newsfirstkannada.com

ರಿಷಬ್​ ಪಂತ್​ ಹೋರಾಟ ವ್ಯರ್ಥ; ಡೆಲ್ಲಿ ವಿರುದ್ಧ ಗೆದ್ದು ಬೀಗಿದ ಕೆಕೆಆರ್​ನಿಂದ​​ ಹೊಸ ದಾಖಲೆ!

Share :

Published April 3, 2024 at 11:29pm

Update April 3, 2024 at 11:30pm

    ಡೆಲ್ಲಿ ವಿರುದ್ಧ ಕೋಲ್ಕತ್ತಾ ನೈಟ್​ ರೈಡರ್ಸ್​​ಗೆ ಭರ್ಜರಿ ಗೆಲುವು

    ಕೆಕೆಆರ್​​ ವಿರುದ್ಧ ಡೆಲ್ಲಿಗೆ ಬರೋಬ್ಬರಿ 106 ರನ್​ಗಳ ಸೋಲು

    ಡೆಲ್ಲಿ ಕ್ಯಾಪಿಟಲ್ಸ್​​ ರಿಷಬ್​​ ಪಂತ್​​, ಸ್ಟಬ್ಸ್​​ ಹೋರಾಟ ವ್ಯರ್ಥ!

ವೈ.ಎಸ್​​ ರಾಜಶೇಖರ್​ ರೆಡ್ಡಿ ಇಂಟರ್​ ನ್ಯಾಷನಲ್​​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​ ಹೈವೋಲ್ಟೇಜ್​ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​​ ಹೀನಾಯ ಸೋಲು ಕಂಡಿದೆ. ಹೀಗಾಗಿ ಕೆಕೆಆರ್​​ 106 ರನ್​ಗಳಿಂದ ಗೆದ್ದು ಬೀಗಿದೆ.

ಇನ್ನು, ಕೆಕೆಆರ್​ ನೀಡಿದ ಬಿಗ್​ ಟಾರ್ಗೆಟ್​ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್​​ ಪರ ಕ್ಯಾಪ್ಟನ್​ ರಿಷಬ್​ ಪಂತ್​ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ವೆಂಕಟೇಶ್​ ಅಯ್ಯರ್​ ಒಂದೇ ಓವರ್​ನಲ್ಲಿ 2 ಸಿಕ್ಸರ್​​, 4 ಫೋರ್​ ಸೇರಿ 28 ರನ್​ ಚಚ್ಚಿದ್ರು.

ರಿಷಬ್​ ಪಂತ್​ ತಾನು ಎದುರಿಸಿದ 24 ಬಾಲ್​ನಲ್ಲಿ 55 ರನ್​ ಸಿಡಿಸಿದ್ರು. ಈ ಪೈಕಿ 5 ಸಿಕ್ಸರ್​​, 4 ಫೋರ್​ ಚಚ್ಚಿದ್ರು. ಹಲವು ದಿನಗಳ ಬಳಿಕ ಭರ್ಜರಿ ಕಮ್​ಬ್ಯಾಕ್​ ಮಾಡಿದ ಪಂತ್​ ಸ್ಫೋಟಕ ಬ್ಯಾಟಿಂಗ್​ ನಡೆಸಿದ್ರು. ಇವರಿಗೆ ಸಾಥ್​ ಕೊಟ್ಟ ಸ್ಟಬ್ಸ್​​ 32 ಬಾಲ್​ನಲ್ಲಿ 4 ಸಿಕ್ಸರ್​​, 4 ಫೋರ್​ ಸಮೇತ 54 ರನ್​ ಸಿಡಿಸಿದ್ರು. ವಾರ್ನರ್​​ 18, ಪೃಥ್ವಿ ಶಾ 10 ರನ್​ ಗಳಿಸಿದ್ರು. ಡೆಲ್ಲಿ ಕೇವಲ 17.2 ಓವರ್​ನಲ್ಲಿ 166 ರನ್​ಗೆ ಆಲೌಟ್​ ಆಗಿದೆ.

ಇನ್ನು, ಟಾಸ್​ ಗೆದ್ದ ಕೆಕೆಆರ್​​ ಮೊದಲು ಬ್ಯಾಟಿಂಗ್​ ಆಯ್ದುಕೊಂಡಿದೆ. ಕೆಕೆಆರ್​ ಪರ ಓಪನರ್​ ಆಗಿ ಬಂದ ಸುನೀಲ್​ ನರೈನ್​​ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ಇನ್ನಿಂಗ್ಸ್​ ಉದ್ಧಕ್ಕೂ ಡೆಲ್ಲಿ ಬೌಲರ್​ಗಳ ಬೆಂಡೆತ್ತಿದ್ರು. ಸುನೀಲ್​ ನರೈನ್​ ಕೇವಲ 39 ಬಾಲ್​ನಲ್ಲಿ 7 ಭರ್ಜರಿ ಸಿಕ್ಸರ್​​, 7 ಫೋರ್​ ಸಮೇತ 85 ರನ್​ ಸಿಡಿಸಿದ್ರು. ಇವರ ಬ್ಯಾಟಿಂಗ್​ ಸ್ಟ್ರೈಕ್​ ರೇಟ್​ ಬರೋಬ್ಬರಿ 220 ಇತ್ತು.

ಬಳಿಕ ಬಂದ ರಘುವಂಶಿ ಕೂಡ ಬಿರುಸಿನ ಬ್ಯಾಟಿಂಗ್​ ಮಾಡಿದ್ರು. ಕೇವಲ 27 ಬಾಲ್​ನಲ್ಲಿ 3 ಸಿಕ್ಸರ್​, 5 ಫೋರ್​ ಸಮೇತ 54 ರನ್​ ಚಚ್ಚಿದ್ರು. ಆಂಡ್ರೋ ರಸೆಲ್​ ಕೇವಲ 19 ಬಾಲ್​ನಲ್ಲಿ 3 ಸಿಕ್ಸರ್​​, 4 ಫೋರ್​ ಸಮೇತ 41 ರನ್​ ಬಾರಿಸಿದ್ರು. ಶ್ರೇಯಸ್​ ಅಯ್ಯರ್​ 2 ಸಿಕ್ಸರ್​ ಸಮೇತ 18 ರನ್​, ರಿಂಕು ಸಿಂಗ್​ 3 ಸಿಕ್ಸರ್​​, 1 ಫೋರ್​ನೊಂದಿಗೆ 26 ರನ್​ ಗಳಿಸಿದ್ರು. ಈ ಮೂಲಕ ಕೆಕೆಆರ್​​ ನಿಗದಿತ 20 ಓವರ್​ನಲ್ಲಿ 7 ವಿಕೆಟ್​ ನಷ್ಟಕ್ಕೆ 272 ರನ್​ ಪೇರಿಸಿ ಆರ್​​ಸಿಬಿ ದಾಖಲೆ ಮುರಿದಿದೆ. ಡೆಲ್ಲಿಗೆ 273 ರನ್​ ಬಿಗ್​ ಟಾರ್ಗೆಟ್​ ಕೊಟ್ಟಿತ್ತು.

ಇದನ್ನೂ ಓದಿ: 6,6,6,6,6,4,4,4,4; ಕೆಕೆಆರ್​ ವಿರುದ್ಧ ಪಂತ್​ ಸ್ಫೋಟಕ ಬ್ಯಾಟಿಂಗ್​ ಹೇಗಿತ್ತು ಗೊತ್ತಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಿಷಬ್​ ಪಂತ್​ ಹೋರಾಟ ವ್ಯರ್ಥ; ಡೆಲ್ಲಿ ವಿರುದ್ಧ ಗೆದ್ದು ಬೀಗಿದ ಕೆಕೆಆರ್​ನಿಂದ​​ ಹೊಸ ದಾಖಲೆ!

https://newsfirstlive.com/wp-content/uploads/2024/04/Pant-Batting.jpg

Load More