/newsfirstlive-kannada/media/post_attachments/wp-content/uploads/2023/07/krs-1.jpg)
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕೆಆರ್‌ಎಸ್ ಡ್ಯಾಂನ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗಿದೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಎಸ್ ಡ್ಯಾಂ ನೀರಿನ ಮಟ್ಟ ಮಳೆಯಿಂದಾಗಿ ಹೆಚ್ಚಾಗುತ್ತಿದ್ದು, ಡ್ಯಾಂಗೆ 12,867 ಕ್ಯೂಸೆಕ್ ನೀರು ಒಳಹರಿವು ಬರುತ್ತಿದೆ.
ನಿನ್ನೆ ಒಳಹರಿವಿನ ಪ್ರಮಾಣ 18,644 ಕ್ಯೂಸೆಕ್ ಇತ್ತು. ಆದರೆ ಕೊಡಗು ಭಾಗದಲ್ಲಿ ಮಳೆ ಅಲ್ಪ ಪ್ರಮಾಣದಲ್ಲಿ ತಗ್ಗಿದ ಹಿನ್ನಲೆ, ನಿನ್ನೆಗಿಂತಲೂ ಇಂದು ಒಳಹರಿವಿನಲ್ಲಿ ಇಳಿಕೆ ಕಂಡಿದೆ. ಹಾಗಾಗಿ ಡ್ಯಾಂನ ನೀರಿನ ಮಟ್ಟ 94.40 ಅಡಿಗೆ ಏರಿಕೆ ಕಂಡಿದೆ.
ಇದನ್ನೂ ಓದಿ: ಇಬ್ಬರು ಮಕ್ಕಳು ನೀರಲ್ಲಿ ಮುಳುಗಿ ಸಾವು.. ತಾಯಿ ಸ್ಥಿತಿ ಗಂಭೀರ
ಸದ್ಯ 124.80 ಗರಿಷ್ಠ ಮಟ್ಟದ ಡ್ಯಾಂನಲ್ಲಿ 94.40 ಅಡಿ ನೀರು ಸಂಗ್ರಹವಾಗಿದೆ. ನಿನ್ನೆ 92.80 ಅಡಿ ನೀರು ಸಂಗ್ರಹವಾಗಿತ್ತು. 49.452 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ ಸದ್ಯ 18.733 ಟಿಎಂಸಿ ನೀರು ಸಂಗ್ರಹವಾಗಿದೆ.
ಇದನ್ನೂ ಓದಿ: ಹೆದ್ದಾರಿಯಲ್ಲಿ ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಸಾವು, ಓರ್ವನ ಸ್ಥಿತಿ ಗಂಭೀರ
ಇಂದಿನ ಕೆಆರ್‌ಎಸ್ ನೀರಿನ ಮಟ್ಟ
- ಗರಿಷ್ಠ ಮಟ್ಟ - 124.80 ಅಡಿ.
- ಇಂದಿನ ಮಟ್ಟ - 94.40 ಅಡಿ.
- ಗರಿಷ್ಠ ಸಾಮರ್ಥ್ಯ - 49.452 ಟಿಎಂಸಿ
- ಇಂದಿನ ಸಾಮರ್ಥ್ಯ - 18.733 ಟಿಎಂಸಿ
- ಒಳ ಹರಿವು - 12,867 ಕ್ಯೂಸೆಕ್
- ಹೊರ ಹರಿವು - 507 ಕ್ಯೂಸೆಕ್
ನಿನ್ನೆ ಕೆಆರ್‌ಎಸ್ ನೀರಿನ ಮಟ್ಟ
- ಗರಿಷ್ಠ ಮಟ್ಟ – 124.80 ಅಡಿ.
- ಇಂದಿನ ಮಟ್ಟ – 92.80 ಅಡಿ.
- ಗರಿಷ್ಠ ಸಂಗ್ರಹ ಸಾಮರ್ಥ್ಯ – 49.452 ಟಿಎಂಸಿ
- ಇಂದು ಸಂಗ್ರಹ ಇರುವ ನೀರು – 17.676 ಟಿಎಂಸಿ
- ಒಳ ಹರಿವು – 18,644 ಕ್ಯೂಸೆಕ್
- ಹೊರ ಹರಿವು – 496 ಕ್ಯೂಸೆಕ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us