ರಾಜ್ಯದಲ್ಲಿ ಅಪರೂಪವಾದ ಮಳೆ.. KRS ಡ್ಯಾಂನ ಒಳಹರಿವು ಇಷ್ಟೊಂದು ಇಳಿಕೆಯಾದರೆ ಹೇಗೆ?

author-image
AS Harshith
Updated On
ಕಾವೇರಿ ನದಿಗೆ ಪ್ರಭಾವಿಗಳಿಂದಲೇ ಕನ್ನ; ಕರ್ನಾಟಕದಲ್ಲಿ ಕುಡಿಯೋ ನೀರಿಗೂ ಸಮಸ್ಯೆ..!
Advertisment
  • ರಾಜ್ಯದಲ್ಲಿ ಕೈಕೊಟ್ಟ ಮಳೆ.. ರೈತರಿಗೆ ಸಂಕಟದ ಹೊರೆ
  • ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ ಕೆಆರ್​​ಎಸ್ ಡ್ಯಾಂನ​ ನೀರಿನ ಮಟ್ಟ
  • ಕಾವೇರಿ ನೀರನ್ನೇ ನಂಬಿಕೊಂಡು ಬದುಕುತ್ತಿರುವ ರೈತರು ಗತಿಯೇನು?

ಮಂಡ್ಯ: ರಾಜ್ಯದಲ್ಲಿ ಮಳೆ ಅಪರೂಪವಾಗಿಬಿಟ್ಟಿದೆ. ಕಳೆದ ಒಂದು ವಾರದಿಂದ ಮಳೆ ಕೊಂಚ ದೂರ ಸರಿದಿದೆ. ಇದರಿಂದಾಗಿ ರೈತರು ಸಪ್ಪೆ ಮೋರೆ ಹಾಕಿದ್ದಾರೆ. ಜೊತೆಗೆ ಕೆರೆ, ಕಟ್ಟೆಗಳಲ್ಲಿ ನೀರು ಕಡಿಮೆಯಾಗುತ್ತಿದೆ.

ಮಳೆ ಬಂದರೆ ಬೆಳೆ ಎಂದು ನಂಬಿಕೊಂಡಿರುವ ರೈತರಿಗೀಗ ಸಂಕಷ್ಟ ಎದುರಾಗಿದೆ. ಅತ್ತ ಕೆಆರ್‌ಎಸ್ ಡ್ಯಾಂನ ಒಳಹರಿವು ಮತ್ತಷ್ಟು ಇಳಿಕೆ. ಕಾವೇರಿ ನೀರನ್ನೇ ನಂಬಿಕೊಂಡಿರುವ ರೈತರು ಮಳೆಯ ಅಭಾವದಿಂದ ತಲೆಕೆಡಿಸಿಕೊಂಡಿದ್ದಾರೆ.

ಕೃಷ್ಣರಾಜ ಸಾಗರದಲ್ಲಿ ನೀರಿನ ಒಳಹರಿವು 1,515 ಕ್ಯೂಸೆಕ್ ಗೆ ಇಳಿಕೆಯಾಗಿದೆ. 543 ಕ್ಯೂಸೆಕ್ ನೀರು ಡ್ಯಾಂನಿಂದ ಹೊರಕ್ಕೆ ಹರಿಯುತ್ತಿದೆ. 124.80 ಅಡಿ ಮಟ್ಟದ ಡ್ಯಾಂನಲ್ಲಿ ಸದ್ಯ 83.85 ಅಡಿ ನೀರು ಸಂಗ್ರಹವಾಗುತ್ತಿದೆ. 49.452 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ 12.588 ಟಿಎಂಸಿ ನೀರು ಸಂಗ್ರಹವಾಗುತ್ತಿದೆ.

ಇದನ್ನೂ ಓದಿ: ಕೆಲವೇ ಗಂಟೆಗಳಲ್ಲಿ ದೇಶಕ್ಕೆ ಮುಂಗಾರು ಮಳೆ ಆಗಮನ.. ಈ ಎಲ್ಲಾ ರಾಜ್ಯಗಳಲ್ಲಿ ಮಳೆ ಮಳೆ..!

ಇಂದು ಕೆಆರ್​​ಎಸ್ ಡ್ಯಾಂನ​ ನೀರಿನ ಮಟ್ಟ ಎಷ್ಟಿದೆ?

ಗರಿಷ್ಠ ಮಟ್ಟ - 124.80 ಅಡಿ.
ಇಂದಿನ ಮಟ್ಟ - 83.85 ಅಡಿ.
ಗರಿಷ್ಠ ಸಾಂದ್ರತೆ - 49.452 ಟಿಎಂಸಿ
ಇಂದಿನ ಸಾಂದ್ರತೆ - 12.588 ಟಿಎಂಸಿ
ಒಳ ಹರಿವು - 1,515 ಕ್ಯೂಸೆಕ್
ಹೊರ ಹರಿವು - 543 ಕ್ಯೂಸೆಕ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment