/newsfirstlive-kannada/media/post_attachments/wp-content/uploads/2024/07/KRS-1.jpg)
ಮಂಡ್ಯ: ರಾಜ್ಯದ ಕೆಲವು ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಅದರಲ್ಲೂ ಮಲೆನಾಡು ಭಾಗದಲ್ಲಿ ಮಳೆಯ ಅರ್ಭಟ ಜೋರಾಗಿದೆ. ಇತ್ತ ಕಾವೇರಿ ಜಲಾನಯನ ಪ್ರದೇಶದಲ್ಲೂ ಕೂಡ ಉತ್ತಮ ಮಳೆಯಾಗುತ್ತಿದ್ದು, ಕೆಆರ್‌ಎಸ್ ಡ್ಯಾಂನ ನೀರಿನ ಮಟ್ಟ ಏರಿಕೆಯಾಗುತ್ತಿದೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜ ಸಾಗರ ಅಣೆಕಟ್ಟಿಗೆ 11,189 ಕ್ಯೂಸೆಕ್ ಕ್ಯೂಸೆಕ್ ನೀರು ಒಳಹರಿವು ಬರುತ್ತಿದೆ. ಆದರೆ ನಿನ್ನೆಗಿಂತ ಇಂದು ಒಳಹರಿವಿನ ಪ್ರಮಾಣದಲ್ಲಿ ಇಳಿಕೆಯಾಗಿದೆ.
ನಿನ್ನೆ ಒಳಹರಿವಿನ ಪ್ರಮಾಣ 14,135 ಕ್ಯೂಸೆಕ್ ಇತ್ತು. ಆದರೆ ಕೊಡಗು ಭಾಗದಲ್ಲಿ ಮಳೆ ಅಲ್ಪ ಪ್ರಮಾಣದಲ್ಲಿ ತಗ್ಗಿದ ಹಿನ್ನಲೆ, ನಿನ್ನೆಗಿಂತಲೂ ಇಂದು ಒಳಹರಿವಿನಲ್ಲಿ ಇಳಿಕೆ ಕಂಡಿದೆ. ಹಾಗಾಗಿ ಡ್ಯಾಂನ ನೀರಿನ ಮಟ್ಟ 99.30 ಅಡಿಗೆ ಏರಿಕೆ ಕಂಡಿದೆ.
ಇದನ್ನೂ ಓದಿ: ಮುಂದಿನ 3 ದಿನ ಕಾಲ ಭಾರೀ ಮಳೆಯಾಗಲಿದೆ.. ಯಾವ್ಯಾವ ಜಿಲ್ಲೆಗೆ ರೆಡ್ ಅಲರ್ಟ್? ಯೆಲ್ಲೋ ಅಲರ್ಟ್? ಇಲ್ಲಿದೆ ಮಾಹಿತಿ
ಸದ್ಯ 124.80 ಗರಿಷ್ಠ ಮಟ್ಟದ ಡ್ಯಾಂನಲ್ಲಿ 99.30 ಅಡಿ ನೀರು ಸಂಗ್ರಹವಾಗಿದೆ. ನಿನ್ನೆ 98.10 ಅಡಿ ನೀರು ಸಂಗ್ರಹವಾಗಿತ್ತು. 49.452 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ ಸದ್ಯ 22.267 ಟಿಎಂಸಿ ನೀರು ಸಂಗ್ರಹವಾಗಿದೆ.
ಇಂದಿನ ಕೆಆರ್‌ಎಸ್ ನೀರಿನ ಮಟ್ಟ
- ಗರಿಷ್ಠ ಮಟ್ಟ - 124.80 ಅಡಿ.
- ಇಂದಿನ ಮಟ್ಟ - 99.30 ಅಡಿ.
- ಗರಿಷ್ಠ ಸಾಂದ್ರತೆ - 49.452 ಟಿಎಂಸಿ
- ಇಂದಿನ ಸಾಂದ್ರತೆ - 22.267 ಟಿಎಂಸಿ
- ಒಳ ಹರಿವು - 11,189 ಕ್ಯೂಸೆಕ್
- ಹೊರ ಹರಿವು - 540 ಕ್ಯೂಸೆಕ್
ನಿನ್ನೆ ಕೆಆರ್‌ಎಸ್ ನೀರಿನ ಮಟ್ಟ
- ಗರಿಷ್ಠ ಮಟ್ಟ – 124.80 ಅಡಿಗಳು
- ಇಂದಿನ ಮಟ್ಟ – 98.10 ಅಡಿಗಳು
- ಗರಿಷ್ಠ ಸಾಮರ್ಥ್ಯ – 49.452 ಟಿಎಂಸಿ
- ಇಂದಿನ ಸಾಮರ್ಥ್ಯ – 21.978 ಟಿಎಂಸಿ
- ಒಳ ಹರಿವು – 14,135 ಕ್ಯೂಸೆಕ್
- ಹೊರ ಹರಿವು – 532 ಕ್ಯೂಸೆಕ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ