ಸುಖಾ ಸುಮ್ಮನೆ ವಾಹನಗಳ ಮೇಲೆ ಸ್ಟಿಕ್ಕರ್ ಹಾಕಿಸೋ ಮುನ್ನ ಎಚ್ಚರ
ನಿಮ್ಮ ಕಾರಿನ ಮೇಲೆ ಹಾಕಿಸೋ ಸ್ಟಿಕ್ಕರ್ ಯಾವ ರೀತಿ ಇರಬೇಕು ಗೊತ್ತಾ?
ಕಾರು ಮಾಲೀಕ ಹಾಕಿಸಿರೋ ಸ್ಟಿಕ್ಕರ್ ಹಿಂದಿನ ನಿಜವಾದ ಉದ್ದೇಶವೇನು?
ಕೋಲ್ಕತಾ: ಸಾಕಷ್ಟು ಜನರು ಟ್ರೆಂಡ್ಗೆ ತಕ್ಕಂತೆ ತಮ್ಮ ಬೈಕ್, ಕಾರು ಇನ್ನಿತರ ವಾಹನಗಳ ಮೇಲೆ ಲೈನ್ಸ್, ಸ್ಟಿಕ್ಕರ್ ಹಾಕಿಸುವುದನ್ನು ನೋಡಿರುತ್ತೇವೆ. ಇನ್ನೂ ಕೆಲವರು ಕುಟುಂಬಸ್ಥರ ಹೆಸರು ಅಥವಾ ದೇವರ ಫೋಟೋಗಳನ್ನು ಹಾಕಿಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಕಾರಿನ ಮೇಲೆ ಹಾವನ್ನು ನಂಬಿ ಆದರೆ ಹೆಣ್ಣನ್ನು ಅಲ್ಲ ಅಂತ ಸ್ಟಿಕ್ಕರ್ ಹಾಕಿಸಿಕೊಂಡ ಫಜೀತಿಗೆ ಸಿಲುಕಿಕೊಂಡಿದ್ದಾನೆ.
ಇದನ್ನೂ ಓದಿ: ಮಕ್ಕಳಿಲ್ಲದ ಬೆಕ್ಕು ಹೆಂಗಸರು.. ಕಮಲಾ ಹ್ಯಾರಿಸ್ಗೆ childless cat ಎಂದಿದ್ದೇಕೆ ಜೆ.ಡಿ ವ್ಯಾನ್ಸ್; ಏನಿದರ ಅರ್ಥ?
ಚಾಲಕನೊಬ್ಬರ ಕಾರಿನ ಮೇಲೆ ‘Believe a snake not a girl’ ಅಂತ ಸ್ಟಿಕ್ಕರ್ ಹಾಕಿಸಿಕೊಂಡಿದ್ದ. ಹೀಗೆ ಕರ್ತವ್ಯದಲ್ಲಿದ್ದ ವ್ಯಕ್ತಿಯೊಬ್ಬ ಇದನ್ನು ಗಮನಿಸಿದ್ದಾರೆ. ಮೊದಲು ಸ್ಟಿಕ್ಕರ್ ಹಿಂದಿನ ದುರುದ್ದೇಶ ಮತ್ತು ಸ್ತ್ರೀ ದ್ವೇಷ ಅಡಗಿದೆ ಎಂದು ಅವರು ಅಂದುಕೊಂಡಿದ್ದರಂತೆ. ಅಲ್ಲದೇ ಈ ರೀತಿಯ ಸ್ಟಿಕ್ಕರ್ಗಳು ಕಾನೂನಿನ ಬಾಹಿರವಾಗಿದ್ದು, ಹೀಗಾಗಿ ಆ ಕಾರು ಮಾಲೀಕ ಮೇಲೆ ಕೇಸ್ ಕೂಡ ದಾಖಲಾಗುತ್ತೆ ಅಂತ ತಿಳಿದುಕೊಂಡರು.
View this post on Instagram
ಕೂಡಲೇ ಆ ವ್ಯಕ್ತಿ ಕಾರು ಮಾಲೀಕರನ್ನು ಸಂಪರ್ಕಿಸಿದ್ದರು. ಬಳಿಕ ಆ ಸ್ಟಿಕ್ಕರ್ ಹಿಂದಿನ ನಿಜವಾದ ಉದ್ದೇಶದ ಬಗ್ಗೆ ತಿಳಿಸಿದ್ದರು. ಜೊತೆಗೆ ಈ ಸ್ಟಿಕ್ಕರ್ ಅನ್ನು ಹಾಗೇ ಉಳಿಸಿಕೊಂಡರೆ ನಿಮ್ಮ ಮೇಲೆ 356(i) BNS ಅಡಿಯಲ್ಲಿ ದಂಡವನ್ನು ವಿಧಿಸಬಹುದಾಗಿದೆ ಅಂತ ಹೇಳಿದ್ದಾರೆ. ಇದನ್ನು ಕೇಳಿದ ಕಾರು ಮಾಲೀಕ ತಕ್ಷಣವೇ ಸ್ಟಿಕ್ಕರ್ ಅನ್ನು ತೆಗೆದುಹಾಕಿದ್ದಾರೆ.
ಇದಾದ ಬಳಿಕ ಆ ವ್ಯಕ್ತಿಯೂ ಸಹ ನಾಗರಿಕರ ಸಹಕಾರದಿಂದ ನಾವು ಸಂತೋಷಪಡುತ್ತೇವೆ. ಮಹಿಳೆಯರಿಗೆ ಭಾರತ ಅತ್ಯಂತ ಸುರಕ್ಷಿತ ನಗರ ಎಂಬ ಖ್ಯಾತಿಯನ್ನು ಕಾಪಾಡಿಕೊಳ್ಳಲು ಎಲ್ಲರಿಗೂ ಮನವಿ ಮಾಡುತ್ತೇವೆ ಅಂತ ಹೇಳಿದ್ದಾರೆ. ಇದೇ ಪೋಸ್ಟ್ ಅನ್ನು ಕೊಲ್ಕತ್ತಾ ಪೊಲೀಸರು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಮಹಿಳೆಯರ ಗೌರವ ಕಾಪಾಡುವ ನಿಟ್ಟಿನಲ್ಲಿ ಇದೊಂದು ಉತ್ತಮ ಹೆಜ್ಜೆ ಅಂತ ಕಾಮೆಂಟ್ಸ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ