/newsfirstlive-kannada/media/post_attachments/wp-content/uploads/2024/07/DELHI-LADY.jpg)
ಕಿರಿಕ್ ಲೇಡಿಯೊಬ್ಬಳು ಆಟೋ ಚಾಲಕನ ತಲೆ ಒಡೆದ ಘಟನೆ ದೆಹಲಿಯಲ್ಲಿ ನಡೆದಿದೆ. ಲೇಡಿಯ ಕೃತ್ಯದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಕ್ರಮ ತೆಗೆದುಕೊಳ್ಳುವಂತೆ ಜನ ಆಗ್ರಹಿಸಿದ್ದಾರೆ.
ಆಗಿದ್ದೇನು..?
ಆಟೋ ಚಾಲಕ ತನ್ನ ಮಕ್ಕಳನ್ನು ಶಾಲೆಗೆ ಬಿಟ್ಟು ಬರುತ್ತಿದ್ದು, ಯುವತಿ ಆಟೋ ಹಿಂದೆ ಬೈಕ್​ನಲ್ಲಿ ಬಂದಿದ್ದಾಳೆ. ಇದೇ ವೇಳೆ ಬುಲೆಟ್​ ಮೇಲೆ ಬಂದ ಯುವತಿ ಹಾರ್ನ್ ಮಾಡಿ ಜಾಗ ಬಿಡುವಂತೆ ಹೇಳಿದ್ದಾಳೆ. ಟ್ರಾಫಿಕ್ ಇದ್ದ ಕಾರಣ ಆಟೋ ಚಾಲಕನಿಗೆ ಆಟೋವನ್ನು ಮುಂದಕ್ಕೆ ಚಲಿಸಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ:ದ್ರಾವಿಡ್ ನಿವೃತ್ತಿ, ಗಂಭೀರ್ ಬಗ್ಗೆ ಮಾಹಿತಿ ಇಲ್ಲ.. ಜಿಂಬಾಬ್ವೆ ಪ್ರವಾಸದಲ್ಲಿರುವ ಕೋಚ್ ಯಾರು?
ಇಷ್ಟಕ್ಕೆ ಕೋಪಗೊಂಡ ಆಕೆ ಚಾಲಕನಿಗೆ ಥಳಿಸಲು ಪ್ರಾರಂಭಿಸಿದ್ದಾಳೆ. ಮೊದಲು ದೊಣ್ಣೆಯಿಂದ ಹಲ್ಲೆ ಮಾಡಿದ್ದು, ಬಳಿಕ ಕೈಯಲ್ಲಿ ಹಾಕಿದ್ದ ಬಳೆ ತೆಗೆದು ಥಳಿಸಲು ಶುರುಮಾಡಿದ್ದಾಳೆ. ಘಟನೆ ದೆಹಲಿಯ ನಿಹಾಲ್ ವಿಹಾರ್ ಪ್ರದೇಶದಲ್ಲಿ ನಡೆದಿದೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಸಖತ್ ವೈರಲ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us