ಜಬರ್ದಸ್ತ್ ಮನರಂಜನೆಯ ನೀಡುತ್ತಿದೆ ಲಕ್ಷ್ಮೀ ನಿವಾಸ ಸೀರಿಯಲ್
ದಿನದಿಂದ ದಿನಕ್ಕೆ ಹೊಸ ರೂಪ ಪಡೆದುಕೊಳ್ಳುತ್ತಿದೆ ಈ ಸೀರಿಯಲ್
ಮಾಸ್ ಹೈದನಾಗಿ ಸೀರಿಯಲ್ಗೆ ಸಿದ್ದೇಗೌಡರು ಎಂಟ್ರಿ ಕೊಟ್ಟಿದ್ದೇಗೆ
ಕಿರುತೆರೆಯಲ್ಲಿ ಇತ್ತೀಚೆಗೆ ಲಾಂಚ್ ಆದ ಧಾರಾವಾಹಿಗಳಲ್ಲಿ ಲಕ್ಷ್ಮೀ ನಿವಾಸ ಕೂಡ ಒಂದು. ಬಹುದೊಡ್ಡ ತಾರಗಣ ಹೊಂದಿರೋ ಈ ಧಾರಾವಾಹಿಯಲ್ಲಿ ಸಿದ್ದೇಗೌಡರ ಪಾತ್ರವಂತೂ ವೀಕ್ಷಕರಿಗೆ ಬಲು ಇಷ್ಟವಾಗಿದೆ. ಭಾವನಳ ನಯ ವಿನಯಕ್ಕೆ ಸೋತಿರೋ ಪಕ್ಕ ಹಳ್ಳಿ ಹುಡುಗ ಸಿದ್ದೇಗೌಡ ಯಾರು ಎಂಬುವುದರ ಬಗ್ಗೆ ಅಭಿಮಾನಿಗಳು ಸರ್ಚ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ಪುಷ್ಪ-2 ಕ್ಲೈಮ್ಯಾಕ್ಸ್ ಲೀಕ್.. ವೈರಲ್ ವಿಡಿಯೋದಲ್ಲಿ ಅಲ್ಲು ಅರ್ಜುನ್ ಲುಕ್ ಹೇಗಿದೆ ಗೊತ್ತಾ?
ಲಕ್ಷ್ಮೀ ನಿವಾಸದಲ್ಲಿ ಸಿದ್ದೇಗೌಡರು ಪಕ್ಕಾ ಹಳ್ಳಿಯ ಮಾಸ್ ಹೈದನಾಗಿ ಸೀರಿಯಲ್ನಲ್ಲಿ ಕಾಣಿಸಿಕೊಂಡಿದ್ದಾರೆ. ದಿನ ಕಳೆದಂತೆ ಸಿದ್ದೇಗೌಡರ ಫ್ಯಾನ್ ಫಾಲೋವಿಂಗ್ ಜಾಸ್ತಿ ಆಗುತ್ತಲೇ ಇದ್ದಾರೆ. ಸಿದ್ದೇಗೌಡರ ಪಾತ್ರದಲ್ಲಿ ಅಭಿನಯಿಸಿರೋ ನಟ ಧನಂಜಯ್ ಅವರು ತಾವು ಬೆಳೆದು ಬಂದ ಹಾದಿಯ ಬಗ್ಗೆ ನ್ಯೂಸ್ ಫಸ್ಟ್ನೊಂದಿಗೆ ಹಂಚಿಕೊಂಡಿದ್ದಾರೆ. ಈಗಾಗಲೇ ಹಲವಾರು ಸಿನಿಮಾಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿರೋ ನಟ ಧನಂಜಯ್ ಅವರಿಗೆ ಡ್ಯಾನ್ಸ್ ಎಂದರೆ ಅಚ್ಚುಮೆಚ್ಚು. ಚಿಕ್ಕ ವಯಸ್ಸಿನಲ್ಲಿದ್ದಾಗಲೇ ದೊಡ್ಡ ಸ್ಟಾರ್ ಹೀರೋ ಆಗಬೇಕು, ಎಲ್ಲರೂ ನನ್ನ ಗುರುತಿಸಬೇಕು ಅಂತ ಅಂದುಕೊಂಡಿದ್ದರಂತೆ.
ಇನ್ನು, ವಿಶೇಷವಾದ ಎಂದರೆ ನಟ ಧನಂಜಯ್ ಹಾಗೂ ಅವರ ತಾಯಿ ನಟಿ ಅನ್ನಪೂರ್ಣ ಲಕ್ಷ್ಮೀ ನಿವಾಸದಲ್ಲಿ ಅಭಿನಯಿಸುತ್ತಿದ್ದಾರೆ. ಮಾತು ಬಾರದ ವೆಂಕಿ ಚೆಲುವಿ ಕಣ್ಣು ಕಾಣದ ತಾಯಿ ಪಾತ್ರದಲ್ಲಿ ನಟಿ ಅನ್ನಪೂರ್ಣ ಅವರು ಅಭಿನಯಿಸುತ್ತಿದ್ದಾರೆ. ಸದ್ಯ ನ್ಯೂಸ್ ಫಸ್ಟ್ನೊಂದಿಗೆ ಮಾತಾಡಿದ ಕಿರುತೆರೆ ನಟ ಧನಂಜಯ್ ನಾನು ಚಿಕ್ಕ ವಯಸ್ಸಿನಲ್ಲಿ ಒಳ್ಳೆಯ ಡ್ಯಾನ್ಸ್ ಮಾಡುತ್ತಿದ್ದೆ. ನನ್ನ ಲೈಫ್ನಲ್ಲೇ ಸ್ಕೂಲ್ ಡೇಗಾಗಿ ತುಂಬಾ ಕಾಯುತ್ತಿದ್ದೆ. ಏಕೆಂದರೆ ಆಗ ಎಲ್ಲರೂ ನನ್ನ ಡ್ಯಾನ್ಸ್ ನೋಡುತ್ತಾರೆ ಅಂತ. ದಿನ ಕಳೆದಂತೆ ಡ್ಯಾನ್ಸ್ ಮಾಡೋದನ್ನು ಬಿಟ್ಟು ನಾನು ಏಕೆ ನಟ ಆಗಬಾರದು ಅಂತ ಅಂದುಕೊಡೆ. ಆಗ ನಾನು 300 ರಿಂದ 400ರವರೆಗೆ ಸಾಕಷ್ಟು ಆಡಿಷನ್ ಕೊಟ್ಟಿದ್ದೆ. ಆಡಿಷನ್ ಕೊಟ್ಟು ಬಳಿಕ ಒಂದು ಮೆಸೇಜ್ ಬಂತು. ಆಗ ನೀವು ಲಕ್ಷ್ಮೀ ನಿವಾಸ ಸೀರಿಯಲ್ಗೆ ಲೀಡ್ ರೋಲ್ನಲ್ಲಿ ಸೆಲೆಕ್ಟ್ ಆಗಿದ್ದೀರಿ ಅಂತ. ಆಗ ನನಗೆ ನಂಬಲು ಆಗಲಿಲ್ಲ. ಬಳಿಕ ಈ ಸುದ್ದಿ ನಿಜ ಎಂದು ತಿಳಿದ ಕೂಡಲೇ ತುಂಬಾ ಖುಷಿ ಆಗಿದೆ. ಸದ್ಯ ಲಕ್ಷ್ಮೀ ನಿವಾಸ ಸೀರಿಯಲ್ನಲ್ಲಿ ಸಿದ್ದೇಗೌಡ ಪಾತ್ರದ ಮೂಲಕ ವೀಕ್ಷಕರನ್ನು ರಂಜಿಸುತ್ತಿದ್ದೇನೆ ಅಂತ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ