Advertisment

ಸಕಲೇಶಪುರದಲ್ಲಿ ಭಾರೀ ಭೂ ಕುಸಿತ.. ಕೊಚ್ಚಿ ಹೋದ ರಸ್ತೆ, ಹತ್ತಾರು ಗ್ರಾಮಗಳ ಸಂಪರ್ಕ ಕಡಿತ

author-image
AS Harshith
Updated On
ಸಕಲೇಶಪುರದಲ್ಲಿ ಭಾರೀ ಭೂ ಕುಸಿತ.. ಕೊಚ್ಚಿ ಹೋದ ರಸ್ತೆ, ಹತ್ತಾರು ಗ್ರಾಮಗಳ ಸಂಪರ್ಕ ಕಡಿತ
Advertisment
  • ಮಳೆರಾಯನ ಅಬ್ಬರ, ರಸ್ತೆ ಸಮೇತ ಕೊಚ್ಚಿ ಹೋದ ಭೂಮಿ
  • 200 ಮೀಟರ್​ಗೂ ಹೆಚ್ಚು ದೂರ ಕೊಚ್ಚಿ ಹೋದ ರಸ್ತೆ.. ಸಂಪರ್ಕವೇ ಕಟ್​​
  • ಭೂ ಕುಸಿತದಿಂದಾಗಿ ಕಡಿತಗೊಂಡ ಹತ್ತಾರು ಗ್ರಾಮಗಳ ಸಂಪರ್ಕ

ಹಾಸನ: ರಾಜ್ಯದ ಹಲವೆಡೆ ಮಳೆರಾಯನ ಅಬ್ಬರ ಮುಂದುವರೆದಿದ್ದು, ಕೆಲವೆಡೆ ಗುಡ್ಡ, ಮಣ್ಣು ಕುಸಿಯುತ್ತಿದೆ. ಹಾಸನದ ಸಕಲೇಶಪುರದಲ್ಲೂ ಮಳೆಯಿಂದಾಗಿ ಬೃಹತ್ ಪ್ರಮಾಣದಲ್ಲಿ ಭೂ ಕುಸಿತ ಸಂಭವಿಸಿದೆ. ಪರಿಣಾಮ ರಸ್ತೆ ಸಮೇತ ಭೂಮಿ ಕೊಚ್ಚಿ ಹೋಗಿದೆ.

Advertisment

ಇದನ್ನೂ ಓದಿ: 250 ಅಡಿ ಆಳದ ತೆರೆದ ಬೋರ್​ವೆಲ್​ಗೆ ಬಿದ್ದ 3 ವರ್ಷದ ಮಗು.. ಆರೋಗ್ಯ ಸ್ಥಿತಿ ಗಂಭೀರ

publive-image

ಸಕಲೇಶಪುರ ತಾಲೂಕಿನ ಕುಂಬರಡಿ ಸಮೀಪ ಘಟನೆ ನಡೆದಿದೆ. ಕುಂಬರಡಿ ಹಾಗೂ ಹಾರ್ಲೇ ಎಸ್ಟೇಟ್ ಮಧ್ಯೆ ಭೂ ಕುಸಿತ ಸಂಭವಿಸಿದೆ. ರಸ್ತೆ 200 ಮೀಟರ್​ಗೂ ಹೆಚ್ಚು ದೂರ ಕೊಚ್ಚಿ ಹೋಗಿದೆ.

ಇದನ್ನೂ ಓದಿ: ಶಿರೂರು ಘಟನೆ ಮಾಸುವ ಮುನ್ನವೇ ಮತ್ತೊಂದು ಭೂಕುಸಿತ.. ಒಂದು ಮಗು ಸೇರಿ 7 ಜನರು ಸಾವು

Advertisment

publive-image

ರಸ್ತೆಯೇ ಕೊಚ್ಚಿಹೋಗಿರೋದ್ರಿಂದ ಹತ್ತಾರು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ರಸ್ತೆಯ ಪಕ್ಕದಲ್ಲಿ ಎತ್ತಿನಹೊಳೆ ಕಾಮಗಾರಿಗಾಗಿ ಕೆಲಸ ಮಾಡಲಾಗಿತ್ತು. ಎತ್ತಿನಹೊಳೆ ಅವೈಜ್ಞಾನಿಕ ಕಾಮಗಾರಿಯಿಂದಲೇ ಭೂಕುಸಿತ ಆರೋಪ ಕೇಳಿಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment