/newsfirstlive-kannada/media/post_attachments/wp-content/uploads/2024/06/DRAVID-KOHLI-ROHIT.jpg)
2024ರ ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಸಾಲು ಸಾಲು ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಈ ಫಾರ್ಮೇಟ್ಗೆ ಗುಡ್ ಬೈ ಹೇಳುತ್ತಿದ್ದಾರೆ. ನಿನ್ನೆಯಷ್ಟೇ ಟೀಮ್ ಇಂಡಿಯಾ ದಿಗ್ಗಜ ವಿರಾಟ್ ಕೊಹ್ಲಿ ಮತ್ತು ಕ್ಯಾಪ್ಟನ್ ರೋಹಿತ್ ಶರ್ಮಾ ಅಂತರಾಷ್ಟ್ರೀಯ ಟಿ20 ಕ್ರಿಕೆಟ್ಗೆ ಗುಡ್ ಬೈ ಹೇಳಿದ್ರು. ಈಗ ಜಡೇಜಾ ಟಿ20 ಕ್ರಿಕೆಟ್ನಿಂದ ನಿವೃತ್ತಿಯಾಗಿದ್ದಾರೆ. ಇಷ್ಟು ಬೇಗ ಸೀನಿಯರ್ಸ್ ಟಿ20 ಫಾರ್ಮೇಟ್ನಿಂದ ರಿಟೈರ್ ಆಗಲು ಕಾರಣವೇನು ಅನ್ನೋ ಚರ್ಚೆ ಶುರುವಾಗಿದೆ.
ಮೂಲಗಳ ಪ್ರಕಾರ ಟೀಮ್ ಇಂಡಿಯಾ ಮುಖ್ಯ ಕೋಚ್ ಸ್ಥಾನದಲ್ಲಿ ರಾಹುಲ್ ದ್ರಾವಿಡ್ ಅವರು ಕೆಳಗಿಳಿಯುತ್ತಿದ್ದಾರೆ. ಇವರ ಸ್ಥಾನಕ್ಕೆ ಗೌತಮ್ ಗಂಭೀರ ಕೋಚ್ ಆಗಿ ಬರಲಿದ್ದಾರೆ. ಅಷ್ಟೇ ಮೂರು ಫಾರ್ಮೇಟ್ಗೂ ಪ್ರತ್ಯೇಕ ಆಟಗಾರರನ್ನು ಆಯ್ಕೆ ಮಾಡೋ ಪ್ಲಾನ್ ಗಂಭೀರ್ ಅವರದ್ದು. ಜತೆಗೆ ಕೊಹ್ಲಿ, ರೋಹಿತ್ ವೈಟ್ ಬಾಲ್ ಕ್ರಿಕೆಟ್ನಿಂದ ಹೊರ ಹೋಗಬೇಕು ಅನ್ನೋ ಡಿಮ್ಯಾಂಡ್ ಕೂಡ ಇದೆಯಂತೆ. ಹಾಗಾಗಿ ರೋಹಿತ್, ಕೊಹ್ಲಿ ಟಿ20 ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಖುದ್ದು ಕ್ಯಾಪ್ಟನ್ ರೋಹಿತ್ ಶರ್ಮಾ ಕೂಡ ಪ್ರತಿಕ್ರಿಯೆ ಕೊಟ್ಟಿದ್ದಾರೆ. ನಾನು ಟಿ20 ಕ್ರಿಕೆಟ್ ಫಾರ್ಮೆಟ್ನಿಂದ ರಿಟೈರ್ ಆಗೋ ಯೋಚಕೆ ಮಾಡಿರಲಿಲ್ಲ. ಆದರೆ, ಸಂದರ್ಭ ಹಾಗೇ ಮಾಡಿಬಿಡ್ತು. ಟಿ20 ವಿಶ್ವಕಪ್ ಗೆಲ್ಲುವುದಕ್ಕಿಂತ ಖುಷಿ ವಿಚಾರ ಮತ್ತೊಂದಿಲ್ಲ. ಹಾಗಾಗಿ ಟಿ20 ಕ್ರಿಕೆಟ್ ಫಾರ್ಮೆಟ್ಗೆ ಗುಡ್ ಬೈ ಹೇಳಿದ್ದೇನೆ ಎಂದು ಬೇಸರ ಹೊರಹಾಕಿದ್ರು. ಜತೆಗೆ ಮುಂದೆ ಐಪಿಎಲ್ ಆಡುವುದಾಗಿ ಹೇಳಿದ್ರು. ಹಾಗಾಗಿ ಐಪಿಎಲ್ ಆಡೋಕೆ ರೆಡಿ ಇರೋ ಇವರು ಅಂತರಾಷ್ಟ್ರೀಯ ಟಿ20 ಕ್ರಿಕೆಟ್ಗೆ ನಿವೃತ್ತಿ ಘೋಷಿಸಲು ಗಂಭೀರ್ ಕಾರಣ ಅನ್ನೋ ಟಾಕ್ ಕೂಡ ಇದೆ.
ಇದನ್ನೂ ಓದಿ:ಕ್ರಿಕೆಟ್ ನಿವೃತ್ತಿ ಬೆನ್ನಲ್ಲೇ ಗಂಭೀರ್ ವಿರುದ್ಧ ರೋಹಿತ್ ಬಹಿರಂಗ ಅಸಮಾಧಾನ.. ಅಂಥದ್ದೇನಾಯ್ತು?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ