newsfirstkannada.com

KKR ವಿರುದ್ಧ ಹೀನಾಯವಾಗಿ ಸೋತ ಲಕ್ನೋ.. ಕನ್ನಡಿಗ ಕೆಎಲ್ ರಾಹುಲ್​ ಟೀಮ್​ ಪ್ಲೇ ಆಪ್​ ಕನಸು ಏನಾಗುತ್ತೆ?

Share :

Published May 5, 2024 at 11:30pm

Update May 5, 2024 at 11:31pm

    ಅಲ್ಪ ಮೊತ್ತಕ್ಕೆ ಆಲೌಟ್ ಆಗಿರುವ ಲಕ್ನೋ ಸೂಪರ್ ಜೈಂಟ್ಸ್​

    ಕೆಕೆಆರ್ ಪರ ಓಪನರ್​ ಸಾಲ್ಟ್​, ನರೈನ್​ ಅದ್ಭುತ ಬ್ಯಾಟಿಂಗ್

    ಬಿಗ್ ಟಾರ್ಗೆಟ್ ಚೇಜ್ ಮಾಡುವಲ್ಲಿ ಎಡವಿದ ರಾಹುಲ್ ಪಡೆ

ಲಕ್ನೋದ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್​ ವಿರುದ್ಧದ ಕೋಲ್ಕತ್ತಾ ನೈಟ್​ ರೈಡರ್ಸ್​ ಭರ್ಜರಿ ಗೆಲುವು ಪಡೆದುಕೊಂಡಿದೆ.

ಮೊದಲು ಟಾಸ್ ಗೆದ್ದುಕೊಂಡ ಲಕ್ನೋ ಸೂಪರ್ ಜೆಂಟ್ಸ್ ತಂಡದ ನಾಯಕ ಕೆ.ಎಲ್ ರಾಹುಲ್ ಅವರು ಬೌಲಿಂಗ್ ಆಯ್ದುಕೊಂಡರು. ಎದುರಾಳಿ ಕೆಕೆಆರ್​ ಅನ್ನು ಬ್ಯಾಟಿಂಗ್​ಗೆ ಆಹ್ವಾನಿಸಿ ಭಾರೀ ತಪ್ಪು ಮಾಡಿದರು. ಕೆಕೆಆರ್ ಪರ ಓಪನರ್ಸ್ ಆಗಿ ಮೈದಾನಕ್ಕೆ ಬಂದ ಪಿಲಿಫ್ ಸಾಲ್ಟ್​ ಮತ್ತು ಸುನೀಲ್ ನರೈನ್ ಭರ್ಜರಿ ಓಪನಿಂಗ್ ಪಡೆದರು. 32 ರನ್​ ಗಳಿಸಿ ಆಡುವಾಗ ಸಾಲ್ಟ್,​ ನವೀನ್ ಬೌಲಿಂಗ್​ನಲ್ಲಿ ಔಟ್ ಆದರು. ಆದರೆ ಕ್ರೀಸ್ ಕಾಯ್ದುಕೊಂಡ ಸುನೀಲ್ ನರೈನ್ ಅವರು ಅಮೋಘ ಬ್ಯಾಟಿಂಗ್ ಮುಂದುವರೆಸಿ 6 ಬೌಂಡರಿ, 7 ಸಿಕ್ಸ್ ಸಮೇತ 81 ರನ್​ ಬಿಷ್ಣೋಯಿ ಸ್ಪೆಲ್​ಗೆ ಬಲೆಗೆ ಬಿದ್ದರು. ಆಂಗ್ಕ್ರಿಶ್ ರಘುವಂಶಿ 32 ರನ್​ಗಳ ಗಳಿಸಿದರು. ಆಂಡ್ರೆ ರಸೆಲ್ 12, ರಿಂಕು 16, ಕ್ಯಾಪ್ಟನ್ ಅಯ್ಯರ್ 23, ರಮಣದೀಪ್ ಸಿಂಗ್ ವೆಂಕಟೇಶ್ ಅಯ್ಯರ್ ರನ್ ಗಳಿಸಿದರು. ಈ ಮೂಲಕ ನಿಗದಿತ 20 ಓವರ್​​ಗಳಲ್ಲಿ 6 ವಿಕೆಟ್​​ಗೆ 235 ರನ್​ಗಳ ಬೃಹತ್ ಟಾರ್ಗೆಟ್​ ಅನ್ನು ಕೆಕೆಆರ್ ನೀಡಿತ್ತು.

ಇದನ್ನೂ ಓದಿ: T20 ವಿಶ್ವಕಪ್​ ಆರಂಭಕ್ಕೂ ಮೊದಲೇ ವಿಘ್ನ.. ಕ್ಯಾಪ್ಟನ್​ ರೋಹಿತ್​ ಶರ್ಮಾ ಇಂಜುರಿಗೆ ಒಳಗಾದ್ರಾ?

ಈ ಟಾರ್ಗೆಟ್​ ಅನ್ನು ಬೆನ್ನತ್ತಿದ್ದ ಲಕ್ನೋ ಸೂಪರ್ ಜೆಂಟ್ಸ್ ಟೀಮ್ 20 ರನ್​ಗೆ ಅರ್ಶಿಣ್ ಕುಲಕರ್ಣಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಕೆಎಲ್ ರಾಹುಲ್ ಹಾಗೂ ಸ್ಟೋನಿಸ್​ ಒಳ್ಳೆಯ ಪಾರ್ಟ್​ನರ್​ಶಿಪ್​ನಲ್ಲಿ ಆಡಿ 50 ರನ್​ ಕೂಡಿ ಹಾಕಿದರು. ಆದರೆ 25 ರನ್​ನಿಂದ ಆಡುತ್ತಿದ್ದ ರಾಹುಲ್ ಕ್ಯಾಚ್ ನೀಡಿ ಪೆವಿಲಿಯನ್​ಗೆ ನಡೆದರು. ಇವರ ನಂತರ ಬಂದ ದೂಪಕ್ ಹೂಡ ಬಂದಷ್ಟೇ ವೇಗದಲ್ಲಿ ಪೆವಿಲಿಯನ್​ಗೆ ನಡೆದರು. ಸ್ಟೋನಿಸ್​ 36 ರನ್​ಗೆ ಔಟ್ ಆಗುತ್ತಿದ್ದಂತೆ ಉಳಿದ ಆಟಗಾರರು ಯಾರು 16 ರನ್​ಗಳ ಗಡಿ ಕೂಡ ದಾಟಲಿಲ್ಲ. ಹೀಗಾಗಿ 16.1 ಓವರ್​ಗೆ ಲಕ್ನೋ ತನ್ನೆಲ್ಲ ವಿಕೆಟ್​​ಗಳನ್ನ ಕಳೆದುಕೊಂಡು 137 ರನ್​ ಗಳಿಸಿ ಸೋಲೋಪ್ಪಿಕೊಂಡಿತು. ಇನ್ನು ಕೋಲ್ಕತ್ತಾ ಪರ ಹರ್ಷಿತ್ ರಾಣಾ ಹಾಗೂ ವರುಣ್​ ತಲಾ 3 ವಿಕೆಟ್ ಪಡೆದು ಮಿಂಚಿದರು. ಈ ಮೂಲಕ ಕೋಲ್ಕತ್ತಾ 98 ರನ್​ಗಳಿಂದ ಅಮೋಘವಾದ ಗೆಲುವು ದಾಖಲಿಸಿತು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

KKR ವಿರುದ್ಧ ಹೀನಾಯವಾಗಿ ಸೋತ ಲಕ್ನೋ.. ಕನ್ನಡಿಗ ಕೆಎಲ್ ರಾಹುಲ್​ ಟೀಮ್​ ಪ್ಲೇ ಆಪ್​ ಕನಸು ಏನಾಗುತ್ತೆ?

https://newsfirstlive.com/wp-content/uploads/2024/05/kl-rahul-2.jpg

Load More