ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವವರೇ ಗಮನಿಸಿ.. ರೈಲ್ವೆ ಇಲಾಖೆಯಿಂದ ಭರ್ಜರಿ ಸಿಹಿ ಸುದ್ದಿ!

author-image
Gopal Kulkarni
Updated On
ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವವರೇ ಗಮನಿಸಿ.. ರೈಲ್ವೆ ಇಲಾಖೆಯಿಂದ ಭರ್ಜರಿ ಸಿಹಿ ಸುದ್ದಿ!
Advertisment
  • ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುವ ಕನಸಿದ್ದವರಿಗೆ ಸಿಹಿ ಸುದ್ದಿ
  • ಹಲವು ಹುದ್ದೆಗಳಿಗೆ ಹೊಸ ನೇಮಕಾತಿಗೆ ಮುಂದಾದ ಇಲಾಖೆ
  • ಯಾವ ಯಾವ ಹುದ್ದೆಗಳಿಗೆ ಎಷ್ಟು ಅಭ್ಯರ್ಥಿಗಳ ನೇಮಕಾತಿ ಗೊತ್ತಾ?

ನವದೆಹಲಿ: ರೈಲ್ವೆ ನೇಮಕಾತಿ ಮಂಡಳಿಯಿಂದ ಹೊಸದೊಂದು ಹಾಗೂ ಸಿಹಿ ಸುದ್ದಿ ಹೊರಬಿದ್ದಿದೆ. 2024ರ ಸಾಲಿನಲ್ಲಿ ಹಲವು ವಿಭಾಗಗಳಲ್ಲಿ ಹೊಸ ಉದ್ಯೋಗಿಗಳ ನೇಮಕಕ್ಕೆ ರೈಲ್ವೆ ಇಲಾಖೆ ಮುಂದಾಗಿದೆ. ಹೀಗಾಗಿ ರೈಲ್ವೆ ಇಲಾಖೆಯಲ್ಲಿ ಕೆಲಸ ನಿರ್ವಹಿಸೋ ಕನಸು ಕಂಡವರಿಗೆ ಸುವರ್ಣ ಅವಕಾಶದ ಬಾಗಿಲೊಂದನ್ನು ಈಗ ರೇಲ್ವೆ ಇಲಾಖೆ ತೆರೆದಿದೆ.

ಇದನ್ನೂ ಓದಿ:Train Accident: ಹಳಿ ತಪ್ಪಿದ ಸಂಪರ್ಕ ಕ್ರಾಂತಿ ಎಕ್ಸ್​ಪ್ರೆಸ್ ರೈಲು.. ಆಮೇಲೇನಾಯ್ತು? ಶಾಕಿಂಗ್ ವಿಡಿಯೋ!

ರೈಲ್ವೆ ನೇಮಕಾತಿ ಮಂಡಳಿಯಿಂದ ಜ್ಯೂನಿಯರ್ ಎಂಜಿನಿಯರ್ ಹುದ್ದೆಗೆ ಆಹ್ವಾನಿಸಿ ಈಗಾಗಲೇ ನೋಟಿಫಿಕೇಷನ್ ಹೊರಡಿಸಲಾಗಿದೆ. ಈ ಮೂಲಕ ರೈಲ್ವೆಯ ಹಲವು ವಿಭಾಗಗಳಲ್ಲಿ ಅಧಿಕಾರ ಸ್ಥರದಲ್ಲಿ ಕೆಲಸ ಮಾಡಲು ಆಹ್ವಾನಿಸಿದೆ. ರೈಲ್ವೆ ಇಲಾಖೆ ಹೊರಡಿಸಿರುವ ಸುತ್ತೋಲೆಯ ಪ್ರಕಾರ ಒಟ್ಟು 7,951 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ. ಕೆಮಿಕಲ್ ಸೂಪ್ರವೈಸರ್, ಲೋಹಶಾಸ್ತ್ರ ಮತ್ತು ಸಂಶೋಧನೆಯ ಮೇಲ್ವಿಚಾರಕರು ಸೇರಿ ಒಟ್ಟು 17 ಹುದ್ದೆಗಳಿಗೆ ಹೊಸ ನೇಮಕಾತಿಗೆ ರೈಲ್ವೆ ಇಲಾಖೆ ಮುಂದಾಗಿದೆ. ಇಲಾಖೆಯ ನಿಯಮದ ಪ್ರಕಾರ ರೈಲ್ವೆ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವವರ ವಯಸ್ಸು 18-36ವರೆಗೆ ಇರಬೇಕು, ಇನ್ನೂ ಶಿಕ್ಷಣವನ್ನು ಆಯಾ ಹುದ್ದೆಗೆ ಅನುಗುಣವಾಗಿ ಹೊಂದಿರಬೇಕು ಇದಕ್ಕೆ ರೇಲ್ವೆ ಇಲಾಖೆಯ https://indianrailways.gov.in/railwayboard/view_section.jsp?lang=0&id=0,5,373,2986 ವೆಬ್​ಸೈಟ್​ಗೆ ಹೋಗಿ ತಿಳಿದುಕೊಳ್ಳಬಹುದು.

ಇದನ್ನೂ ಓದಿ:ಕೈಯಲ್ಲಿ ಎಣ್ಣೆ ಬಾಟ್ಲು, ಅರೆಬೆತ್ತಲೆ ನೃತ್ಯ.. ದೇವಭೂಮಿಯಲ್ಲಿ ಅಸಹ್ಯ ನೋಡಿ ಬೆಚ್ಚಿ ಬಿದ್ದ ಜನ; ಆಗಿದ್ದೇನು?

ಅರ್ಜಿ ಸಲ್ಲಿಸುವವರು 500 ರೂಪಾಯಿಗಳನ್ನು ಪಾವತಿಸಬೇಕು. ಬಳಿಕ ಸಿಬಿಟಿ ಪರೀಕ್ಷಾ ನಂತರ 400 ರೂಪಾಯಿಗಳನ್ನು ವಾಪಸ್ ಕೊಡಲಾಗುತ್ತದೆ. ಇನ್ನೂ ಮೀಸಲಾತಿ ಅಡಿಯಲ್ಲಿ ಬರುವ ಅಭ್ಯರ್ಥಿಗಳು 250 ರೂಪಾಯಿಯನ್ನು ತುಂಬಿ ಅರ್ಜಿ ಸಲ್ಲಿಸಬೇಕು. ಪರೀಕ್ಷೆಯ ಬಳಿಕ ಬ್ಯಾಂಕ್ ಫೀಸ್ ಹೊರತು ಪಡಿಸಿ ಉಳಿದ ಹಣವನ್ನು ವಾಪಸ್ ನೀಡಲಾಗುತ್ತದೆ ಎಂದು ರೈಲ್ವೆ ಇಲಾಖೆಯ ಸೂಚನೆಯಲ್ಲಿ ಉಲ್ಲೇಖಿಸಲಾಗಿದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment