ನೆಟ್ಫ್ಲಿಕ್ಸ್ನ ವೆಬ್ ಸಿರೀಸ್ನಲ್ಲೂ ಬಯಲಾಗಲಿಲ್ಲ ಆ ಮೂರು ಬ್ಯಾಗ್‌ಗಳ ರಹಸ್ಯ!
ಅಂದಿನ ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ ಬಳಿ ಇದ್ದ ಸೂಟಕೇಸ್, ಏನದು?
ಕಪ್ಪು ಸೂಟ್ಕೇಸ್ ಹಾಗೂ ವಿಮಾನದ ಕಾರ್ಗೋದಲ್ಲಿದ್ದ ಕೆಂಪು ಬ್ಯಾಗ್ನಲ್ಲಿ ಏನಿತ್ತು?
ನವದೆಹಲಿ: 26/11 ಮುಂಬೈ ದಾಳಿ ಹಾಗೂ 1999ರಲ್ಲಿ ನಡೆದ ಐಸಿ 814 ವಿಮಾನ ಅಪಹರಣ. ಇವು ಭಾರತದ ಮೇಲೆ ಎಂದೂ ಆರದಂತ ಒಂದು ಗಾಯವನ್ನು ಮಾಡಿ ಹಾಕಿವೆ. ನಮ್ಮ ಭದ್ರತಾ ವ್ಯವಸ್ಥೆ ಮತ್ತು ಬೇಹುಗಾರಿಕೆ ಸಂಸ್ಥೆಗಳ ಮೇಲೆಯೇ ನಮಗೆ ಅಪನಂಬಿಕೆ ಮೂಡವಂತೆ ಮಾಡಿದ್ದು ಈಗ ಇತಿಹಾಸ. ಕೆಲವು ಇತಿಹಾಸಗಳೇ ಹಾಗೆ, ಮರೆಯಬೇಕೆಂದಷ್ಟು ಯಾವುದೂ ಒಂದು ರೂಪದಲ್ಲಿ ನಮ್ಮೆದುರು ಬಂದು ಕೇಕೆ ಹಾಕಿ ಕೆರಳಿಸುತ್ತವೆ.
ಹಕ್ಕಳೆಗಟ್ಟಿದ ಗಾಯವನ್ನು ಮತ್ತೆ ಕಿತ್ತು ಹೊಸ ಗಾಯವನ್ನು ಸೃಷ್ಟಿಸುತ್ತವೆ. ಈಗ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಿರುವ ಐಸಿ 814 ಕಂದಹಾರ್ ಹೈಜಾಕ್ ಅನ್ನೋ ವೆಬ್ ಸೀರಿಸ್ ಕೂಡ ಹಾಗೆಯೇ. ಗತಿಸಿ ಹೋದ ಒಂದು ಇತಿಹಾಸದ ಕರಾಳ ಪುಟವನ್ನು ತೆರೆದಿಟ್ಟಿದೆ. ಘಟನೆ ನಡೆದು ಹೋಗಿದ್ದು ಬಿಡು ಅನ್ನವಂತ ನಿರೂಪಣೆಯಿದ್ದರೂ ಕೂಡ ಮನಸ್ಸಿನ ಯಾವುದೋ ಮೂಲೆಯಲ್ಲೊಂದು ತಣ್ಣಗಿನ ಆಕ್ರೋಶ ಮೇಲೆದ್ದು ಬಿಡುತ್ತದೆ. ಕೇವಲ ಐದು ಜನ ಭಯೋತ್ಪಾದಕರು ಒಂದು ವಿಮಾನದಲ್ಲಿ ಸೇರಿಕೊಂಡು ಇಡೀ ವಿಮಾನವನ್ನೇ ಹೈಜಾಕ್ ಮಾಡಿ 8 ದಿನಗಳ ನಮ್ಮ ಜನರನ್ನು ಒತ್ತೆಯಾಳುಗಳಾಗಿ ಇಟ್ಟುಕೊಳ್ಳುತ್ತಾರೆ ಎಂದರೆ ಅಂದಿನ ವ್ಯವಸ್ಥೆಯ ವಿರುದ್ಧ ಮರುಕ ಉಂಟಾಗುತ್ತದೆ. ಅಷ್ಟೇ ಆಕ್ರೋಶವು ಉಂಟಾಗುತ್ತದೆ.
ಇದನ್ನೂ ಓದಿ: ವೆಬ್ ಸೀರಿಸ್‌ನಲ್ಲಿ ಮುಸ್ಲಿಂ ಬದಲು ಹಿಂದೂಗಳ ಹೆಸರು.. ಎಚ್ಚರಿಕೆಗೆ ತಲೆಬಾಗಿದ ನೆಟ್‌ಫ್ಲಿಕ್ಸ್; ಹೇಳಿದ್ದೇನು?
ಈ ವೆಬ್ ಸಿರೀಸ್ ಈಗ ಸೋಷಿಯಲ್ ಮಿಡಿಯಾದಲ್ಲಿ ದೊಡ್ಡ ಸಂಚಲನವನ್ನು ಸೃಷ್ಟಿ ಮಾಡಿದೆ. ಘಟಿಸಿ ಹೋದ ಕರಾಳ ಅಧ್ಯಾಯದ ಒಂದೊಂದೇ ಪುಟಗಳನ್ನು ಆರು ಎಪಿಸೋಡ್ಗಳಲ್ಲಿ ಕಟ್ಟಿಕೊಟ್ಟಿದೆ. ಆದರೂ ಕೆಲವು ರಹಸ್ಯಗಳು ಹಾಗೆ ಉಳಿದುಕೊಂಡಿವೆ. ಇತಿಹಾಸವೇ ಹಾಗೆ ತನ್ನೊಡಲಲ್ಲಿ ಸದಾ ತನ್ನೊಡಲಲ್ಲಿ ಹಲವು ರಹಸ್ಯಗಳನ್ನು ಉಳಿಸಿಕೊಂಡು ಬಿಡುತ್ತದೆ. 25 ವರ್ಷಗಳ ಹಿಂದಿನ ಐಸಿ 814 ಇಂಡಿಯನ್ ಏರ್ಲೈನ್ಸ್ ವಿಮಾನದ ಹೈಜಾಕ್ ಇತಿಹಾಸವನ್ನು ತೆರೆದಿಟ್ಟಿದೆ. ಆದ್ರೆ ಆ ಮೂರು ಬ್ಯಾಗ್‌ಗಳ ರಹಸ್ಯ ಒಂದು ಕಪ್ಪು ಸೂಟ್ಕೇಸ್, ಒಂದು ರೆಡ್ ಸೂಟ್ಕೇಸ್ ಹಾಗೂ ಮತ್ತೊಂದು ರೆಡ್ ಬ್ಯಾಗ್ಈ ಮೂರು ಬ್ಯಾಗ್ಗಳು ಘಟನೆ ನಡೆದು 25 ವರ್ಷಗಳಾದರೂ ರಹಸ್ಯವಾಗಿಯೇ ಉಳಿದಿವೆ.
ಜಸ್ವಂತ್ ಸಿಂಗ್ ಕೈಯಲ್ಲಿದ್ದ ಆ ರೆಡ್ ಬ್ಯಾಗ್ನಲ್ಲಿ ಏನಿತ್ತು..?
ಜಸ್ವಂತ್ ಸಿಂಗ್ 1999ರಲ್ಲಿ ವಾಜಪೇಯಿ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿ ಕಾರ್ಯನಿರ್ವಹಿಸಿದರು. 1999ರಲ್ಲಿ ಇಂಡಿಯನ್ ಏರ್ಲೈನ್ಸ್ನ ಐಸಿ 814 ವಿಮಾನ ಹೈಜಾಕ್ ನಡೆದು ಮೂವರು ಟೆರರಿಸ್ಟ್ಗಳ ಬಿಡುಗಡೆಗೆ ಹೈಜಾಕ್ ಮಾಡಿದ ಉಗ್ರರು ಬೇಡಿಕೆ ಇಟ್ಟಿರುತ್ತಾರೆ. ಆ ಮೂವರು ಉಗ್ರರನ್ನು ಕರೆದುಕೊಂಡು ಹೋಗುವ ಟೀಮ್ ಜೊತೆಗೆ ಜಸ್ವಂತ ಸಿಂಗ್ ಕೂಡ ಹೋಗಿದ್ದರು. ಅವರ ಜೊತೆ ಒಂದು ರೆಡ್ ಬ್ಯಾಗ್ ಇತ್ತು. ಆ ಕಂಪು ಬಣ್ಣದ ಬ್ಯಾಗ್ನಲ್ಲಿ ಏನಿತ್ತು ಅನ್ನೋದು ಇಂದಿಗೂ ಕೂಡ ರಹಸ್ಯವಾಗಿಯೇ ಉಳಿದಿದೆ. ಈ ವೆಬ್ ಸಿರೀಸ್ನಲ್ಲಿಯೂ ಕೂಡ ಅದಕ್ಕೆ ಉತ್ತರ ಸಿಕ್ಕಿಲ್ಲ,.
ಇದನ್ನೂ ಓದಿ: ಅರಮನೆಯ ಗೋಡೆಯೂ ಚಿನ್ನ, ವಿಮಾನವೂ ಚಿನ್ನ.. ಮೋದಿ ಭೇಟಿಯಾಗ್ತಿರುವ ಸುಲ್ತಾನನ ಜೀವನ ಅಬ್ಬಬ್ಬಾ! Photos
ಅಸಲಿಗೆ ಹೈಜಾಕ್ ಮಾಡಿದ ಉಗ್ರರು ಮಸೂದ್ ಅಜರ್ ಸೇರಿ ಮೂವರು ಉಗ್ರರ ಬಿಡುಗಡೆಯ ಜೊತೆಗೆ 200 ಮಿಲಿಯನ್ ಡಾಲರ್ ಬೇಡಿಕೆ ಇಟ್ಟಿದ್ದರು. ಆದ್ರೆ ಮೂಲಗಳ ಪ್ರಕಾರ ಹಣ ನೀಡಲು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸಿದ್ಧರಿರಲಿಲ್ಲ. ಅಂತಿಮವಾಗಿ ಮೂವರು ಉಗ್ರರ ಬಿಡುಗೆಡೆಗೆ ಮಾತ್ರ ಒಪ್ಪಿಗೆ ನೀಡಲಾಗಿತ್ತು. ಆದ್ರೆ ಅಂದು ಒಪ್ಪಂದದ ಪ್ರಕಾರ ಮೂವರು ಉಗ್ರರನ್ನು ಅವರಿಗೆ ಒಪ್ಪಿಸಲು ಹೋದ ಸಮಯದಲ್ಲಿ ಜಸ್ವಂತ್ ಸಿಂಗ್ ಕೂಡ ಹೋಗಿದ್ದರು ಅವರ ಕೈಯಲ್ಲಿದ್ದ ಬ್ಯಾಗ್ನಲ್ಲಿ ಆ ಇನ್ನೂರು ಮಿಲಿಯನ್ ಡಾಲರ್ಗಳ ಮೊತ್ತ ಇತ್ತಾ ಅನ್ನುವ ರಹಸ್ಯ ಇಂದಿಗೂ ಭೇದಿಸಲು ಸಾಧ್ಯವಾಗಿಲ್ಲ.
ಇದನ್ನೂ ಓದಿ:ರಕ್ಷಣಾ ಕಾರ್ಯಾಚರಣೆ ವೇಳೆ ಅರಬ್ಬಿ ಸಮುದ್ರಕ್ಕೆ ಬಿದ್ದ ಹೆಲಿಕಾಪ್ಟರ್; ಮೂವರು ನಾಪತ್ತೆ
ಕಂದಹಾರಕ್ಕೆ ಹೊರಟಿದ್ದ ಆ ವಿಮಾನದಲ್ಲಿತ್ತು ಕಪ್ಪು ಸೂಟ್ಕೇಸ್
ಅಂದು ಕಂದಹಾರಕ್ಕೆ ಮಸೂದ್ ಅಜರ್ನನ್ನು ಸೇರಿ ಮೂವರು ಉಗ್ರರನ್ನು ಕರೆದುಕೊಂಡು ಹೋಗುವ ಸಮಯದಲ್ಲಿ ಮೂವರು ಟೆರರಿಸ್ಟ್ಗಳ ರಕ್ಷಣೆಗೆ ಅಧಿಕಾರಿಗಳು ಕೂಡ ಇದ್ದರು. ಅವರ ಜೊತೆ ಹಿರಿಯ ಪತ್ರಕರ್ತ ಸುರೇಂದ್ರ ಚೌದರಿ ಕೂಡ ಇದ್ದರು ಅಂದು ಆ ವಿಮಾನದಲ್ಲಿ ಎಸ್ಪಿಜೆ ಕಮಾಂಡೊಗಳಿದ್ದರು ಅವರ ಕೈಯಲ್ಲಿ ಕಪ್ಪು ಬಣ್ಣದ ಸೂಟ್ಕೇಸ್ ಇತ್ತು ಬ್ರೀಫ್ಕೇಸ್ನಲ್ಲಿ ಒಂದು ಲಕ್ಷ ಅಮೆರಿಕನ್ ಡಾಲರ್ ಇತ್ತು. ಅದರಲ್ಲಿ 40 ಸಾವಿರ ಡಾಲರ್ಗಳನ್ನು ಕಂದಹಾರ್ಗೆ ಹೊರಡುವ ವಿಮಾನದ ತೈಲಕ್ಕೆ ಬಳಸಲ್ಪಟ್ಟಿತ್ತು ಎಂದು ದಾಖಲಾಗಿದೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ, ತಾಲಿಬಾನಿಗಳು ಕಂದಹಾರ್ನಲ್ಲಿ ಲ್ಯಾಂಡ್ ಆದ ವಿಮಾನಕ್ಕೆ ಯಾವುದೇ ಶುಲ್ಕ ತೆಗೆದುಕೊಂಡಿಲ್ಲ. ಅಲ್ಲಿಯೇ ವಿಮಾನಕ್ಕೆ ತೈಲವನ್ನು ರಿಫಿಲ್ಲಿಂಗ್ ಮಾಡುವ ಯೋಚನೆಯೂ ಇರಲಿಲ್ಲ. 40 ಸಾವಿರ ಡಾಲರ್ ದುಡ್ಡು ಟೆರೆರಿಸ್ಟ್ಗಳಿಗೆ ನೀಡಲಾಗಿತ್ತು ಎಂಬ ಅನುಮಾನವನ್ನು ಅವರು 2019ರಲ್ಲಿ ವ್ಯಕ್ತಪಡಿಸಿದ್ದರು.
ಐಸಿ 814ನಲ್ಲಿದ್ದ ಟೆರರಿಸ್ಟ್ಗಳ ಕೆಂಪು ಸೂಟ್ಕೇಸ್ನಲ್ಲಿ ಏನಿತ್ತು
ಹೈಜಾಕ್ ಮಾಡಿದ ಐಸಿ 814 ವಿಮಾನದಲ್ಲಿ ಟೆರರಿಸ್ಟರು ಇಟ್ಟಿದ್ದರು ಎನ್ನಲಾದ ಒಂದು ರೆಡ್ ಸೂಟ್ಕೇಸ್ ಕೂಡ ಇತ್ತು. ಅದರಲ್ಲಿ ಏನಿತ್ತು ಎಂಬುದು ಇಂದಿಗೂ ಕೂಡ ರಹಸ್ಯವಾಗಿಯೇ ಉಳಿದಿದೆ. ಜಸ್ವಂತ್ ಸಿಂಗ್ ಅವರು ಬರೆದಿರುವ ತಮ್ಮ ಸರ್ವಿಸ್ ಎಮರ್ಜೆಂಟ್ ಇಂಡಿಯಾ ಪುಸ್ತಕದ ಕೊನೆಯ ಅಧ್ಯಾಯದಲ್ಲಿ ಇದನ್ನು ಉಲ್ಲೇಖಿಸಿದ್ದಾರೆ. ವಿಮಾನದ ಕಾರ್ಗೋದಲ್ಲಿದ್ದ ಆ ರೆಡ್ ಬ್ಯಾಗ್ ಬಗ್ಗೆ ಹೇಳಿರುವ ಜಸ್ವಂತ್ ಸಿಂಗ್, ಹೈಜಾಕ್ ಆದ ವಿಮಾನವನ್ನು ನಾವು ಕಂದಹಾರದಿಂದ ಮತ್ತೆ ವಾಪಸ್ ತರಲಿಲ್ಲ. ಅದರಲ್ಲಿ ಏನೋ ಒಂದು ವಸ್ತುವನ್ನು ಅಡಗಿಸಿಟ್ಟಿದ್ದಾರೆ ಎಂದು ನನಗೆ ಮೂಲಗಳಿಂದ ಮಾಹಿತಿ ಬಂದಿತ್ತು ಎಂದು ಹೇಳಿದ್ದಾರೆ. ಆ ಬ್ಯಾಗ್ನಲ್ಲಿ ಏನಿತ್ತು ಅನ್ನೋದನ್ನ 2001ರಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಧಿಕಾರ ಅಂತ್ಯಗೊಂಡಾಗ ಜಸ್ವಂತ್ ಸಿಂಗ್ ಹೇಳಿದ್ದರು. ಅಫ್ಘಾನಿಸ್ತಾನದ ಅಂದಿನ ವಿದೇಶಾಂಗ ಸಚಿವ ಅರೆಸ್ಟ್ ಆದ ಬಳಿಕ ಆತ ಹೇಳಿದ ಪ್ರಕಾರ, ಆ ರೆಡ್ ಬ್ಯಾಗ್ ಹೈಜಾಕ್ ಮಾಡಿದ್ದ ಉಗ್ರರದ್ದು ಆಗಿತ್ತು. ಅದರಲ್ಲಿ ಅವರ ಪಾಸ್ಪೋರ್ಟ್, ಕೆಲವು ಸ್ಫೋಟಕಗಳು ಹಾಗೂ ಇದ್ದವು ಅವರು ಗಡಿಬಿಡಿಯಲ್ಲಿ ಅದನ್ನು ತೆಗೆದುಕೊಂಡು ಹೋಗಿದ್ದು ಮರೆತಿದ್ದರು ಎಂದು ಹೇಳಿದ್ದಾರೆ ಎಂದು ಜಸ್ವಂತ್ ಸಿಂಗ್ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ಒಂದು ಹಂತದಲ್ಲಿ ವೆಬ್ ಸೀರಿಸ್ ಐಸಿ 814 ವಿಮಾನದ ಹೈಜಾಕ್ನ ಕಥೆಯನ್ನು ಎಳೆ ಎಳೆಯಾಗಿ ತೆಗೆದಿಟ್ಟರೂ ಕೂಡ, ಈ ಮೂರು ಬ್ಯಾಗ್‌ಗಳ ಅಸಲಿ ರಹಸ್ಯವೇನು ಅನ್ನೋದು ಇಂದಿಗೂ ಕೂಡ ಪತ್ತೆಯಾಗಿಲ್ಲ. ಆ ರಹಸ್ಯಗಳು ರಹಸ್ಯವಾಗಿಯೇ ಉಳಿದಕೊಂಡು ಬಿಟ್ಟಿವೆ. ಆ ಸಮಯದಲ್ಲಿ ಈ ಮೂರು ಬ್ಯಾಗ್‌ಗಳ ಕುರಿತಾಗಿ ಸಂಶಯ ವ್ಯಕ್ತಪಡಿಸಿದ್ದ ವಿಪಕ್ಷ ಕಾಂಗ್ರೆಸ್, ಈ ಕುರಿತು ಜಾಯಿಂಟ್ ಪಾರ್ಲಿಮೆಂಟರಿ ತನಿಖೆಯಾಗಬೇಕು ಎಂದು ಪಟ್ಟು ಹಿಡಿದಿತ್ತು. 2004ರಲ್ಲಿ ವಾಜಪೇಯಿ ಸರ್ಕಾರ ಪತನಗೊಂಡು ಕಾಂಗ್ರೆಸ್ ಸರ್ಕಾರ ಬಂದು ಹತ್ತು ವರ್ಷ ಆಡಳಿತನ ನಡೆಸಿದರೂ ಕೂಡ ಆ ಮೂರು ಬ್ಯಾಗ್ನ ರಹಸ್ಯಗಳು ಇಂದಿಗೂ ಹಾಗೆ ಉಳಿದುಕೊಂಡಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ