newsfirstkannada.com

ಎಲೆಕ್ಷನ್‌ ಹೊಸ್ತಿಲಲ್ಲೇ ಎಡವಿದ್ರಾ ಕೆ.ಎಸ್​ ಈಶ್ವರಪ್ಪ? ಶಿವಮೊಗ್ಗದ ಬಂಡಾಯಕ್ಕೆ ಹೊಸ ಟ್ವಿಸ್ಟ್; ಏನದು?

Share :

Published March 19, 2024 at 6:22pm

Update March 19, 2024 at 6:16pm

    ಶಿವಮೊಗ್ಗದಲ್ಲಿ ಪಕ್ಷೇತರರಾಗಿ ಸ್ಪರ್ಧೆ ಮಾಡುವುದಾಗಿ ಈಶ್ವರಪ್ಪ ಘೋಷಣೆ

    ಮೋದಿ ಕಾರ್ಯಕ್ರಮದಿಂದ ದೂರ ಉಳಿದಿದ್ದು ಈಶ್ವರಪ್ಪ ಅವರಿಗೇ ನಷ್ಟ

    ಯಡಿಯೂರಪ್ಪ​ ಬುಲಾವ್​ ನೀಡಿದ್ರೂ ದೆಹಲಿಗೆ ಹೋಗದೇ ಯಡವಟ್ಟು!

ಬೆಂಗಳೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿ.ಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರ ವಿರುದ್ಧ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಬುಸುಗುಟ್ಟುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸ್ವಾತಂತ್ರ್ಯ ಅಭ್ಯರ್ಥಿಯಾಗಿ ಅಖಾಡಕ್ಕಿಳಿಯುವ ಮುನ್ಸೂಚನೆಯನ್ನು ನೀಡಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗಕ್ಕೆ ಬಂದು ಹೋದ ಮೇಲೆ ಪರಿಸ್ಥಿತಿ ಬದಲಾಗಿದೆ.

ತನ್ನ ಮಗನಿಗೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಕೈ ತಪ್ಪಿದ್ದಕ್ಕೆ ಈಶ್ವರಪ್ಪ ಬಿಜೆಪಿ ನಾಯಕರ ಗರಂ ಆಗಿದ್ದರು. ಆದ್ರೀಗ ಚುನಾವಣೆ ಹೊಸ್ತಿಲಲ್ಲೇ ಕೆ.ಎಸ್‌ ಈಶ್ವರಪ್ಪ ಎಡವಿದ್ರಾ ಅನ್ನೋ ಮಾತು ಕೇಳಿ ಬರ್ತಿದೆ. ಈಶ್ವರಪ್ಪ ಮಾಡಿದ ಒಂದೇ ಒಂದು ತಪ್ಪಿಗೆ ಅತಿದೊಡ್ಡ ಬೆಲೆಯನ್ನು ತರಬೇಕಾಗುತ್ತದೆ ಅನ್ನೋ ಚರ್ಚೆಯಾಗುತ್ತಿದೆ.

ಇದನ್ನೂ ಓದಿ: ಬಿಜೆಪಿಗೆ ಸೆಡ್ಡು ಹೊಡೆಯುತ್ತಾರಾ ಸದಾನಂದಗೌಡ; ಒಕ್ಕಲಿಗ ನಾಯಕರ ಜೊತೆ ಭರ್ಜರಿ ಪ್ಲಾನ್!

ಮಾಜಿ ಸಚಿವ ಕೆ.ಎಸ್‌ ಈಶ್ವರಪ್ಪ ಅವರಿಗೆ ದೆಹಲಿಗೆ ಬರುವಂತೆ ಬಿಎಸ್‌ ಯಡಿಯೂರಪ್ಪ ಬುಲಾವ್ ನೀಡಿದ್ದರು. ಆದರೆ ಅವರು ಹೋಗಿರಲಿಲ್ಲ. ಟಿಕೆಟ್ ಬಗ್ಗೆ ಚರ್ಚಿಸಲು ಹೇಳಿದ್ರೂ ದೂರ ಉಳಿದಿದ್ದಾರೆ. ಅದಕ್ಕಿಂತಲೂ ಮುಖ್ಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಬಿಜೆಪಿ ಸಭೆಯಿಂದಲೂ ಈಶ್ವರಪ್ಪನವರು ದೂರ ಉಳಿದಿದ್ದಾರೆ.

ಹೀಗಾಗಿ ಕೆ.ಎಸ್ ಈಶ್ವರಪ್ಪನವರ ಗೈರಿನಿಂದ ಪಕ್ಷಕ್ಕೆ ಯಾವುದೇ ಹಾನಿಯಿಲ್ಲ ಎನ್ನಲಾಗುತ್ತಿದೆ. ಮೋದಿ ಕಾರ್ಯಕ್ರಮದಿಂದ ದೂರ ಉಳಿದಿದ್ದು ಈಶ್ವರಪ್ಪ ಅವರಿಗೆ ಲಾಭಕ್ಕಿಂತ ಹೆಚ್ಚು ನಷ್ಟವಾಗಲಿದೆ. ಶಿವಮೊಗ್ಗದ ಪ್ರಬಲ ನಾಯಕನೇ ಮೋದಿ ಕಾರ್ಯಕ್ರಮಕ್ಕೆ ಬಂದಿಲ್ಲ ಅನ್ನೋದು ಹೈಕಮಾಂಡ್‌ ಗಮನ ಸೆಳೆದಿದೆ. ಪಕ್ಷೇತರರಾಗಿ ಸ್ಪರ್ಧೆ ಮಾಡುವುದಾಗಿ ಘೋಷಿಸಿರುವ ಈಶ್ವರಪ್ಪನವರು ಈಗ ಬಿಜೆಪಿ ನಾಯಕರ ಕೆಂಗಣ್ಣಿಗೂ ಗುರಿಯಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಎಲೆಕ್ಷನ್‌ ಹೊಸ್ತಿಲಲ್ಲೇ ಎಡವಿದ್ರಾ ಕೆ.ಎಸ್​ ಈಶ್ವರಪ್ಪ? ಶಿವಮೊಗ್ಗದ ಬಂಡಾಯಕ್ಕೆ ಹೊಸ ಟ್ವಿಸ್ಟ್; ಏನದು?

https://newsfirstlive.com/wp-content/uploads/2024/03/Eshwarappa-PM-modi.jpg

Load More