ಚೇಂಜ್..!

ಹಾಂಗ್ ಕಾಂಗ್​​ ಸಿಕ್ಸಸ್​​​ ಫಾರ್ಮೆಟ್

  • ಒಂದು ತಂಡದಲ್ಲಿ ಕೇವಲ 6 ಪ್ಲೇಯರ್ಸ್​ಗೆ ಅವಕಾಶ
  • ಪ್ರತಿ ತಂಡಕ್ಕೆ 5 ಓವರ್​​​ ಆಡುವ ಅವಕಾಶ
  • ಪಂದ್ಯದ ಅವಧಿ 45 ನಿಮಿಷ
  • ಫೈನಲ್​ ಪಂದ್ಯದಲ್ಲಿ 1 ಓವರ್​​​​ಗೆ 8 ಬಾಲ್​​
  • 31 ರನ್ ಗಳಿಸಿದ್ರೆ ಬ್ಯಾಟ್ಸ್​​ಮನ್​​ ನಿವೃತ್ತಿ ಆಗಬೇಕು
  • ಉಳಿದ ಬ್ಯಾಟರ್ಸ್​ ಔಟಾದ್ರೆ ಮತ್ತೆ ಆಡಬಹುದು
  • ಕೀಪರ್​ ಬಿಟ್ಟು ಎಲ್ಲರೂ 1 ಓವರ್​​​ ಬೌಲಿಂಗ್ ಮಾಡಬೇಕು
  • ವೈಡ್​ ಅಥವಾ ನೋ ಬಾಲ್ಸ್​ ಹಾಕಿದ್ರೆ 2 ಪೆನಾಲ್ಟಿ ರನ್

ಪ್ರತಿ ಎಸೆತದಲ್ಲೂ ಭರ್ಜರಿ ಮನರಂಜನೆ ನೀಡೋ, ಸಿಕ್ಸರ್​ಗಳ ಸುನಾಮಿ ಸೃಷ್ಟಿಸೋ ಟೂರ್ನಿ, 7 ವರ್ಷಗಳ ಬಳಿಕ ಮತ್ತೆ ಬಂದಿದೆ. ಈ ಬಾರಿ ಭಾರತ ತಂಡವು ಭಾಗವಹಿಸ್ತಿರೋದು ಇನ್ನಿಲ್ಲದ ಕ್ರೇಜ್ ಹುಟ್ಟುಹಾಕಿದೆ. ಆದರೆ ಆರು ಜನರ ಪೈಕಿ ಟೀಂ ಇಂಡಿಯಾದಲ್ಲಿ ಯಾರು ಆಡ್ತಾರೆ? ಹೇಗೆಲ್ಲಾ ರಂಜಿಸ್ತಾರೆ ಅನ್ನೋದನ್ನ ಕಾದುನೋಡೋಣ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Hong Kong Sixes: ಕೊನೆ ಓವರ್​ನಲ್ಲಿ 8 ಬಾಲ್​, ಎಲ್ಲಾ ವಿಕೆಟ್ ಬಿದ್ದ ಮೇಲೆ ಸಿಂಗಲ್ ಸೈಡ್ ಬ್ಯಾಟಿಂಗ್..!

https://newsfirstlive.com/wp-content/uploads/2024/10/Hardik-Pandya_Surya.jpg

Load More