newsfirstkannada.com

ಇಂಪ್ಯಾಕ್ಟ್ ಪ್ಲೇಯರ್ ಆಗಿ ಆರ್​ಸಿಬಿಗೆ ಗೇಲ್ ಕಂಬ್ಯಾಕ್..? ಕೊಹ್ಲಿ ಜೊತೆಗಿನ ಸಂಭಾಷಣೆ ವೈರಲ್..!

Share :

Published May 20, 2024 at 9:46am

    ಆರ್​ಸಿಬಿ ಡ್ರೆಸ್ಸಿಂಗ್ ರೂಮ್​ನಲ್ಲಿ ದೈತ್ಯ ಕ್ರಿಸ್ ಗೇಲ್

    ಕ್ರಿಸ್​ ಗೇಲ್​​ ಜೊತೆ ಸಂಭ್ರಮಿಸಿದ ಆರ್​ಸಿಬಿ ಹುಡುಗರು

    ಸಿಎಸ್​ಕೆ, ಆರ್​ಸಿಬಿ ಪಂದ್ಯ ವೀಕ್ಷಣೆಗೆ ಬಂದಿದ್ದ ಗೇಲ್

ಶನಿವಾರ ನಡೆದ ಪ್ಲೇ-ಆಫ್ ಡಿಸೈಡರ್ ಪಂದ್ಯದಲ್ಲಿ ಸಿಎಸ್​ಕೆಯನ್ನು ಆರ್​ಸಿಬಿ ರೋಚಕವಾಗಿ ಬಗ್ಗು ಬಡಿದು ಪ್ಲೇ-ಆಫ್ ಪ್ರವೇಶ ಮಾಡಿದೆ. ಈ ರಣ ರೋಚಕ ಪಂದ್ಯವನ್ನು ವೀಕ್ಷಿಸಲು ಆರ್​ಸಿಬಿ ಮಾಜಿ ಆಟಗಾರ, ವೆಸ್ಟ್​ ವಿಂಡೀಸ್​ನ ಮಾಜಿ ದೈತ್ಯ ಪ್ರತಿಭೆ ಕ್ರಿಸ್ ಗೇಲ್ ಕೂಡ ಬಂದಿದ್ದರು.

ಗೇಲ್​ ಆರ್​ಸಿಬಿ ಜರ್ಸಿಯಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ಪಂದ್ಯ ಮುಗಿದ ಮೇಲೆ ಗೇಲ್ ಅವರು ಆರ್​ಸಿಬಿ ಡ್ರೆಸ್ಸಿಂಗ್ ರೂಮ್​ಗೆ ಹೋಗಿ ಶುಭಾಶಯ ಕೋರಿದರು. ಎಲ್ಲರನ್ನೂ ತಬ್ಬಿ ಖಷಿಯಿಂದ ವಿಶ್ ಮಾಡಿದರು. ಈ ವೇಳೆ ಕೊಹ್ಲಿ ಮತ್ತೆ ಐಪಿಎಲ್​ಗೆ ಬರುವಂತೆ ತಮಾಷೆಯಾಗಿ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ಆರ್​ಸಿಬಿ ಅಭಿಮಾನಿಗಳ ವಿರುದ್ಧ ಗಂಭೀರ ಆರೋಪ.. ಟ್ವಿಟರ್​ನಲ್ಲಿ ಭಾರೀ ಆಕ್ರೋಶ..!

ಕಾಕ.. ಮುಂದಿನ ಐಪಿಎಲ್​ ಸೀಸನ್​ಗೆ ಬಂದು ಬಿಡಿ. ಇಂಪ್ಯಾಕ್ಟ್ ಪ್ಲೇಯರ್ ಆಗಿ. ನೀವು ಫೀಲ್ಡಿಂಗ್ ಮಾಡಬೇಕಾಗಿಲ್ಲ. ಇದು ನಿಮಗೆ ಸ್ಪೆಷಲ್ ಎಂದು ಕೊಹ್ಲಿ ತಮಾಷೆ ಮಾಡಿದ್ದಾರೆ. ನಂತರ ಇಬ್ಬರು ಪರಸ್ಪರ ಅಪ್ಪಿಕೊಂಡು ವಿಶ್ ಮಾಡಿಕೊಂಡಿದ್ದಾರೆ. ನಂತರ ವಿಡಿಯೋಗೆ ಪೋಸ್ ನೀಡಿದ್ದಾರೆ. ಈ ವಿಡಿಯೋವನ್ನು ಆರ್​ಸಿಬಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಜೊತೆಗೆ ಗೇಲ್ ಅವರು 12th ಮ್ಯಾನ್ ಆರ್ಮಿಯಾಗಿ ಬರೋದ್ರ ಬಗ್ಗೆ ನೀವು ಏನ್ ಯೋಚಿಸ್ತೀರಿ ಎಂದು ಪ್ರಶ್ನೆ ಮಾಡಿದೆ.

ಇದನ್ನೂ ಓದಿ:RCB ವಿರುದ್ಧ ಬಲಿಷ್ಠ ತಂಡ ಕಣಕ್ಕೆ.. ಪ್ಲೇ-ಆಫ್​ನಲ್ಲಿ ಯಾರು, ಯಾರ ಜೊತೆ ಸೆಣಸಾಟ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂಪ್ಯಾಕ್ಟ್ ಪ್ಲೇಯರ್ ಆಗಿ ಆರ್​ಸಿಬಿಗೆ ಗೇಲ್ ಕಂಬ್ಯಾಕ್..? ಕೊಹ್ಲಿ ಜೊತೆಗಿನ ಸಂಭಾಷಣೆ ವೈರಲ್..!

https://newsfirstlive.com/wp-content/uploads/2024/05/VIRAT-KOHLI-10.jpg

Load More