Advertisment

ಟೀ ಮಾಡಿ ಲಕ್ಷ ಲಕ್ಷ ದುಡಿಯೋ ಈ ಹುಡುಗ ಬೆಳೆದಿದ್ದೇ ರೋಚಕ; ಈತನ ಸಂಭಾವನೆ ಕೇಳಿದ್ರೆ ಶಾಕ್​ ಆಗ್ತೀರಾ!

author-image
Gopal Kulkarni
Updated On
ಟೀ ಮಾಡಿ ಲಕ್ಷ ಲಕ್ಷ ದುಡಿಯೋ ಈ ಹುಡುಗ ಬೆಳೆದಿದ್ದೇ ರೋಚಕ; ಈತನ ಸಂಭಾವನೆ ಕೇಳಿದ್ರೆ ಶಾಕ್​ ಆಗ್ತೀರಾ!
Advertisment
  • ಗೂಡಂಗಡಿಯಲ್ಲಿ ಚಹಾ ಮಾರುತ್ತಿದ್ದ ಹುಡುಗ ಈಗ ಎಷ್ಟು ಗಳಿಸುತ್ತಿದ್ದಾನೆ ಗೊತ್ತಾ?
  • ಒಂದೇ ಒಂದು ವಿಡಿಯೋ ಆ ಹುಡುಗನ ಹಣೆಬರಹವನ್ನೇ ಚೇಂಜ್ ಮಾಡಿದ್ದು ಹೇಗೆ?
  • ಬಿಲ್​ಗೆಟ್ಸ್​ಗೆ ಚಹಾ ಸರ್ವ್​ ಮಾಡಿದ ಚಾಯ್​ವಾಲಾ ಬದುಕು ಬದಲಾಗಿದ್ದು ಅದ್ಭುತ

ನಾಗ್ಪುರ್: "ದೇನೇ ವಾಲಾ ಶುರು ಕರೆತೋ ಚಪ್ಪನ್ ಪಾಡ್​ ಕೇ ದೇತಾ ಹೈ" ಅಂತ ಹಿಂದಿಯಲ್ಲಿ ಒಂದು ಗಾದೆ ಮಾತು ಇದೆ. ಇದರ ಭಾವಾರ್ಥ ಇಷ್ಟೇ "ಕೊಡುವವನು ಅಂದ್ರೆ ದೇವರು ಕೊಡಬೇಕು ಅಂತ ನಿಂತ್ರೆ ಮೊಗೆದು ಮೊಗೆದು ಕೊಡ್ತಾನೆ" ಅಂತ. ಅದು ಅನೇಕರ ಜೀವನದಲ್ಲಿ ನಿಜವೂ ಕೂಡ ಆಗಿದೆ. ಅನೇಕ ಜನರ ಬದುಕು ಏಕಾಏಕಿ ಬದಲಾಗಿದ್ದು ನೋಡಿದ್ದೇವೆ. ಅದಕ್ಕೆ ಸಾಕ್ಷಿ ಮಹಾರಾಷ್ಟ್ರದ ನಾಗ್ಪುರದಲ್ಲಿ ಟೀ ಮಾರುತ್ತಿದ್ದ ಹುಡುಗ ಡಾಲಿ ಬದುಕು. ಡಾಲಿ ಬದುಕು ಈಗ ಬೇರೆಯದ್ದೇ ಮಟ್ಟಕ್ಕೆ ಬಂದು ನಿಂತಿದೆ. ತನ್ನ ವಿಶೇಷ ಶೈಲಿಯಿಂದ ಗ್ರಾಹಕರ ಗಮನ ಸೆಳೆದಿದ್ದ ಈ ಹುಡುಗ ಹೈದ್ರಾಬಾದ್​ನಲ್ಲಿ ಯಾವಾಗ ಮೈಕ್ರೋಸಾಫ್ಟ್​ ಸಹ ಸಂಸ್ಥಾಪಕ ಬಿಲ್​ಗೆಟ್ಸ್​ಗೆ ಚಹಾ ನೀಡಿದನೋ ಅಂದಿನಿಂದ ಇವನ ಅದೃಷ್ಟವೇ ಖುಲಾಯಿಸಿದೆ.

Advertisment

publive-image


">December 10, 2023


ಇದನ್ನೂ ಓದಿ:200 ವರ್ಷಗಳ ದಾಖಲೆಯ ಮಳೆ.. 300 ಹೊಸ ಬ್ರಾಂಡ್‌ ಕಾರುಗಳು ಮುಳುಗಡೆ; ವಿಡಿಯೋ ನೋಡಿ!

ಅವನು ಟೀ ಮಾಡುವ ಶೈಲಿ ಹಾಗೂ ಅದನ್ನು ಗ್ರಾಹಕರಿ ನೀಡುವ ವಿಧಾನ ಇವೆಲ್ಲವೂ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸದ್ದು ಮಾಡಿ ಅವನನ್ನು ಬಿಲ್ ಗೆಟ್ಸ್​ವರೆಗೂ ಕರೆದುಕೊಂಡು ಹೋಗಿದ್ದವು. ಎಕೆ ಫುಡ್ ವ್ಲೋಗ್ ತೈಯಾಬ್ ಫಕ್ರುದ್ದಿನ್ ಎಂಬಾತ ಇವನ ಟೀ ಮಾಡುವ ಶೈಲಿ ಹಾಗೂ ದಿನಕ್ಕೆ ಎಷ್ಟು ದುಡಿಯುತ್ತಾನೆ ಅನ್ನೋದರ ಸಂದರ್ಶನದ ವಿಡಿಯೋವನ್ನು ತನ್ನ ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿದ್ದ. ಅಷ್ಟು ಮಾತ್ರವಲ್ಲ ಸಂದರ್ಶನದಲ್ಲಿ ಕುವೈತ್​ಗೆ ಬಂದು ಬಿಡು ನಿನ್ನ ಹಣೆಬರಹವೇ ಚೇಂಜ್ ಆಗಲಿದೆ ಎಂದಿದ್ದ. ಆದ್ರೆ ಡಾಲಿ ಬೇಡಿಕೆಗಳು ವಿಪರೀತ ಇದ್ದವು. ನನ್ನ ಅಸ್ತಿತ್ವದ ಕುರಿತು ಪ್ರಶ್ನೆ ಎದ್ದಿತು. ನಿಮಗೆ ಗೊತ್ತಾ ಆ ಹುಡುಗ ಎಷ್ಟು ಒಂದು ಚಾಯ್​ಗೆ ಎಷ್ಟು ಚಾರ್ಜ್ ಮಾಡ್ತಾನೆ ಅಂತ. 2 ಸಾವಿರ ಕುವೈತ್ ದಿನಾರ್ ಅಂದ್ರೆ ಅದು ಐದು ಲಕ್ಷ ರೂಪಾಯಿಗೆ ಸಮ. ಇದೆಲ್ಲವೂ ನನಗೆ ಹೇಳಿದ್ದು ಅವನಲ್ಲ, ಅವನ ಮ್ಯಾನೇಜರ್ ಎಂದು ಹೇಳಿದ. ಎಕೆ ಫುಡ್​ ವ್ಲೋಗ್​ನ ತೈಬಾನ್ ಒಂದು ಸಂದರ್ಶನದಲ್ಲಿ ಹೇಳಿದ್ದಾನೆ. ಈ ಒಂದು ವಿಡಿಯೋ ಒಂದೇ ದಿನದಲ್ಲಿ 18 ಲಕ್ಷ 70 ಸಾವಿರ ಜನರು ವೀಕ್ಷಿಸಿದ್ದಾರೆ.

Advertisment

ಇದನ್ನೂ ಓದಿ:IC814 ಕಂದಹಾರ್​ ಹೈಜಾಕ್ ಆಗಿದ್ದು ಹೇಗೆ? ಅಸಲಿಗೆ ಅಂದು ನಡೆದಿದ್ದೇನು? ಕಂಪ್ಲೀಟ್ ಡಿಟೇಲ್ಸ್‌ ಇಲ್ಲಿದೆ

ಚಾಯ್​ವಾಲಾನ ಸದ್ಯದ ಇನ್ಕಮ್ ಹತ್ತು ಲಕ್ಷ ದಾಟಿದೆ. ದಿನಕ್ಕೆ 7 ರೂಪಾಯಿಗೆ ಒಂದರಂತೆ 350 ರಿಂದ 500 ಕಪ್ ಟೀ ಮಾರುತ್ತಾನೆ. ದಿನಕ್ಕೆ 2450 ರೂಪಾಯಿಗಳಿಂದ 3500 ರೂಪಾಯಿವರೆಗೆ ಗಳಿಸುತ್ತಾನೆ. ಅಂದು ಇನ್ನು ಬಿಲ್ ಗೆಟ್ಸ್​​ಗೆ ಟೀ ಮಾರಿದ್ದರ ಬಗ್ಗೆ ಮಾತನಾಡಿದ್ದು ಬಿಲ್ ಗೆಟ್ಸ್ ಎಂಬುದು ನನಗೆ ಆರಂಭದಲ್ಲಿ ತಿಳಿದಿರಲಿಲ್ಲ. ನಾನು ಯಾರೋ ವಿದೇಶಿಗರು ಇರಬೇಕು ಎಂದು ದಿನದಂತೆ ನನ್ನ ಶೈಲಿಯಲ್ಲಿಯೇ ಟೀ ನೀಡಿದೆ. ಆಮೇಲೆ ಗೊತ್ತಾಯ್ತು ಅವರು ಬಿಲ್​ಗೆಟ್ಸ್ ಎಂದು ಅಂತ ಹೇಳಿದ್ದಾರೆ. ಇನ್ನು ಅನೇಕ ಸಮಾರಂಭಗಳನ್ನು ಇವೆಂಟ್​ಗಳಿಗೂ ಹೋಗುವ ಈ ಡಾಲಿ. ಅಲ್ಲಿ ಒಂದು ದಿನಕ್ಕೆ ಐದು ಲಕ್ಷ ರೂಪಾಯಿ ಚಾರ್ಜ್ ಮಾಡುತ್ತಾನಂತೆ. ಒಂದೇ ಒಂದು ವಿಡಿಯೋ ಸದ್ಯ ಡಾಲಿ ಬದುಕನ್ನೇ ಚೇಂಜ್ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment