newsfirstkannada.com

ಸಾಲ್ಟ್​​, ಶ್ರೇಯಸ್​ ಅಯ್ಯರ್​ ಭರ್ಜರಿ ಬ್ಯಾಟಿಂಗ್​​.. ಆರ್​​ಸಿಬಿಗೆ ಕೆಕೆಆರ್​​ 223 ರನ್​ ಬಿಗ್​ ಟಾರ್ಗೆಟ್​

Share :

Published April 21, 2024 at 5:30pm

Update April 21, 2024 at 5:32pm

    ಇಂದು ಆರ್​​ಸಿಬಿ ಟೀಮ್​​, ಕೋಲ್ಕತ್ತಾ ನೈಟ್​ ರೈಡರ್ಸ್​ ಮಧ್ಯೆ ರೋಚಕ ಪಂದ್ಯ..!

    ಈಡನ್​ ಗಾರ್ಡೆನ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಹೈವೋಲ್ಟೇಜ್​ ಮ್ಯಾಚ್​​

    ಆರ್​​​ಸಿಬಿಗೆ ಬರೋಬ್ಬರಿ 223 ರನ್​ಗಳ ಬಿಗ್​ ಟಾರ್ಗೆಟ್​​ ಕೊಟ್ಟ ಕೆಕೆಆರ್​ ಟೀಮ್​​

ಇಂದು ಕೋಲ್ಕತ್ತಾ ಈಡನ್​ ಗಾರ್ಡೆನ್​​ ಇಂಟರ್ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಹೈವೋಲ್ಟೇಜ್​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ಕೆಕೆಆರ್​ ತಂಡಗಳು ಮುಖಾಮುಖಿ ಆಗಿವೆ.

ಟಾಸ್​ ಗೆದ್ದ ಆರ್​​ಸಿಬಿ ಕ್ಯಾಪ್ಟನ್​​ ಫಾಫ್​ ಡುಪ್ಲೆಸಿಸ್​​ ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಾಗಿ ಕೆಕೆಆರ್​​ ಬ್ಯಾಟಿಂಗ್​ ಮಾಡುತ್ತಿದೆ. ಇಂದು ಫೀಲ್ಡಿಂಗ್​​ ಮತ್ತು ಬೌಲಿಂಗ್​ ಎರಡು ಟೈಟ್​ ಆಗಿದೆ.

ಕೆಕೆಆರ್​ ಪರ ಓಪನರ್​ ಆಗಿ ಫಿಲಿಪ್​ ಸಾಲ್ಟ್​​ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ಕೇವಲ 14 ಬಾಲ್​ನಲ್ಲಿ 48 ರನ್​ ಸಿಡಿಸಿದ್ರು. ಇವರ ಸ್ಟ್ರೈಕ್​ ರೇಟ್​ ಬರೋಬ್ಬರಿ 340ಕ್ಕೂ ಹೆಚ್ಚಿತ್ತು.

ಮೂರು ಭರ್ಜರಿ ಸಿಕ್ಸರ್​​ಗಳು ಮತ್ತು ಬರೋಬ್ಬರಿ 7 ಫೋರ್​ಗಳ ಬಾರಿಸಿದ್ರು. ಅದರಲ್ಲೂ ಫರ್ಗ್ಯೂಸನ್​ ಒಂದೇ ಓವರ್​ನಲ್ಲಿ 2 ಸಿಕ್ಸರ್​​, 4 ಫೋರ್​ ಸಮೇತ 28 ರನ್​ ಚಚ್ಚಿದ್ರು.

ಇನ್ನು, ಸಾಲ್ಟ್​​ ಔಟ್​​ ಆದ ಬಳಿಕ ಕೆಕೆಆರ್​ ಬ್ಯಾಕ್​ ಟು ಬ್ಯಾಕ್​ ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆಗ ಕ್ರೀಸ್​ಗೆ ಬಂದ ಕ್ಯಾಪ್ಟನ್​ ಶ್ರೇಯಸ್​ ಅಯ್ಯರ್​​ ತಾಳ್ಮೆಯಿಂದಲೇ ಬ್ಯಾಟ್​ ಬೀಸಿದ್ರು.

ಕೊನೆವರೆಗೂ ಕ್ರೀಸ್​ನಲ್ಲೇ ನಿಂತು 1 ಸಿಕ್ಸರ್​​, 7 ಫೋರ್​ ಸಮೇತ 50 ರನ್​ ಚಚ್ಚಿದ್ರು. ಇವರ ಸ್ಟ್ರೈಕ್​ ರೇಟ್​​ 140ರ ಆಸುಪಾಸು ಇತ್ತು. ಈ ಸೀಸನ್​ನಲ್ಲೇ ಶ್ರೇಯಸ್​ ದಾಖಲಿಸಿದ ಮೊದಲ ಅರ್ಧಶತಕ ಇದಾಗಿತ್ತು.

ಇನ್ನು, ಕೆಕೆಆರ್​ ಪರ ರಿಂಕು ಸಿಂಗ್​ 24, ರಸ್ಸೆಲ್​​ 27, ರಮಣ್​ ದೀಪ್​ 20, ವೆಂಕಟೇಶ್​ ಅಯ್ಯರ್​ 16 ರನ್​ ಗಳಿಸಿದ್ರು. ಕೆಕೆಆರ್​​ ತಂಡ 6 ವಿಕೆಟ್​ ನಷ್ಟಕ್ಕೆ ನಿಗದಿತ 20 ಓವರ್​ನಲ್ಲಿ 222 ರನ್​ ಗಳಿಸಿ ಆರ್​​ಸಿಬಿಗೆ ಬಿಗ್​ ಟಾರ್ಗೆಟ್​ ಕೊಟ್ಟಿದೆ.

ಇದನ್ನೂ ಓದಿ: 4,6,4,4,4,6,6,4,4,4; ಆರ್​​​​ಸಿಬಿ ವಿರುದ್ಧ ಕೇವಲ 14 ಬಾಲ್​ನಲ್ಲಿ 48 ರನ್​ ಚಚ್ಚಿದ ಸಾಲ್ಟ್​​!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಾಲ್ಟ್​​, ಶ್ರೇಯಸ್​ ಅಯ್ಯರ್​ ಭರ್ಜರಿ ಬ್ಯಾಟಿಂಗ್​​.. ಆರ್​​ಸಿಬಿಗೆ ಕೆಕೆಆರ್​​ 223 ರನ್​ ಬಿಗ್​ ಟಾರ್ಗೆಟ್​

https://newsfirstlive.com/wp-content/uploads/2024/04/Shreyas-Iyer_90.jpg

Load More