/newsfirstlive-kannada/media/post_attachments/wp-content/uploads/2024/06/KRS.jpg)
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆರಾಯನ ಆರ್ಭಟ ಮುಂದುವರಿದಿದೆ. ಪರಿಣಾಮ ಕೆಆರ್‌ಎಸ್ ಅಣೆಕಟ್ಟೆಗೆ 11,027 ಕ್ಯೂಸೆಕ್ ಒಳಹರಿವು ಬಂದಿದೆ.
ಈ ಮೂಲಕ ಕೆಆರ್‌ಎಸ್ ಡ್ಯಾಂನ ನೀರಿನ ಮಟ್ಟ 102 ಅಡಿಗೆ ಏರಿಕೆ ಕಂಡಿದೆ. 124.80 ಅಡಿ ಗರಿಷ್ಠ ಮಟ್ಟದ ಡ್ಯಾಂನಲ್ಲಿ 102 ಅಡಿ ನೀರು ಸಂಗ್ರಹ ಆಗಿದೆ. 49.452 ಟಿಎಂಸಿ ಸಾಮರ್ಥ್ಯದ ಡ್ಯಾಂಲ್ಲಿ 24.417 ಟಿಎಂಸಿ ನೀರು ಶೇಖರಣೆಯಾಗಿದೆ. ನಿನ್ನೆ 6185 ಕ್ಯೂಸೆಕ್ ಇದ್ದ ಒಳಹರಿವು, ಇಂದು 11,027 ಕ್ಯೂಸೆಕ್ಗೆ ಹೆಚ್ಚಾಗಿದೆ. ಕುಡಿಯುವ ನೀರಿಗಾಗಿ ಡ್ಯಾಂನಿಂದ 562 ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗುತ್ತಿದೆ.
ಇಂದಿನ ಕೆಆರ್‌ಎಸ್ ನೀರಿನ ಮಟ್ಟ
- ಗರಿಷ್ಠ ಮಟ್ಟ- 124.80 ಅಡಿ
- ಇಂದಿನ ಮಟ್ಟ- 102.00 ಅಡಿ
- ಗರಿಷ್ಠ ಸಾಂಧ್ರತೆ- 49.452 ಟಿಎಂಸಿ
- ಇಂದಿನ ಸಾಂಧ್ರತೆ- 24.417 ಟಿಎಂಸಿ
- ಒಳ ಹರಿವು- 11,027 ಕ್ಯೂಸೆಕ್
- ಹೊರ ಹರಿವು- 562 ಕ್ಯೂಸೆಕ್
ಕಬಿನಿ ಜಲಾಶಯ
- ಒಳಹರಿವು: 5039 ಕ್ಯುಸೆಕ್
- ಹೊರಹರಿವು: 3250 ಕ್ಯುಸೆಕ್
- ಕಬಿನಿ ಡ್ಯಾಂ ಭರ್ತಿಗೆ ಒಂದೂವರೆ ಅಡಿ ಮಾತ್ರ ಬಾಕಿ
ಇದನ್ನೂ ಓದಿ:ವಿಶ್ವ ಚಾಂಪಿಯನ್ನರಿಗೆ ದೊಡ್ಡ ಮುಖಭಂಗ.. ಜಿಂಬಾಬ್ವೆ ವಿರುದ್ಧ ಸೋಲಿಗೆ ಕಾರಣ ಇಲ್ಲಿದೆ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ