/newsfirstlive-kannada/media/post_attachments/wp-content/uploads/2024/06/KRS.jpg)
ಮಂಡ್ಯ: ರೈತರು ಮಳೆ ನಂಬಿಕೊಂಡು ಬದುಕು ಸಾಗಿಸುತ್ತಿದ್ದಾರೆ. ವರ್ಷದಲ್ಲಿ ಸರಿಯಾಗಿ ಮಳೆಯಾದರೆ ಕೆರೆ, ಕಟ್ಟೆಗಳು, ಡ್ಯಾಮ್ಗಳು ತುಂಬಿ ಬೆಳೆಗಳಿಗು ನೀರು ಹರಿಸಲಾಗುತ್ತದೆ. ಈ ಬಾರಿ ಮಳೆ ಸುರಿಯುತ್ತಿದ್ದರು ಜಲಾಶಯಗಳಿಗೆ ಸಾಕಾಗುತ್ತಿಲ್ಲ. ಸದ್ಯ ಮುಂಗಾರು ಮಳೆ ಚಾಲ್ತಿಯಲ್ಲಿದ್ದು ಎಲ್ಲ ಕಡೆ ವರುಣ ಜೋರಾಗಿ ಕೃಪೆ ತೋರಿದರೆ ಡ್ಯಾಮ್ಗಳ ಒಳ ಹರಿವು, ಹೊರ ಹರಿವು ಹೆಚ್ಚಾಗುತ್ತದೆ. ಸದ್ಯ ಕೆಆರ್‌ಎಸ್ ಜಲಾಶಯದ ಒಳಹರಿವು, ಹೊರ ಹರಿವಿನ ಮಟ್ಟ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ.
ಇದನ್ನೂ ಓದಿ:ಟ್ರಕ್ಕಿಂಗ್ಗೆ ಹೋದವರ ದುರಂತ ಅಂತ್ಯ.. 9 ಜನರ ಪೈಕಿ 4 ಮೃತದೇಹಗಳಿಗಾಗಿ ಮುಂದುವರೆದ ಶೋಧಕಾರ್ಯ
ಕಳೆದೆರಡು ದಿನಗಳಿಗೆ ಹೋಲಿಸಿದರೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದೆ. ಹೀಗಾಗಿ ನೀರಿನ ಒಳಹರಿವು ಕೊಂಚ ಬದಲಾವಣೆಯಾಗಿದೆ. ಆದರೂ ಕೆಆರ್‌ಎಸ್ ಡ್ಯಾಂನ ನೀರಿನ ಮಟ್ಟದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಇಂದಿನ ಕೆಆರ್‌ಎಸ್ ನೀರಿನ ಮಟ್ಟ
- ಗರಿಷ್ಠ ಮಟ್ಟ- 124.80 ಅಡಿ
- ಇಂದಿನ ಮಟ್ಟ- 84.60 ಅಡಿ
- ಗರಿಷ್ಠ ಸಾಂದ್ರತೆ- 49.452 ಟಿಎಂಸಿ
- ಇಂದಿನ ಸಾಂದ್ರತೆ- 12.965 ಟಿಎಂಸಿ
- ಒಳ ಹರಿವು- 1,470 ಕ್ಯೂಸೆಕ್
- ಹೊರ ಹರಿವು- 550 ಕ್ಯೂಸೆಕ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ