KSRTC- ಶಾಲಾ ಬಸ್ ಮಧ್ಯೆ ಭೀಕರ ಆಕ್ಸಿಡೆಂಟ್​​.. ಕಾಲು ಕಳೆದುಕೊಂಡ ಮಕ್ಕಳು, ಇಬ್ಬರು ಬಾಲಕರು ಸಾವು

author-image
Bheemappa
Updated On
KSRTC- ಶಾಲಾ ಬಸ್ ಮಧ್ಯೆ ಭೀಕರ ಆಕ್ಸಿಡೆಂಟ್​​.. ಕಾಲು ಕಳೆದುಕೊಂಡ ಮಕ್ಕಳು, ಇಬ್ಬರು ಬಾಲಕರು ಸಾವು
Advertisment
  • KSRTC ವತಿಯಿಂದ ಮೃತಪಟ್ಟ ಮಕ್ಕಳ ಕುಟುಂಬಸ್ಥರಿಗೆ ಪರಿಹಾರ
  • ಆಕ್ಸಿಡೆಂಟ್​​ನಲ್ಲಿ ದಾರುಣವಾಗಿ ಮೃತಪಟ್ಟಿರುವ ವಿದ್ಯಾರ್ಥಿಗಳು
  • ಆಸ್ಪತ್ರೆಯಲ್ಲಿ ಮಕ್ಕಳ ಸ್ಥಿತಿ ಕಂಡು ನಿಂತಲ್ಲೇ ಕುಸಿದ ಪೋಷಕರು

ಶಿಕ್ಷಕರ ದಿನಾಚರಣೆ ಇದೆ ಅಂತಾ ವಿದ್ಯಾರ್ಥಿಗಳೆಲ್ಲ ಒಂದು ಗಂಟೆ ಮೊದಲೇ ಶಾಲೆಗೆ ಹೊರಟಿದ್ದರು. ಆದರೆ ಮನೆ ಬಿಟ್ಟ ಅರ್ಧ ಗಂಟೆಯಲ್ಲಿ ನಡೆದ ಘಟನೆ ಮಾತ್ರ ಘನ‌ಘೋರ. ಶಾಲಾ ವಾಹನ‌ ಹಾಗೂ KSRTC ಬಸ್ ಮುಖಾಮುಖಿ ಡಿಕ್ಕಿಯಿಂದ ಇಬ್ಬರು ಬಾಲಕರು ಮೃತಪಟ್ಟಿದ್ರೆ, ನಾಲ್ವರು ಕಾಲು‌ ಕಳೆದುಕೊಂಡು ಇನ್ನಿತರ ಮಕ್ಕಳು ಗಂಭೀರವಾಗಿ ಗಾಯಗೊಂಡು ನರಕಯಾತನೆ ಅನುಭವಿಸಿದ ಘಟನೆ ರಾಯಚೂರಲ್ಲಿ‌ ನಡೆದಿದೆ.

ಇದನ್ನೂ ಓದಿ: ಶಾಲಾ ಬಸ್‌ ಭೀಕರ ಅಪಘಾತ.. ರಾಯಚೂರಲ್ಲಿ ಹೃದಯವಿದ್ರಾವಕ ಘಟನೆ; ₹5 ಲಕ್ಷ ಪರಿಹಾರ!

publive-image

ಇಂದು ರಾಯಚೂರು ಜಿಲ್ಲೆ ಪಾಲಿಗೆ ಕರಾಳ ದಿನ ಅಂದರೆ ತಪ್ಪಾಗಲ್ಲ. ಯಾಕಂದರೆ, ಮಾನ್ವಿ ತಾಲೂಕಿನ ಕಪಗಲ್ ಬಳಿ ಶಾಲಾ ಬಸ್ ಹಾಗೂ ಸರ್ಕಾರಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ದಾರುಣವಾಗಿ ಸಾವನ್ನಪ್ಪಿದ್ದಾರೆ. ಸಮರ್ಥ್ (7) ಹಾಗೂ ಶ್ರೀಕಾಂತ ( 12) ಚಿಕಿತ್ಸೆ ಫಲಕಾರಿಯಾಗದೆ ರಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಶಾಲೆಯ 40 ಮಕ್ಕಳು, ಬಸ್​ನಲ್ಲಿದ್ದ 20 ಜನ ಸೇರಿ 60ಕ್ಕೂ ಹೆಚ್ಚು ಜನರಿಗೆ ಗಾಯಾಗಳಾಗಿವೆ.

ದುರಂತ ಅಂದರೆ ಘಟನೆಯಲ್ಲಿ ನಾಲ್ವರು ವಿದ್ಯಾರ್ಥಿಗಳ ಕಾಲುಗಳು ತುಂಡಾಗಿದ್ದು, ರಿಮ್ಸ್ ಆಸ್ಪತ್ರೆ ಮುಂದೆ ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು. ಈ ಘಟನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿ ಜೊತೆ ಫೋನ್​ನಲ್ಲಿ ಮಾತನಾಡಿ KSRTC ಕಡೆಯಿಂದ ಮೃತಪಟ್ಟವರಿಗೆ 5 ಲಕ್ಷ ಪರಿಹಾರ ಹಾಗೂ ಗಾಯಾಳುಗಳಿಗೆ 3 ಲಕ್ಷ ಸೇರಿದಂತೆ ಅಗತ್ಯ ಚಿಕಿತ್ಸೆ ನೀಡಲು ಸೂಚಿಸಿದ್ದಾರೆ.

ಮಾನ್ವಿ‌ಯ ಹೊರವಲಯದ ಲೊಯೋಲಾ ಶಿಕ್ಷಣ ಸಂಸ್ಥೆಯ ಮಕ್ಕಳನ್ನ ಕುರುಡಿ ಗ್ರಾಮ ಹಾಗೂ ಇನ್ನಿತರ ಗ್ರಾಮಗಳಿಂದ ಸುಮಾರು 40 ಮಕ್ಕಳನ್ನು ಶಾಲೆಗೆ ಕರೆತರಲಾಗುತ್ತಿತ್ತು. ಇಂದು ಶಿಕ್ಷಕರ ದಿನಾಚರಣೆ ಆಗಿದ್ದರಿಂದ ಬೆಳಗ್ಗೆ 8ರ ಬದಲು 7ಗಂಟೆಗೆ ಮಕ್ಕಳು ಶಾಲೆ ಬಸ್​ನಲ್ಲಿ ಬರುತ್ತಿದ್ದರು. ಈ ವೇಳೆ ಕಪಗಲ್ ಕ್ರಾಸ್ ಬಳಿ ಗುಂಡಿ ತಪ್ಪಿಸಲು ಹೋದ ಸಾರಿಗೆ ಬಸ್​ಗೆ ಎದುರಿನಿಂದ ಬರುತ್ತಿದ್ದ ಶಾಲಾ ಬಸ್ ಭೀಕರವಾಗಿ ಡಿಕ್ಕಿ ಹೊಡೆದಿದೆ. ಈ ವೇಳೆ 17 ಮಕ್ಕಳಿಗೆ ಗಂಭೀರವಾದ ಗಾಯಗಳಾಗಿದ್ರೆ, 23 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇನ್ನೂ ಮೂವರ ಸ್ಥಿತಿ ಚಿಂತಾಜನಕವಾಗಿದೆ. ಸರ್ಕಾರಿ ಬಸ್​‌ನಲ್ಲಿದ್ದ 17 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಇದನ್ನೂ ಓದಿ: ದರ್ಶನ್​​ ಭೇಟಿ ಮಾಡಲು ಬಳ್ಳಾರಿ ಜೈಲಿಗೆ ಬಂದ ಪತ್ನಿ ವಿಜಯಲಕ್ಷ್ಮಿ.. ಕೈಯಲ್ಲಿ ಇದ್ದಿದ್ದು ಏನು?

publive-image

ಸದ್ಯ ಈ ಘಟನೆ ಕುರಿತು ಪೊಲೀಸ್ ತನಿಖೆ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುತ್ತೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಿಕ್ಕಮಾದಯ್ಯ ಹೇಳಿದ್ದಾರೆ. ಇನ್ನೂ ರಿಮ್ಸ್ ಆಸ್ಪತ್ರೆ ಮುಂಭಾಗದಲ್ಲಿ ಮೃತ ಬಾಲಕರ ಪೋಷಕರ ಆಕ್ರಂದನ ಹೇಳತೀರದು. ಈ ವೇಳೆ ಮಾನ್ವಿ ಶಾಸಕ ಹಂಪಯ್ಯ ನಾಯಕ್, ಎಂಎಲ್‌ಸಿ ಶಶೀಲ್ ನಮೋಶಿ ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಪರಸ್ಥಿತಿ ಪರಿಶೀಲನೆ ಮಾಡಿದರು. ಸದ್ಯ ಗಾಯಗೊಂಡವರಿಗೆ ಚಿಕಿತ್ಸೆ ಮುಂದುವರೆದಿದ್ದು, ಕೂಡಲೇ ಎಲ್ಲ ಅಗತ್ಯ ಪರಿಹಾರ ನೀಡುವುದಕ್ಕೆ ಜಿಲ್ಲಾಡಳಿತ ಮುಂದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment