IC814 ಕಂದಹಾರ್ ಹೈಜಾಕ್ ವೆಬ್ ಸೀರಿಸ್‌ಗೆ ‘ಹಿಂದೂ’ ವಿರೋಧ
ಕೇಂದ್ರ ಸರ್ಕಾರಕ್ಕೆ ನೆಟ್‌ಫ್ಲಿಕ್ಸ್ ಕಂಟೆಂಟ್ ಮುಖ್ಯಸ್ಥರು ಹೇಳಿದ್ದೇನು?
IC814 ಕಂದಹಾರ್ ಹೈಜಾಕ್ ಘಟನೆಯ ಅಸಲಿ ಸ್ಟೋರಿ ಏನು?
ನವದೆಹಲಿ: ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾದ IC814 ಕಂದಹಾರ್ ಹೈಜಾಕ್ ವೆಬ್ ಸೀರಿಸ್ ದೇಶಾದ್ಯಂತ ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ವೆಬ್ ಸೀರಿಸ್‌ನಲ್ಲಿ ಮುಸ್ಲಿಂ ಹೆಸರುಗಳ ಬದಲು ಹಿಂದೂ ಹೆಸರು ಬಳಕೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಸದ್ಯ ಇದೇ ವಿಚಾರ ದೇಶಾದ್ಯಂತ ಚರ್ಚೆಯಾಗುತ್ತಿದೆ.
ದೇಶದ ಹಿಂದೂಗಳ ಭಾವನೆಗೆ ಧಕ್ಕೆ ತಂದ ಆರೋಪದಲ್ಲಿ ನೆಟ್‌ಫ್ಲಿಕ್ಸ್ ಮುಖ್ಯಸ್ಥರಿಗೆ ಕೇಂದ್ರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದಿಂದ ನೋಟಿಸ್ ನೀಡಲಾಗಿತ್ತು. ಈ ನೋಟಿಸ್ ಹಿನ್ನೆಲೆಯಲ್ಲಿ ಇಂದು ನೆಟ್‌ಫ್ಲಿಕ್ಸ್ ಕಂಟೆಂಟ್ ಮುಖ್ಯಸ್ಥರು ಕೇಂದ್ರ ವಾರ್ತಾ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ವಿವರಣೆ ನೀಡಿದ್ದಾರೆ.
ಇದನ್ನೂ ಓದಿ: ನೆಟ್ಫ್ಲಿಕ್ಸ್ನಿಂದಲೇ ಕಿತ್ತು ಹಾಕಿದ ನಯನತಾರಾ ನಟನೆಯ ‘ಅನ್ನಪೂರ್ಣಿ’ ಸಿನಿಮಾ; ಕಾರಣವೇನು?
ಕೇಂದ್ರ ಸರ್ಕಾರಕ್ಕೆ ನೆಟ್‌ಫ್ಲಿಕ್ಸ್ ಭರವಸೆ!
ನೆಟ್‌ಫ್ಲಿಕ್ಸ್ ಕಂಟೆಂಟ್ ಮುಖ್ಯಸ್ಥರು ಎಚ್ಚರಿಕೆಗೆ ತಲೆಬಾಗಿದ್ದು, ಇನ್ನು ಮುಂದೆ ರಾಷ್ಟ್ರೀಯ ಭಾವನೆಗೆ ಅನುಗುಣವಾಗಿ ಕಂಟೆಂಟ್ ಇರಲಿದೆ ಎಂದು ಕೇಂದ್ರ ಸರ್ಕಾರಕ್ಕೆ ಭರವಸೆ ನೀಡಿದ್ದಾರೆ. ಭವಿಷ್ಯದಲ್ಲಿ ನೆಟ್‌ಫ್ಲಿಕ್ಸ್ ಕಂಟೆಂಟ್‌ಗಳು ಸೂಕ್ಷ್ಮವಾಗಿರಲಿವೆ. ದೇಶದ ಜನರ ಭಾವನೆಗಳಿಗೆ ಧಕ್ಕೆ ಬಾರದಂತೆ ಸೂಕ್ಷ್ಮವಾಗಿ ಪರಿಶೀಲಿಸಿ ವರ್ತಿಸುವುದಾಗಿ ಭರವಸೆ ನೀಡಲಾಗಿದೆ.
ಏನಿದು IC814 ವಿವಾದ?
1999ರ ಡಿಸೆಂಬರ್ 24ರಂದು ಬಾಂಗ್ಲಾದೇಶದ ಕಠ್ಮಂಡುವಿನಿಂದ ದೆಹಲಿಗೆ ಬರುತ್ತಿದ್ದ ವಿಮಾನವನ್ನು ತಾಲಿಬಾನ್ ಉಗ್ರರು ಹೈಜಾಕ್ ಮಾಡಿದ್ದರು. ಈ ನೈಜ ಘಟನೆಯನ್ನೇ ಆಧರಿಸಿ ನೆಟ್‌ಫ್ಲಿಕ್ಸ್‌ನಲ್ಲಿ IC814 ಕಂದಹಾರ್ ಹೈಜಾಕ್ ಅನ್ನೋ ವೆಬ್ ಸೀರಿಸ್ ನಿರ್ಮಾಣ ಮಾಡಲಾಗಿದೆ. ಅನುಭವ ಸಿನ್ಹಾ ಅವರ ನಿರ್ದೇಶನದಲ್ಲಿ ಈ ವೆಬ್ ಸೀರಿಸ್ ಮೂಡಿ ಬಂದಿದೆ.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಎಂಥಾ ದುಸ್ಥಿತಿ.. ದೇಶದ ಮಾನ ಹರಾಜು ಹಾಕೋಕೆ 2 ವಿಡಿಯೋ ಸಾಕು; ಮಿಸ್ ಮಾಡ್ದೇ ನೋಡಿ!
ಈ ವೆಬ್ ಸೀರಿಸ್‌ನಲ್ಲಿ ವಿಮಾನ ಹೈಜಾಕ್ ಮಾಡಿದ ಉಗ್ರರ ಮುಸ್ಲಿಂ ಹೆಸರುಗಳ ಬದಲು ಹಿಂದೂ ಹೆಸರು ಬಳಕೆ ಮಾಡಲಾಗಿದೆ. ಉಗ್ರರಿಗೆ ಬೋಲಾ, ಶಂಕರ್ ಎಂದು ಹೆಸರಿಟ್ಟಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ದೇಶದ ಹಿಂದೂಗಳ ಭಾವನೆಗೆ ಧಕ್ಕೆ ತಂದ ಆರೋಪದಲ್ಲಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನೋಟಿಸ್ ನೀಡಿ ವಿವರಣೆ ಪಡೆದಿದೆ.
IC814 ಕಂದಹಾರ್ ಹೈಜಾಕ್ ವೆಬ್ ಸೀರಿಸ್‌ನ ಮೊದಲ ಎಪಿಸೋಡ್ 29 ಆಗಸ್ಟ್ 2024ರಂದು ಬಿಡುಗಡೆಯಾಗಿದೆ. ಒಟ್ಟು 6 ಎಪಿಸೋಡ್ ಇರುವ ಈ ವೆಬ್ ಸೀರಿಸ್ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ