KRS Dam: ಎರಡು ವಾರದಿಂದ ಒಳ ಹರಿವು ಹೆಚ್ಚಳ.. 100 ಅಡಿ ಭರ್ತಿ! ಸದ್ಯ ಎಷ್ಟಿದೆ ನೀರಿನ ಮಟ್ಟ?

author-image
AS Harshith
Updated On
ದಿನದಿಂದ ದಿನಕ್ಕೆ ಒಡಲು ತುಂಬಿಸುತ್ತಿದ್ದಾಳೆ ಕಾವೇರಿ.. ಇಂದು ಎಷ್ಟಿದೆ ಗೊತ್ತಾ ನೀರಿನ ಮಟ್ಟ?
Advertisment
  • ರೈತರಿಗೆ ಸಂತಸದ ಸುದ್ದಿ.. ಕೆಆರ್​ಎಸ್​​ 100 ಅಡಿ ಭರ್ತಿ
  • ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿತ್ತಿರುವ ಮುಂಗಾರು ಮಳೆ
  • ಕೆಆರ್​ಎಸ್​ ಡ್ಯಾಂ ಭರ್ತಿಯಾಗಲು ಇನ್ನೆಷ್ಟು ಅಡಿ ಬಾಕಿ ಇದೆ?

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಮಳೆ ಸುರಿಯುತ್ತಿದ್ದು, ಕೃಷ್ಣರಾಜ ಸಾಗರ ಅಣೆಕಟ್ಟು 100 ಅಡಿ ಭರ್ತಿಯಾಗಿದೆ.

ಕಳೆದ 15 ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಚುರುಕುಗೊಂಡಿದೆ. ಹೀಗಾಗಿ ಕೆಆರ್‌ಎಸ್ ಡ್ಯಾಂ‌ಗೆ ಎರಡು ವಾರದಿಂದ ಸರಾಸರಿ 10 ಸಾವಿರ ಕ್ಯೂಸೆಕ್‌ಗೆ ಒಳಹರಿವು ಬರುತ್ತಿದೆ. ಇದರ ಬೆನ್ನಲ್ಲೇ ಇದೀಗ ಕೆಆರ್‌ಎಸ್ ಡ್ಯಾಂ 100 ಅಡಿ ಭರ್ತಿಯಾಗಿದೆ.

ಇದನ್ನೂ ಓದಿ:ತಲೆ ಮೇಲೆ ಕಲ್ಲು ಎತ್ತಿಹಾಕಿ ವ್ಯಕ್ತಿಯ ಭೀಕರ ಕೊಲೆ; ಆರೋಪಿ ಅರೆಸ್ಟ್​, ಹತ್ಯೆಯ ಕಾರಣ ಮಾತ್ರ ವಿಚಿತ್ರ

ಕೆಆರ್‌ಎಸ್ ಅಣೆಕಟ್ಟು 100 ಅಡಿ ಭರ್ತಿಯಾದ ಹಿನ್ನೆಲೆ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಇನ್ನಷ್ಟು ಚುರುಕುಗೊಂಡರೆ ಶೀಘ್ರ ಕೆಆರ್‌ಎಸ್ ಭರ್ತಿಯಾಗಲಿದೆ.

ಇದನ್ನೂ ಓದಿ:ಕೊಲೆಗೂ ಮುನ್ನ ರೇಣುಕಾಸ್ವಾಮಿಗೆ ಹೊಟ್ಟೆ ತುಂಬಾ ಊಟ ಕೊಟ್ಟಿದ್ರಂತೆ.. ದರ್ಶನ್​ ಬರೋವರೆಗೂ ಏನೆಲ್ಲಾ ಮಾಡಿದ್ರು?

ಇನ್ನು 100 ಅಡಿ ಭರ್ತಿಯಾದ ಹಿನ್ನೆಲೆ ರೈತರಿಗೆ ಸರ್ಕಾರ ಸಿಹಿಸುದ್ದಿ ನೀಡಿದೆ. ಜುಲೈ 8 ರಿಂದ ನಾಲೆಗಳಿಗೆ ನೀರು ಹರಿಸಲು ಪ್ಲಾನ್ ಮಾಡಿಕೊಂಡಿದೆ. ನಾಳೆ ಬೆಂಗಳೂರಿನಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ನಾಲೆಗೆ ನೀರು ಹರಿಸಲು ಅಧಿಕೃತ ಆದೇಶ ಹೊರಡಿಸಲು ಸರ್ಕಾರ ನಿರ್ಧಾರ ಮಾಡಲಿದೆ.

ಇಂದಿನ ಕೆಆರ್‌ಎಸ್ ನೀರಿನ ಮಟ್ಟ

ಗರಿಷ್ಠ ಮಟ್ಟ - 124.80 ಅಡಿ.
ಇಂದಿನ ಮಟ್ಟ - 100.30 ಅಡಿ.
ಗರಿಷ್ಠ ಸಾಂದ್ರತೆ - 49.452 ಟಿಎಂಸಿ
ಇಂದಿನ ಸಾಂದ್ರತೆ - 23.047 ಟಿಎಂಸಿ
ಒಳ ಹರಿವು - 9,686 ಕ್ಯೂಸೆಕ್
ಹೊರ ಹರಿವು - 546 ಕ್ಯೂಸೆಕ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment