ಇಂದು ಕೆಕೆಆರ್​​ ವಿರುದ್ಧ ಪಂದ್ಯಕ್ಕೆ ಫಾಫ್​ ಅಲ್ಲ, ಕೊಹ್ಲಿ ಕ್ಯಾಪ್ಟನ್​​.. ಏನಾಗ್ತಿದೆ ಆರ್​​ಸಿಬಿಯಲ್ಲಿ?

author-image
Ganesh Nachikethu
Updated On
ಇಂದು ಕೆಕೆಆರ್​​ ವಿರುದ್ಧ ಪಂದ್ಯಕ್ಕೆ ಫಾಫ್​ ಅಲ್ಲ, ಕೊಹ್ಲಿ ಕ್ಯಾಪ್ಟನ್​​.. ಏನಾಗ್ತಿದೆ ಆರ್​​ಸಿಬಿಯಲ್ಲಿ?
Advertisment
  • ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​​ನಲ್ಲಿ ಬೆಂಗಳೂರಿಗೆ ಆರು ಸೋಲು
  • ಇಂದು ಆರ್​​ಸಿಬಿ ಟೀಮ್​​, ಕೋಲ್ಕತ್ತಾ ನೈಟ್​ ರೈಡರ್ಸ್​ ಮಧ್ಯೆ ರೋಚಕ ಪಂದ್ಯ..!
  • ಈಡನ್​ ಗಾರ್ಡೆನ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಹೈವೋಲ್ಟೇಜ್​ ಮ್ಯಾಚ್​​

ಇಂದು ಕೋಲ್ಕತ್ತಾ ಈಡನ್​ ಗಾರ್ಡೆನ್​​ ಇಂಟರ್ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಹೈವೋಲ್ಟೇಜ್​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ಕೆಕೆಆರ್​ ತಂಡಗಳು ಮುಖಾಮುಖಿ ಆಗಿವೆ.

ಟಾಸ್​ ಗೆದ್ದ ಆರ್​​ಸಿಬಿ ಕ್ಯಾಪ್ಟನ್​​ ಫಾಫ್​ ಡುಪ್ಲೆಸಿಸ್​​ ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಾಗಿ ಕೆಕೆಆರ್​​ ಬ್ಯಾಟಿಂಗ್​ ಮಾಡುತ್ತಿದೆ. ಇಂದು ಫೀಲ್ಡಿಂಗ್​​ ಮತ್ತು ಬೌಲಿಂಗ್​ ಎರಡು ಟೈಟ್​ ಆಗಿದೆ.


">April 21, 2024


">April 21, 2024

ಕೆಕೆಆರ್​ ಪರ ಓಪನರ್​ ಆಗಿ ಫಿಲಿಪ್​ ಸಾಲ್ಟ್​​ ಮತ್ತು ಸುನೀಲ್​ ನರೈನ್​ ಕ್ರೀಸ್​ನಲ್ಲಿದ್ದಾರೆ. ಫಿಲಿಪ್​ ಸಾಲ್ಟ್​ ಹೊರತುಪಡಿಸಿ ಸುನಿಲ್​ ನರೈನ್​ ಹೇಳಿಕೊಳ್ಳುವಂತ ಪ್ರದರ್ಶನವೇನು ನೀಡುತ್ತಿಲ್ಲ. ಫಾಫ್​ ಡುಪ್ಲೆಸಿಸ್​ ಸೈಲೆಂಟ್​ ಆಗಿದ್ದು, ಫೀಲ್ಡ್​ ಸೆಟ್ಟಿಂಗ್​ನಿಂದ ಹಿಡಿದು ಬೌಲರ್​ಗಳಿಗೆ ಇನ್​ಸ್ಟ್ರಕ್ಷನ್​ ಕೂಡ ಕೊಹ್ಲಿಯೇ ನೀಡುತ್ತಿದ್ದಾರೆ. ಹಾಗಾಗಿ ಫ್ಯಾನ್ಸ್​​​ ಕೊಹ್ಲಿಯೇ ಆರ್​​ಸಿಬಿ ಕ್ಯಾಪ್ಟನ್​ ಎಂದು ಟ್ರೋಲ್​ ಮಾಡುತ್ತಿದ್ದಾರೆ.

ಇದನ್ನೂ ಓದಿ: ಕೆಕೆಆರ್​​ ಫಸ್ಟ್​ ಬ್ಯಾಟಿಂಗ್​​.. ಆರ್​​​ಸಿಬಿ ತಂಡದಿಂದ ಮೂವರು ಸ್ಟಾರ್​ ಪ್ಲೇಯರ್ಸ್​​ ಔಟ್​

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment