ರೋಹಿತ್ ಶರ್ಮಾ ವಿರುದ್ಧ ಆಕ್ರೋಶ ಹೊರಹಾಕಿದ್ದ ಕೊಹ್ಲಿ ಫ್ಯಾನ್ಸ್
ಕೊಹ್ಲಿ ಕ್ಯಾಪ್ಟನ್ಸಿಯನ್ನು ಬಲವಂತವಾಗಿ ಕಿತ್ತುಕೊಂಡಿದ್ರಾ ರೋಹಿತ್?
ಅಂದು ಮಾಡಿದ ಕರ್ಮಕ್ಕೆ ರೋಹಿತ್ ಐಪಿಎಲ್ ಕ್ಯಾಪ್ಟನ್ಸಿ ಹೋಯ್ತಾ?
2021ರಲ್ಲಿ ಟೀಮ್ ಇಂಡಿಯಾದ ನಾಯಕತ್ವದಿಂದ ವಿರಾಟ್ ಕೊಹ್ಲಿ ಕೆಳಗಿಳಿದಿದ್ದರು. ಇಂದಿಗೂ ವಿರಾಟ್ ಕೊಹ್ಲಿಯನ್ನು ಉದ್ದೇಶ ಪೂರ್ವಕವಾಗಿಯೇ ನಾಯಕತ್ವದಿಂದ ಕೆಳಗಿಳಿಸಲಾಗಿದೆ ಅನ್ನೋ ವಿವಾದ ಮುನ್ನಲೆಗೆ ಬರುತ್ತಲೇ ಇದೆ. ಇದಕ್ಕೆ ಕಾರಣ ಅಂದಿನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ರೋಹಿತ್ ಶರ್ಮಾ ಅನ್ನೋ ಮಾತುಗಳು ಕೇಳಿ ಬಂದಿವೆ.
ಇಷ್ಟೇ ಅಲ್ಲ, ಗಂಗೂಲಿ ಕುತಂತ್ರದಿಂದ ಕೊಹ್ಲಿ ಬಲವಂತವಾಗಿ ನಾಯಕತ್ವದಿಂದ ತೆಗೆದು ಹಾಕಲಾಯ್ತು. ರೋಹಿತ್ಗಾಗಿ ಗಂಗೂಲಿ ಈ ನಿರ್ಧಾರ ಕೈಗೊಂಡರೂ ಎಂಬ ವಿಚಾರ ಪದೇ ಪದೇ ಚರ್ಚೆಗೆ ಬರುತ್ತಿದೆ. ಈ ಬಗ್ಗೆ ಸೌರವ್ ಗಂಗೂಲಿ ಎಷ್ಟು ಬಾರಿ ಸ್ಪಷ್ಟನೆ ನೀಡಿದ್ರೂ ವಿವಾದ ಶಮನವಾಗಿಲ್ಲ. ಬದಲಿಗೆ ಕೊಹ್ಲಿ ಫ್ಯಾನ್ಸ್ ರೋಹಿತ್ ಶರ್ಮಾ ಮತ್ತು ಗಂಗೂಲಿ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ.
Rohit Sharma : Captaincy Saga . A short movie . Must watch it 🔥
NATION SUPPORTS HARDIK pic.twitter.com/QE9WZAKLPL
— Kohlified. (@123perthclassic) March 28, 2024
ಇತ್ತೀಚೆಗೆ ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸಿ ಹಾರ್ದಿಕ್ ಪಾಂಡ್ಯಗೆ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ಸಿ ಪಟ್ಟ ಕಟ್ಟಲಾಗಿದೆ. ಇದಕ್ಕೆ ಹಾರ್ದಿಕ್ ವಿರುದ್ಧ ರೋಹಿತ್ ಫ್ಯಾನ್ಸ್ ಆಕ್ರೋಶ ಹೊರಹಾಕಿದ್ದಾರೆ. ಈಗ ಇದಕ್ಕೆ ಕೊಹ್ಲಿ ಫ್ಯಾನ್ಸ್ ಎಂಟ್ರಿ ನೀಡಿದ್ದು, ವಿರಾಟ್ಗೆ ಟಿ20 ತಂಡದ ನಾಯಕತ್ವ ಬಿಟ್ಟುಕೊಡಲು ಇಷ್ಟವಿರಲಿಲ್ಲ. ಆದರೆ ಅವರಿಂದ ಟಿ20 ನಾಯಕತ್ವವನ್ನು ಕಸಿದುಕೊಳ್ಳಲಾಯಿತು. ಈ ಬೇಸರದಿಂದಲೇ ಕೊಹ್ಲಿ ಟೆಸ್ಟ್ ಮಾದರಿ ನಾಯಕತ್ವವನ್ನೂ ತ್ಯಜಿಸಿದರು ಎಂದಿದ್ದಾರೆ. ಅದರಲ್ಲೂ ರೋಹಿತ್ ಮೂರು ಫಾರ್ಮೇಟ್ಗೂ ನಾನೇ ಕ್ಯಾಪ್ಟನ್ ಆಗಿರಬೇಕು ಎಂದು ಪಟ್ಟು ಹಿಡಿದಿದ್ದರು. ಅಂದು ಕೊಹ್ಲಿಗೆ ರೋಹಿತ್ ಮೋಸ ಮಾಡಿದ್ರು. ಈಗ ರೋಹಿತ್ಗೆ ಹಾರ್ದಿಕ್ ಮಾಡಿದ್ದಾರೆ ಎಂದು ಟ್ರೋಲ್ ಮಾಡಲಾಗುತ್ತಿದೆ.
ಇದನ್ನೂ ಓದಿ: ‘ನಾಚಿಕೆ ಆಗಬೇಕು ನಿನಗೆ..’- ಹಾರ್ದಿಕ್ ವಿರುದ್ಧ ಮುಂಬೈ ಅಭಿಮಾನಿಗಳು ಆಕ್ರೋಶ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ