ದಿನದಿಂದ ದಿನಕ್ಕೆ ಒಡಲು ತುಂಬಿಸುತ್ತಿದ್ದಾಳೆ ಕಾವೇರಿ.. ಇಂದು ಎಷ್ಟಿದೆ ಗೊತ್ತಾ ನೀರಿನ ಮಟ್ಟ?

author-image
AS Harshith
Updated On
ದಿನದಿಂದ ದಿನಕ್ಕೆ ಒಡಲು ತುಂಬಿಸುತ್ತಿದ್ದಾಳೆ ಕಾವೇರಿ.. ಇಂದು ಎಷ್ಟಿದೆ ಗೊತ್ತಾ ನೀರಿನ ಮಟ್ಟ?
Advertisment
  • ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂದುವರೆದ ಮಳೆ
  • ಇಂದು ಕೃಷ್ಣರಾಜ ಸಾಗರ ಅಣೆಕಟ್ಟಿನ ಒಳಹರಿವು ಎಷ್ಟಿದೆ ಗೊತ್ತಾ?
  • ಕುಡಿಯುವ ನೀರಿಗಾಗಿ ಎಷ್ಟು ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗುತ್ತಿದೆ?

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರೆದಿದೆ. ಪರಿಣಾಮ ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ‌ ಏರಿಕೆ ಕಂಡಿದೆ. ರೈತರಿಗಂತೂ ಈ ಸಂಗತಿ ಇನ್ನಿಲ್ಲದ ಖುಷಿ ನೀಡಿದೆ.

ಕೃಷ್ಣರಾಜ ಸಾಗರ ಅಣೆಕಟ್ಟಿನ ನೀರಿನ ಮಟ್ಟ‌ 102.80 ಅಡಿಗೆ ಏರಿಕೆ ಕಂಡಿದೆ. ನೀರಿನ ಸಂಗ್ರಹ 25.085 ಟಿಎಂಸಿಗೆ ಏರಿಕೆ ಕಂಡಿದೆ.

ಇನ್ನು ಕೆಆರ್​ಎಸ್​ ಡ್ಯಾಂಗೆ 8,425 ಕ್ಯೂಸೆಕ್ ಒಳಹರಿವು ಬರುತ್ತಿದೆ. 124.80 ಅಡಿ ಗರಿಷ್ಠ ಮಟ್ಟದ ಡ್ಯಾಂನಲ್ಲಿ 102.80 ಅಡಿ ನೀರು ಸಂಗ್ರಹವಾಗಿದೆ.  49.452 ಟಿಎಂಸಿ ಸಾಮರ್ಥ್ಯದ ಕೆಆರ್‌ಎಸ್ ಡ್ಯಾಂನಲ್ಲಿ 25.085 ಟಿಎಂಸಿ ನೀರು ಸಂಗ್ರಹವಾಗಿದೆ. ಕುಡಿಯುವ ನೀರಿಗಾಗಿ 567 ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗುತ್ತಿದೆ.

ಇದನ್ನೂ ಓದಿ: VIDEO: ನದಿ ನೀರಿನಲ್ಲಿ ಹುಚ್ಚಾಟ ಮೆರೆದ ಡ್ರೈವರ್​.. ಕಣ್ಣ ಮುಂದೆಯೇ ಕೊಚ್ಚಿ ಹೋಯ್ತು ಲಾರಿ

ಇಂದಿನ ಕೆಆರ್‌ಎಸ್ ನೀರಿನ ಮಟ್ಟ

ಗರಿಷ್ಠ ಮಟ್ಟ - 124.80 ಅಡಿ.
ಇಂದಿನ ಮಟ್ಟ - 102.80 ಅಡಿ.
ಗರಿಷ್ಠ ಸಾಂದ್ರತೆ - 49.452 ಟಿಎಂಸಿ
ಇಂದಿನ ಸಾಂದ್ರತೆ - 25.085 ಟಿಎಂಸಿ
ಒಳ ಹರಿವು - 8,425 ಕ್ಯೂಸೆಕ್
ಹೊರ ಹರಿವು - 567 ಕ್ಯೂಸೆಕ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment