/newsfirstlive-kannada/media/post_attachments/wp-content/uploads/2024/06/kangana.jpg)
ಬಿಜೆಪಿ ಸಂಸದರಾಗಿ ಆಯ್ಕೆಯಾಗಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಮೇಲೆ ಸಿಐಎಸ್‌ಎಫ್ ಸಿಬ್ಬಂದಿ ಕಪಾಳ ಮೋಕ್ಷ ಮಾಡಿದ್ದಾರೆ. ದೇಶದಲ್ಲಿ ತೀವ್ರ ಸಂಚಲನ ಸೃಷ್ಟಿ ಮಾಡಿರುವ ಪ್ರಕರಣ ಇದಾಗಿದೆ. ಪ್ರಕರಣ ಬೆನ್ನಲ್ಲೇ ಕಪಾಳಮೋಕ್ಷ ಮಾಡಿದ ಅಧಿಕಾರಿ ಯಾರು ಅನ್ನೋದ್ರ ಬಗ್ಗೆ ಚರ್ಚೆ ಶುರುವಾಗಿದೆ.
ಇದನ್ನೂ ಓದಿ:ಕಂಗನಾ ಕಪಾಳಕ್ಕೆ ಬಾರಿಸಿದ ಸಿಬ್ಬಂದಿಗೆ ಸಸ್ಪೆಂಡ್ ಶಿಕ್ಷೆ.. ಯಾರು ಈ ಕುಲ್ವಿಂದರ್ ಕೌರ್? ಕೋಪಕ್ಕೆ ಕಾರಣವೇನು?
ಕುಲ್ವಿಂದರ್ ಸಿಂಗ್ ಯಾರು..?
- 35 ವರ್ಷದ ಕುಲ್ವಿಂದರ್ ಕೌರ್ ಅವರು ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (CISF)ಕಾನ್‌ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕುಲ್ವಿಂದರ್ ಕೌರ್ CISF ಗೆ 2009ರಲ್ಲಿ ಸೇರಿಕೊಂಡರು. - 2021ರಿಂದ ಚಂಡಿಗಢ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ.
- ಕುಲ್ವಿಂದರ್ ಕೌರ್ ಅವರು ಪಂಜಾಬ್‌ನ ಸುಲ್ತಾನ್‌ಪುರ್ ಲೊಧಿ ಮೂಲದವರು. ಕಳೆದ ಎರಡು ವರ್ಷದ ಹಿಂದಷ್ಟೇ ಚಂಡಿಗಢ ಏರ್‌ಪೋರ್ಟ್ ಭದ್ರತಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದಾರೆ.
- ಕುಲ್ವಿಂದರ್ ಕೌರ್ ಅವರಿಗೆ ಇಬ್ಬರು ಮಕ್ಕಳಿದ್ದು, ಅವರ ಪತಿ ಕೂಡ CISF ಸಿಬ್ಬಂದಿಯಾಗಿದ್ದಾರೆ. ಇವರ ಪತಿ ಕೂಡ ಇದೇ ಏರ್ಪೋರ್ಟ್ನಲ್ಲಿ ಕೆಲಸ ಮಾಡ್ತಿದ್ದಾರೆ.
- ಕುಲ್ವಿಂದರ್ ಕೌರ್ ಅವರ ಸಹೋದರ ಶೇರ್ ಸಿಂಗ್ ರೈತ ಪರ ಹೋರಾಟಗಾರರು. ಕಿಸಾನ್ ಮಂಜ್ದೂರ್ ಸಂಘರ್ಷ ಕಮಿಟಿಯ ಕಾರ್ಯದರ್ಶಿಯಾಗಿದ್ದರು.
- ಹಲ್ಲೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಇವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಇದನ್ನೂ ಓದಿ:Super Over ಪಂದ್ಯದಲ್ಲಿ ಪಾಕ್ ಸೋಲಿಸಿದ ಅಮೆರಿಕ.. US ಪರ ಸ್ಫೋಟಕ ಬ್ಯಾಟಿಂಗ್ ಮಾಡಿದ ಭಾರತೀಯ..!
ಕಂಗನಾ ಜೊತೆ ಗಲಾಟೆ ಏನು..?
ಹಿಮಾಚಲದ ಪ್ರದೇಶದ ಮಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದಿರುವ ಕಂಗನಾ ರಣಾವತ್ ಚಂಡೀಗಢದಿಂದ ದೆಹಲಿಗೆ ತೆರಳಲು ಹೊರಟಿದ್ದ ವೇಳೆ ಚಂಡೀಗಢದ ಏರ್ಪೋರ್ಟ್ನಲ್ಲಿದ್ದ ಸಿಐಎಸ್ಎಫ್ನ ಮಹಿಳಾ ಸಿಬ್ಬಂದಿ ಸೇವೆ ಸಲ್ಲಿಸುತ್ತಿರುವಾಗಲೇ ಕಪಾಳಮೋಕ್ಷ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
Kulwinder Kaur, the #CISF officer posted at #ChandigarhAirport who slapped actor and #BJP MP #KanganaRanaut, said that her mother was sitting at the #FarmersProtest when Kangana said the protesters sat for Rs 100. pic.twitter.com/zc1UcRp2YG
— Hate Detector 🔍 (@HateDetectors) June 6, 2024
ಕುಲ್ವಿಂದರ್ ಸಿಂಗ್ಗೆ ಯಾಕೆ ಕೋಪ..?
2020ರಲ್ಲಿ ಕೇಂದ್ರ ಸರ್ಕಾರ ಅಂಗೀಕರಿಸಿದ್ದ ಮೂರು ಕೃಷಿ ಕಾಯಿದೆಗಳ ವಿರುದ್ಧ ಪಂಜಾಬ್ ಮತ್ತು ಹರಿಯಾಣ ಭಾಗದ ರೈತರು ದೆಹಲಿಯಲ್ಲಿ ಉಗ್ರ ಹೋರಾಟ ನಡೆಸಿದ್ದರು. ರೈತರಿಗೆ ಮಂಡಿ ಕ್ಷೇತ್ರದಿಂದ ನೂತನ ಸಂಸದರಾಗಿ ಆಯ್ಕೆಯಾಗಿರುವ ಕಂಗನಾ ರಣಾವತ್, ಪ್ರತಿಭಟನೆ ಮಾಡುತ್ತಿದ್ದ ರೈತರನ್ನು ಖಲಿಸ್ತಾನಿ ಉಗ್ರರು ಎಂದು ಕರೆದಿದ್ದರು. ಈ ಹೇಳಿಕೆಯಿಂದ ಸಿಟ್ಟಿಗೆದ್ದ CISF ಅಧಿಕಾರಿ ಕುಲ್ವಿಂದರ್ ಕೌರ್, ಕಂಗನಾ ಅವರು ಚಂಡೀಗಢ ಏರ್ಪೋರ್ಟ್ಗೆ ಆಗಮಿಸುತ್ತಿದಂತೆ ರೈತರಿಗೆ ಅವಮಾನ ಮಾಡಿದ್ದರೆಂದು ಕಪಾಳ ಮೋಕ್ಷ ಮಾಡಿದ್ದಾರೆ.
ಇದನ್ನೂ ಓದಿ:ಆ 4 ಖಾತೆ ಕೇಳಂಗಿಲ್ಲ ಎಂದ ಬಿಜೆಪಿ.. ಚೌಕಾಸಿ ಮಾಡಿ ಹೊಸ ಫಾರ್ಮೂಲ ಮುಂದಿಟ್ಟ ನಾಯ್ಡು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ