ಆ ದಿನವನ್ನು ಭಾರತೀಯ ಕ್ರಿಕೆಟ್ ಅಭಿಮಾನಿ ಕೂಡ ಮರೆಯಲು ಸಾಧ್ಯವಿಲ್ಲ
ರೂಮ್ನ ಮೂಲೆಯೊಂದರಲ್ಲಿ ಕುಳಿತು ಬಿಕ್ಕಿ ಬಿಕ್ಕಿ ಅಳುತ್ತಿದ್ದ ಕ್ರಿಕೆಟ್ ದೇವರು
ಕೊಹ್ಲಿ ಕೊಟ್ಟ ಗಿಫ್ಟ್ ಕಂಡು ಮತ್ತಷ್ಟು ಕಣ್ಣೇರು ಹೆಚ್ಚಿಸಿಕೊಂಡ ಸಚಿನ್ ತೆಂಡೂಲ್ಕರ್
ಅವತ್ತು ಡ್ರೆಸ್ಸಿಂಗ್ ರೂಮ್ ತುಂಬಾ ನೀರವ ಮೌನ ಆವರಿಸಿತ್ತು. ಮೂಲೆಯೊಂದರಲ್ಲಿ ಸಚಿನ್ ತೆಂಡೂಲ್ಕರ್ ಬಿಕ್ಕಿ ಬಿಕ್ಕಿ ಅಳ್ತಿದ್ರು. ಅಂತಾ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಸಚಿನ್ಗೆ ಬೆಲೆ ಕಟ್ಟಲಾಗದ ಗಿಫ್ಟ್ ಒಂದನ್ನ ನೀಡಿದ್ರು. ಆ ಗಿಫ್ಟ್ ಯಾವುದು.? ಗಿಫ್ಟ್ ಪಡೆದ ಸಚಿನ್ ಹೇಳಿದ್ದೇನು.? ಈ ಸ್ಟೋರಿ ಓದಿ.
16 ನವೆಂಬರ್ 2013ರ ಈ ದಿನವನ್ನ ಯಾವೊಬ್ಬ ಭಾರತೀಯ ಕ್ರಿಕೆಟ್ ಅಭಿಮಾನಿ ಕೂಡ ಮರೆಯಲು ಸಾಧ್ಯವೇ ಇಲ್ಲ. ಆ ದಿನ ಟೀಮ್ ಇಂಡಿಯಾ ಪಂದ್ಯವನ್ನಾಡ್ತಾ ಇದ್ರು, ಇಡೀ ವಾಂಖೆಡೆ ಮೈದಾನದಲ್ಲಿ ನೀರವ ಮೌನ ಆವರಿಸಿತ್ತು. ಟೀಮ್ ಇಂಡಿಯಾ ಡ್ರೆಸಿಂಗ್ ರೂಮ್ನ ಛಾಯೆ ಸಂಪೂರ್ಣ ಬದಲಾಗಿತ್ತು. ಯಾಕಂದ್ರೆ ರೂಮ್ನ ಮೂಲೆಯೊಂದರಲ್ಲಿ ಕುಳಿತಿದ್ದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕಣ್ಣೀರಿಡ್ತಾ ಇದ್ರು.
ಅಂದು 24 ವರ್ಷಗಳ ಸುದೀರ್ಘ ಕ್ರಿಕೆಟ್ ಕರಿಯರ್ಗೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಫುಲ್ ಸ್ಟಾಫ್ ಇಟ್ಟ ದಿನವದು. ನೆಚ್ಚಿನ ಆಟಕ್ಕೆ ಗುಡ್ ಬೈ ಹೇಳಿದ ಸಚಿನ್ ತೆಂಡೂಲ್ಕರ್, ಡ್ರೆಸ್ಸಿಂಗ್ ರೂಮ್ನ ಮೂಲೆಯಲ್ಲಿ ಕುಂತು ಬಿಕ್ಕಿ ಬಿಕ್ಕಿ ಅಳ್ತಿದ್ರಂತೆ. ಆಗ ಸಚಿನ್ ಬಳಿ ತೆರಳಿದ್ದ ವಿರಾಟ್ ಕೊಹ್ಲಿ ಬೆಲೆ ಕಟ್ಟಲಾಗದ ಗಿಫ್ಟ್ವೊಂದನ್ನ ನೀಡಿದ್ರು. ಆ ಗಿಫ್ಟ್ ನೋಡಿದ ಬಳಿಕ ಸಚಿನ್ ಕಣ್ಣೀರು ಮತ್ತಷ್ಟು ಹೆಚ್ಚಾಗಿತ್ತಂತೆ. ಇಷ್ಟೇ ಅಲ್ಲ, ತಕ್ಷಣವೇ ಆ ಗಿಫ್ಟ್ ಅನ್ನ ಕೊಹ್ಲಿ ವಾಪಾಸ್ ನೀಡಿಬಿಟ್ರೆಂತೆ. ಅಷ್ಟಕ್ಕೂ ಕೊಹ್ಲಿ ಕೊಟ್ಟ ಗಿಫ್ಟ್ ಏನು ಅಂದ್ರೆ ಅದೊಂದು ಬೆಲೆ ಕಟ್ಟಲಾಗದ ದಾರ.
ಹೌದು.. ಅದು ಬೆಲೆ ಕಟ್ಟಲಾಗದ ದಾರವೇ. ಯಾಕಂದ್ರೆ, ಅದು ವಿರಾಟ್ ಕೊಹ್ಲಿಯ ದಿವಂಗತ ತಂದೆ ಪ್ರೇಮ್ ಕೊಹ್ಲಿ, ವಿರಾಟ್ಗೆ ನೀಡಿದ ಉಡುಗೊರೆಯಾಗಿತ್ತಂತೆ. ತಂದೆಯ ನಿಧನದ ಬಳಿಕ ಕೊಹ್ಲಿ ಆ ದಾರವನ್ನ ತಮ್ಮ ಕಿಟ್ ಬ್ಯಾಗ್ನಲ್ಲಿ ಇರಿಸಿಕೊಂಡಿದ್ರಂತೆ. ಅದೇ ದಾರವನ್ನ ವಿರಾಟ್, ಅಂದು ಸಚಿನ್ಗೆ ನೀಡಿದ್ರಂತೆ. ಹೀಗಾಗಿಯೇ ಸಚಿನ್ ಕಣ್ಣೀರು ಹೆಚ್ಚಾಗಿದ್ದು, ಆ ಗಿಫ್ಟ್ ಅನ್ನ ವಾಪಾಸ್ ನೀಡಿದ್ದು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ