newsfirstkannada.com

‘ನಾಚಿಕೆ ಆಗಬೇಕು ನಿನಗೆ..’- ಹಾರ್ದಿಕ್​​ ವಿರುದ್ಧ ಮುಂಬೈ ಅಭಿಮಾನಿಗಳು ಆಕ್ರೋಶ!

Share :

Published March 28, 2024 at 4:40pm

Update March 28, 2024 at 4:35pm

  ಸನ್​ರೈಸರ್ಸ್​ ಹೈದರಾಬಾದ್​​ ವಿರುದ್ಧ ಹೀನಾಯ ಸೋಲು

  ಹಾರ್ದಿಕ್​ ನಾಯಕತ್ವದಲ್ಲಿ ಸೋತ ಮುಂಬೈ ಇಂಡಿಯನ್ಸ್​​..!

  ಕ್ಯಾಪ್ಟನ್​​ ಪಾಂಡ್ಯ ವಿರುದ್ಧ ಅಭಿಮಾನಿಗಳು ಭಾರೀ ಆಕ್ರೋಶ

ರಾಜೀವ್ ಗಾಂಧಿ ಇಂಟರ್​ ನ್ಯಾಷನಲ್​​ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ ಮುಂಬೈ ಇಂಡಿಯನ್ಸ್​​ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ತಂಡ ಐತಿಹಾಸಿಕ ಗೆಲುವು ಸಾಧಿಸಿದೆ. ಹೈದರಾಬಾದ್ ನೀಡಿದ್ದ 278 ರನ್‌ ಬೃಹತ್ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 5 ಕಳೆದುಕೊಂಡು 246 ರನ್‌ ಗಳಿಸಿದ್ರೂ 31 ರನ್‌ಗಳಿಂದ ಹೀನಾಯ ಸೋಲು ಅನುಭವಿಸಿದೆ.

ಇನ್ನು, ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ಬ್ಯಾಕ್​ ಟು ಬ್ಯಾಕ್​​ ಸೋಲು ಕಂಡಿದೆ. ಹಾಗಾಗಿ ಹಾರ್ದಿಕ್​ ವಿರುದ್ಧ ಮಾಜಿ ಕ್ರಿಕೆಟರ್ಸ್​ ಸೇರಿದಂತೆ ಮುಂಬೈ ಇಂಡಿಯನ್ಸ್​ ಫ್ಯಾನ್ಸ್​ ತಿರುಗಿ ಬಿದ್ದಿದ್ದಾರೆ. ಅದರಲ್ಲೂ ಹಾರ್ದಿಕ್​ ಸೋಷಿಯಲ್​ ಮೀಡಿಯಾದಲ್ಲಿ ಟ್ರೋಲ್​ಗಳಿಗೆ ಆಹಾರವಾಗಿದ್ದಾರೆ.

ಮುಂಬೈ ಇಂಡಿಯನ್ಸ್​ ಹಾರ್ದಿಕ್​ ಅವರನ್ನು ಹೋದಲ್ಲಿ, ಬಂದಲ್ಲಿ ಟ್ರೋಲ್​ ಮಾಡುತ್ತಿದ್ದಾರೆ. ರೋಹಿತ್​ ಕ್ಯಾಪ್ಟನ್​ ಆದಾಗ ಚೆನ್ನಾಗಿತ್ತು, ನೀನು ನಾಯಕ ಆದ ಮೇಲೆ ಎಲ್ಲವೂ ಹಾಳಾಗೋಯ್ತು ಎಂದು ಮುಂಬೈ ಇಂಡಿಯನ್ಸ್​ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ.

ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಅವರ ಕೈಯಲ್ಲಿ ಫಸ್ಟ್​ ಓವರ್​ ಮಾಡಿಸಲಿಲ್ಲ. ತಾನೇ ಮೊದಲ ಓವರ್​ ಎಸೆದರು ಹಾರ್ದಿಕ್​. ಅಷ್ಟೇ ಅಲ್ಲ ಫೀಲ್ಡಿಂಗ್​​ ಸೆಟ್​​ ಮಾಡುವುದರಲ್ಲೂ ಎಡವಿದ್ರು. ಮಾಜಿ ಕ್ಯಾಪ್ಟನ್​​ ರೋಹಿತ್​ ಶರ್ಮಾರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಮೀಮ್ಸ್ ಮತ್ತು ಟ್ರೋಲ್‌ಗಳಿಗೆ ಹಾರ್ದಿಕ್ ಪಾಂಡ್ಯ ಗುರಿಯಾಗಿದ್ದಾರೆ. ಎರಡು ಮ್ಯಾಚ್​​ ಸೋಲಿಸಿದ್ರಲ್ಲ, ನಿಮಗೆ ನಾಚಿಕೆ ಆಗಬೇಕು ಎಂದು ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ಇದು ಅತ್ಯಂತ ಕೆಟ್ಟ ಕ್ಯಾಪ್ಟನ್ಸಿ -ಹಾರ್ದಿಕ್ ಪಾಂಡ್ಯ ವಿರುದ್ಧ ಪಠಾಣ್ ಆಕ್ರೋಶ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ನಾಚಿಕೆ ಆಗಬೇಕು ನಿನಗೆ..’- ಹಾರ್ದಿಕ್​​ ವಿರುದ್ಧ ಮುಂಬೈ ಅಭಿಮಾನಿಗಳು ಆಕ್ರೋಶ!

https://newsfirstlive.com/wp-content/uploads/2024/03/Hardik_Rohit-IPL.jpg

Load More