/newsfirstlive-kannada/media/post_attachments/wp-content/uploads/2024/06/Kushi-2.jpg)
ಬೆಂಗಳೂರು: ಕೊಲೆ ಕೇಸಲ್ಲಿ ಜೈಲು ಸೇರಿರೋ ನಟ ದರ್ಶನ್ ಗೆಳತಿ ಪವಿತ್ರಾ ಗೌಡಗೆ ಧೈರ್ಯವಾಗಿರು ಎಂದು ಮಗಳು ಆತ್ಮಸ್ಥೈರ್ತ ತುಂಬಿದ್ದಾರೆ. ಈ ಸಂಬಂಧ ಇನ್ಸ್ಟಾ ಸ್ಟೋರಿ ಹಾಕಿರೋ ಪವಿತ್ರಾ ಗೌಡ ಮಗಳು ಖುಷಿ, ಧೈರ್ಯವಾಗಿರು. ಯಾವಾಗಲೂ ಹೀಗೆ ಇರಲ್ಲ, ಕಾಲ ಬದಲಾಗುತ್ತದೆ. ಈಗ ಗುಡುಗು ಇರಬಹುದು, ಹಾಗಂತ ಸದಾ ಮಳೆ ಬರಲು ಸಾಧ್ಯವಿಲ್ಲ ಎಂದಿದ್ದಾರೆ.
ಇನ್ನು, ಇತ್ತೀಚೆಗಷ್ಟೇ ಖುಷಿ ಅವ್ರು, ತನ್ನ ತಾಯಿ ಪವಿತ್ರಾ ಗೌಡಗೆ ಅಪ್ಪಂದಿರ ದಿನದ ಶುಭಾಶಯಗಳು ತಿಳಿಸಿದ್ರು. ನನ್ನ ಎಲ್ಲಾ ಆಗಿರುವ ಅಮ್ಮನಿಗೆ ಹ್ಯಾಪಿ ಫಾದರ್ಸ್ ಡೇ ಎಂದು ಇನ್ಸ್ಟಾ ಸ್ಟೋರಿ ಮೂಲಕ ವಿಶ್ ಮಾಡಿದ್ರು.
ಪವಿತ್ರಾ ಗೌಡಗೆ ಖುಷಿ ಹೆಸರಿನ ಮಗಳಿದ್ದಾಳೆ. ಪವಿತ್ರಾ ಗೌಡ ಹಾಗೂ ಮಾಜಿ ಗಂಡ ಸಂಜಯ್ ಸಿಂಗ್ ಜೋಡಿಗೆ ಜನಿಸಿದ ಮಗಳು ಖುಷಿ ಎನ್ನಲಾಗಿದೆ. ಸದ್ಯ ದರ್ಶನ್ ಗೆಳತಿ ಪವಿತ್ರಾ ಗೌಡ ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಕೇಸಿನಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದು, ಖುಷಿಗೆ ತನ್ನ ಜತೆ ಅಮ್ಮನಿಲ್ಲ ಎಂಬ ಕೊರಗು ಕಾಡುತ್ತಿದೆ.
ಇದನ್ನೂ ಓದಿ:VIDEO: ‘ಕೈ ಮುಗಿತೀನಿ ಬಿಟ್ಬಿಡಿ..’- ಜಾಸ್ತಿ ಪ್ರಶ್ನೆ ಕೇಳಿದ್ದಕ್ಕೆ ಪೊಲೀಸ್ರ ಕಾಲಿಗೆ ಬಿದ್ದ ದರ್ಶನ್!