Advertisment

KRS ಡ್ಯಾಂ ಒಳಹರಿವಿನ ಪ್ರಮಾಣ ಹೆಚ್ಚಳದಿಂದ ರೈತರ ಮೊಗದಲ್ಲಿ ಮಂದಹಾಸ! ಇಂದು ನೀರಿನ ಮಟ್ಟ ಎಷ್ಟಿದೆ?

author-image
AS Harshith
Updated On
ಮುಂದುವರೆದ ವರುಣಾರ್ಭಟ.. KRS​ಗೆ ಬಂತು ನೀರೇ ನೀರು.. ಇಂದು ಡ್ಯಾಂನ ನೀರಿನ ಮಟ್ಟ ಎಷ್ಟಿದೆ ಗೊತ್ತಾ?
Advertisment
  • ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯಿಂದ ರೈತರಿಗೆ ಸಂತಸದ ಸುದ್ದಿ
  • ನಿನ್ನೆಯಿಂದ ಇಂದು ಕೃಷ್ಣ ರಾಜಸಾಗರದ ಒಳಹರಿವಿನ ಪ್ರಮಾಣ ಹೆಚ್ಚಳ
  • ಇಂದು ಕೆಆರ್​ಎಸ್​ ಡ್ಯಾಂನ ಒಳಹರಿವಿನ ಪ್ರಮಾಣ ಎಷ್ಟಿದೆ? ಇಲ್ಲಿದೆ ಮಾಹಿತಿ

ಮಂಡ್ಯ: ರಾಜ್ಯದಾದ್ಯಂತ ಮಳೆ ಸುರಿಯುತ್ತಿದೆ. ಮತ್ತೊಂದೆಡೆ ‘ರೆಮಲ್’​ ಸೈಕ್ಲೋನ್​ ಭೀತಿ ಎದುರಾಗಿದೆ. ಒಟ್ಟಿನಲ್ಲಿ ಮಳೆಯಿಂದಾಗಿ ಕೆರೆ ಕಟ್ಟೆಗಳು ತುಂಬುತ್ತಿವೆ. ಸಂತಸದ ಸಂಗತಿ ಎಂದರೆ ಕಾವೇರಿ ಜಲಾನಯನ ಪ್ರದೇಶದಲ್ಲೂ ಮಳೆ ಮುಂದುವರೆದಿದೆ.

Advertisment

ಈ ವರ್ಷ ನೀರಿಲ್ಲದೆ ಜನರು ಸಂಕಷ್ಟ ಅನುಭವಿಸುತ್ತಿದ್ದರು. ಬಿರು ಬಿಸಿಲಿನಿಂದ ಕಂಗೆಟ್ಟು ಬೆಸತ್ತಿದ್ದರು. ಆದರೀಗ ಮಳೆಯಿಂದಾಗಿ ರೈತರಲ್ಲಿ ಸಂತಸ ಮನೆಮಾಡಿದೆ. ಕಾರಣ ಕೆಆರ್​ಎಸ್​ ಡ್ಯಾಂಗೆ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿದೆ.

ಕೆಆರ್​ಎಸ್​ ಡ್ಯಾಂ ರೈತರ ಜೀವಾಳ. ಅನೇಕ ಊರಿಗೆ ನೀರು ಹರಿಸುತ್ತದೆ. ಇದನ್ನೇ ನಂಬಿ ಬದುಕುವ ಅದೆಷ್ಟೋ ರೈತರಿದ್ದಾರೆ. ಮಾತ್ರವಲ್ಲದೆ ಕೃಷಿಗೂ ಇದು ಪೂರಕವಾಗಿದೆ. ಆದರೆ ಕಳೆದ ಬಾರಿ ರೈತರಿಗೆ ಕೆಆರ್​ಎಸ್​​ ಡ್ಯಾಂ ನೀರನ್ನು ತಮಿಳು ನಾಡಿಗೆ ಹರಿಸಿದ್ದ ಕಾರಣ ಸಂಕಷ್ಟ ಅನುಭವಿಸಿದ್ದರು. ಆದರೆ ಈ ಬಾರಿಯ ಮಳೆಯಿಂದಾಗಿ ಡ್ಯಾಂ ತುಂಬುತ್ತಿರುವುದು ಅವರ ಸಂತಸವನ್ನು ದುಪಟ್ಟು ಮಾಡಿದೆ.

ಅಂದಹಾಗೆಯೇ ರಾಜ್ಯದಲ್ಲಿ ಮಳೆಯಾಗುತ್ತಿರುವ ಪರಿಣಾಮ KRS ಡ್ಯಾಂಗೆ 3405 ಕ್ಯೂಸೆಕ್ ಒಳಹರಿವು ಹರಿದು ಬರುತ್ತಿದೆ. ಕುಡಿಯುವ ನೀರಿಗಾಗಿ ಡ್ಯಾಂನಿಂದ 533 ಕ್ಯೂಸೆಕ್ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಇನ್ನು 124.80 ಅಡಿ ಗರಿಷ್ಠ ಮಟ್ಟದ ಡ್ಯಾಂನಲ್ಲಿ 82.80 ಅಡಿ ನೀರು ಸಂಗ್ರಹವಾಗಿದೆ. ಡ್ಯಾಂನಲ್ಲಿ ಸದ್ಯ 12.076 ಟಿಎಂಸಿ ನೀರು ಸಂಗ್ರಹವಾಗಿದೆ.

Advertisment

ಇದನ್ನೂ ಓದಿ: ಬೆಳ್ಳಂ ಬೆಳಗ್ಗೆ ಕಾರು-ಟ್ರಕ್​ ಭೀಕರ ಅಪಘಾತ.. ಮಗು ಸೇರಿ ಆರು ಜನರ ದೇಹ ಛಿದ್ರ ಛಿದ್ರ

ಇಂದಿನ ಕೆಆರ್‌ಎಸ್ ನೀರಿನ ಮಟ್ಟ

ಗರಿಷ್ಠ ಮಟ್ಟ - 124.80 ಅಡಿ.
ಇಂದಿನ ಮಟ್ಟ - 82.80 ಅಡಿ.
ಗರಿಷ್ಠ ಸಾಂದ್ರತೆ - 49.452 ಟಿಎಂಸಿ
ಇಂದಿನ ಸಾಂದ್ರತೆ - 12.076 ಟಿಎಂಸಿ
ಒಳ ಹರಿವು - 3405 ಕ್ಯೂಸೆಕ್
ಹೊರ ಹರಿವು - 533 ಕ್ಯೂಸೆಕ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment