ಹೊಸ ಫೋಟೋಶೂಟ್ ಮೂಲಕ ಸುದ್ದಿಯಲ್ಲಿ ಇರ್ತಾರೆ ಈ ಇಬ್ಬರು
ಸೋಷಿಯಲ್ ಮೀಡಿಯಾದಲ್ಲಿ ಸಖತ್ ಌಕ್ಟಿವ್ ಆಗಿದೆ ಈ ಜೋಡಿ
ನಟಿ ವಿಜಯಲಕ್ಷ್ಮೀ, ನಟ ಸಿದ್ದಾರ್ಥ್ಗೆ ಅಭಿಮಾನಿಗಳಿಂದ ಶುಭ ಹಾರೈಕೆ
ತ್ರಿಕೋನ ಪ್ರೇಮ ಕತೆಗಳ ಸಾಲಿನಲ್ಲಿ ನಿಲ್ಲೋ ಮೈನಾ ಧಾರಾವಾಹಿ ಸಾಕಷ್ಟು ಸದ್ದು ಮಾಡುತ್ತಿದೆ. ಬಡ ಕುಟುಂಬದ ಹುಡುಗಿ ಮೈನಾ ಕೆಲಸ ಹುಡುಕಿಕೊಂಡು ಸಿಟಿಗೆ ಬರ್ತಾಳೆ. ಬಳಿಕ ಗಾರ್ಮೆಂಟ್ಸ್ನಲ್ಲಿ ಕೆಲಸಕ್ಕೂ ಸೇರಿಕೊಳ್ಳುತ್ತಾಳೆ. ಅಲ್ಲಿಂದ ಅವಳ ಬದುಕು ಹೊಸ ತಿರುವುಗಳನ್ನ ಪಡೆದುಕೊಳ್ಳುತ್ತೆ.
ಇದನ್ನೂ ಓದಿ: ಫ್ಯಾನ್ಸ್ಗೆ ಗುಡ್ನ್ಯೂಸ್; ಹೊಸ ಪ್ರಾಜೆಕ್ಟ್ಗೆ ಕೈ ಹಾಕಿದ ಕೆಂಡಸಂಪಿಗೆ ಸುಮನಾ.. ಏನದು?
ಗಾರ್ಮೆಂಟ್ಸ್ನಲ್ಲಿ ಬಾಸ್ ಪುಷ್ಪಕ್ ಮೈನಾಳನ್ನು ತುಂಬಾ ಲವ್ ಮಾಡ್ತಾ ಇರ್ತಾನೆ. ಇತ್ತ ಅದೇ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುವ ಧ್ರುವ ಯಾರೇ ನೀನು ಚಲುವೆ ಸಿನಿಮಾ ಸ್ಟೈಲ್ನಲ್ಲಿ ಮೈನಾಳಿಗೆ ಪ್ರೇಮ ಪತ್ರಗಳ ಮೂಲಕ ಪ್ರೀತಿಯನ್ನ ವ್ಯಕ್ತಪಡಿಸುತ್ತಿದ್ದಾನೆ. ಇದಿಷ್ಟು ಉದಯ ಟಿವಿಯಲ್ಲಿ ಮೂಡಿ ಬರುತ್ತಿರುವ ಮೈನಾ ಧಾರಾವಾಹಿ ಕತೆ. ಮೈನಾ ಧಾರಾವಾಹಿ ಬಗ್ಗೆ ಹೇಳೋಕೆ ಕಾರಣ ಮೈನಾ ಪಾತ್ರ ಮಾಡುತ್ತಿರೋ ವಿಜಯಲಕ್ಷ್ಮೀ. ಜೊತೆಗೆ ಧ್ರವ ಪಾತ್ರದಲ್ಲಿ ನಟಿಸುತ್ತಿರೋ ಸಿದ್ದಾರ್ಥ್ ಸ್ವಾಮಿ.
ಈ ಜೋಡಿ ಪರ್ಫಾಮೆನ್ಸ್ಗೆ ವೀಕ್ಷಕರು ಫಿದಾ ಆಗಿದ್ದಾರೆ. ರಿಯಲ್ ಲೈಫ್ನಲ್ಲೂ ಸ್ನೇಹದ ಬಾಂಡಿಂಗ್ ಹೊಂದಿರೋ ಜೋಡಿ ರೀಲ್ಸ್ಗಳ ಮೂಲಕ ರಂಜಿಸುತ್ತಿರುತ್ತಾರೆ. ಸದ್ಯ ವಿಜಯಲಕ್ಷ್ಮೀ ಹಾಗೂ ಸಿದ್ದಾರ್ಥ್ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಇದನ್ನೂ ಓದಿ: ಅತಿ ವೇಗದಿಂದ ಅಪಘಾತ.. ಕಾರು ಡಿಕ್ಕಿಯಾಗಿ ಬೈಕ್ ಸವಾರ ಸಾವು; ಮಗಳು, 1 ವರ್ಷದ ಮಗು ಸ್ಥಿತಿ ಗಂಭೀರ
View this post on Instagram
ಇದೇ ಫೋಟೋಗಳನ್ನು ನೋಡಿದ ಅಭಿಮಾನಿಗಳು ಮುದ್ದಾದ ಜೋಡಿ ಅಂತ ಹಾರೈಸುತ್ತಿದ್ದಾರೆ. ಈ ಜೋಡಿ ಕ್ಯೂಟ್ನೆಸ್ಗೆ ಮನಸೋತಿರೋ ಅಭಿಮಾನಿಗಳು ವಿಜಯಲಕ್ಷ್ಮೀ, ಸಿದ್ದಾರ್ಥ್ ಸೀರಿಯಲ್ನಲ್ಲಿ ಒಂದಾಗಬೇಕು ಅಂತಾ ಕಾಮೆಂಟ್ಗಳ ಮೂಲಕ ಹಾರೈಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ