ಕೋರ್ಟ್ಗೆ ಹೋಗಲು ಖಾಸಗಿ ಶಾಲೆಗಳ ಒಕ್ಕೂಟ ಕೃಪಾ ಸಿದ್ಧತೆ
ಶಿಕ್ಷಣ ಇಲಾಖೆ ವಿರುದ್ಧ ಮತ್ತೆ ಕೋರ್ಟ್ ಮೆಟ್ಟಿಲೇರುವ ನಿರ್ಧಾರ
ಇಲಾಖೆಗೆ ರಾಜ್ಯೋತ್ಸವ ದಿನ ಡೆಡ್ ಲೈನ್, ಇದು ಕೊನೆ ಎಚ್ಚರಿಕೆ
ಕನ್ನಡ ರಾಜ್ಯೋತ್ಸವ ಅಂದರೆ ಸಂತೋಷ ಸಡಗರ ಜೊತೆಗೆ ನಾಡಿನಾದ್ಯಂತ ಭಾಷಾ ಪ್ರೇಮಿಗಳ ಹಬ್ಬಕ್ಕೆ ಸಾಕ್ಷಿಯಾಗುವ ದಿನ. ಆದ್ರೆ ಸರ್ಕಾರದ ಮೇಲಿನ ಸಿಟ್ಟಿಗೆ ಅವರೆಲ್ಲಾ ಸೇರಿ ಅದೇ ದಿನವನ್ನು ಕರಾಳ ದಿನವನ್ನಾಗಿ ಆಚರಣೆ ಮಾಡಲು ಹೊರಟಿದ್ದಾರೆ. ಹಾಗಾದ್ರೆ ಏನಿದು ಕಹಾನಿ ಗೊತ್ತಾ?.
ಮಾನ್ಯತೆ ನವೀಕರಣ.. ಕಟ್ಟಡ ಪ್ಲಾನ್ ವಿಚಾರ
ಆರ್ಟಿಇ ಸೀಟ್ ಸಮಸ್ಯೆ, ಆರ್ಟಿಇ ಶುಲ್ಕ ಮರು ಪಾವತಿ ಸಮಸ್ಯೆ. ಕನ್ನಡ ಶಾಲೆಗಳಿಗೆ ಅನುದಾನ ಕೊಡದೇ ಕಾಡಿಸುವುದು. ಒಂದಾ, ಎರಡಾ ಶಿಕ್ಷಣ ಇಲಾಖೆ ಮೇಲೆ ಖಾಸಗಿ ಶಾಲೆಗಳ ಒಕ್ಕೂಟಗಳ ಸಮಸ್ಯೆ ಲಿಸ್ಟ್ ಮುಗಿಯುವುದೆ ಇಲ್ಲ. ಶಿಕ್ಷಣ ಇಲಾಖೆ ಅಧಿಕಾರಿಗಳು ಕೂಡ ಈ ಸಮಸ್ಯೆಗಳಿಗೆ ಕೊನೆ ಹಾಡುವ ಕೆಲಸವೂ ಮಾಡುತ್ತಿಲ್ಲ. ಸದ್ಯ ಈಗ ಖಾಸಗಿ ಶಾಲೆಗಳ ಒಕ್ಕೂಟ ಕೃಪಾ ಮತ್ತೆ ಕೋರ್ಟ್ ಕಟ ಕಟೆ ಹತ್ತಲು ಸಿದ್ಧವಾಗಿದೆ.
ನಗರದ ಖಾಸಗಿ ಹೋಟೆಲ್ನಲ್ಲಿ ಕೃಪಾ ಖಾಸಗಿ ಶಾಲೆಗಳ ಒಕ್ಕೂಟ ಸಭೆ ಸೇರಿ ಒಕ್ಕೊರಲಿನ ನಿರ್ಣಯ ತೆಗೆದುಕೊಂಡು ಮಾಧ್ಯಮಗೋಷ್ಠಿ ನಡೆಸಿಸಿವೆ. ಶಿಕ್ಷಣ ಇಲಾಖೆ ವಿರುದ್ಧ ಮತ್ತೆ ಕೋರ್ಟ್ ಮೆಟ್ಟಿಲೇರುವ ನಿರ್ಧಾರ ಮಾಡಲಾಗಿದೆ. ರಾಜ್ಯೋತ್ಸವ ಇಲಾಖೆಗೆ ಡೆಡ್ ಲೈನ್ ಆಗಿದ್ದು ಕೊನೆಯ ವಾರ್ನಿಂಗ್ ಒಳಗಡೆ ಸಮನ್ವಯತೆ ಸಭೆ ನಡೆಸದೇ ಇದ್ದರೆ ಕೋರ್ಟ್ ಅಲ್ಲೇ ವಿಚಾರ ಬಗೆ ಹರಿಸಿಕೊಳ್ಳುವ ನಿರ್ಧಾರ ಮಾಡಿದೆ.
10 ವರ್ಷಕ್ಕೊಮ್ಮೆ ಮಾನ್ಯತೆ ನವೀಕರಣದ ಆದೇಶ ಇದ್ರು ಕೂಡ ಒಂದಿಲ್ಲೊಂದು ತಗಾದೆ ತೆಗೆದು ಕಿರಿ ಕಿರಿ ಮಾಡುವ ಆರೋಪ ಇದೆ. 1995 ನಂತರದ ಶಾಲೆಗಳು ಕನ್ನಡ ಭಾಷೆಯನ್ನು ಮಕ್ಕಳಿಗೆ ಕಲಿಸುವ ಶಾಲೆಗಳಿಗೆ ಅನುದಾನ ಕೊಡದೇ ವಂಚನೆ ಆಗುತ್ತಿದ್ದು, ಒಂದಲ್ಲ ಎರಡಲ್ಲ ಬರೋಬ್ಬರಿ 29 ವರ್ಷಗಳಿಂದ ಅನುದಾನ ಕೊಡದೇ ಎಷ್ಟೋ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿವೆ. 3-4 ವರ್ಷ ಕಳೆದರೂ ಆರ್ಟಿಇ ಶುಲ್ಕ ಮರು ಪಾವತಿ ಮಾಡುತ್ತಿಲ್ಲ ಅಂತ ಆರೋಪಿಸುತ್ತಿರುವ ಒಕ್ಕೂಟ ಕನ್ನಡ ರಾಜ್ಯೋತ್ಸವ ದಿನ ಕರಾಳ ದಿನಾಚರಣೆ ಮಾಡಲು ನಿರ್ಧರಿಸಿದೆ.
ಇದನ್ನೂ ಓದಿ: ONGC; ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.. SSLC, PUC, ಐಟಿಐ ಸೇರಿ ಪದವೀಧರರಿಗೂ ಅವಕಾಶ
ನವೆಂಬರ್-1 ರಂದು ಕಪ್ಪು ಪಟ್ಟಿ ಧರಿಸಿ ರಾಜ್ಯೋತ್ಸವ ಆಚರಣೆ ಮಾಡೋದರ ಜೊತೆಗೆ ಕೋರ್ಟ್ ಮೆಟ್ಟಿಲು ಏರುವ ವಾರ್ನಿಂಗ್ ಶಿಕ್ಷಣ ಇಲಾಖೆಗೆ ಕೊಟ್ಟಿದೆ. ಸದ್ಯ ಖಾಸಗಿ ಶಾಲೆಗಳ ಒಕ್ಕೂಟಕ್ಕೆ ಇಲಾಖೆ ಬಗ್ಗುತ್ತಾ? ಇಲ್ಲ ಕಪ್ಪು ಪಟ್ಟಿ ಧರಿಸಿದ ಶಿಕ್ಷಕರ ಜೊತೆ ಮಕ್ಕಳು ಕನ್ನಡ ರಾಜ್ಯೋತ್ಸವ ಆಚರಿಸುವ ಪರಿಸ್ಥಿತಿ ಬರುತ್ತಾ ಕಾದು ನೋಡಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ