/newsfirstlive-kannada/media/post_attachments/wp-content/uploads/2024/10/BISHNOYI-ATTACK-SIDDAQUE.jpg)
ಮಹಾರಾಷ್ಟ್ರದ ಪವರ್‌ಫುಲ್ ರಾಜಕಾರಣಿಯಾಗಿದ್ದ. ಬಾಲಿವುಡ್ ಪಾಲಿನ ಬಾಂದ್ರಾ ಭಾಯ್ ಆಗಿದ್ದ... ಕರ್ನಾಟಕದ ಹಲವಾರು ರಾಜಕಾರಣಿಗಳಿಗೂ ತುಂಬಾ ಆತ್ಮೀಯವಾಗಿ ಇದ್ದ ನಾಯಕ ಬಾಬಾ ಸಿದ್ಧಿಕಿಯನ್ನ ಕಗ್ಗೊಲೆ ಮಾಡಲಾಗಿದೆ. ಬೈಕ್‌ನಲ್ಲಿ ಬಂದ ಮೂವರು ಹಂತಕರು ಶೂಟೌಟ್ ಮಾಡಿ ಪ್ರಾಣ ತೆಗೆದಿದ್ದಾರೆ. ಬಾಬಾ ಸಿದ್ಧಿಕಿ ಹತ್ಯೆ ಸುದ್ದಿ ಎಲ್ಲೆಡೆ ಆತಂಕ ಹುಟ್ಟಿಸಿದೆ. ಅಖಾಡಕ್ಕೆ ಇಳಿದಿರೋ ಪೊಲೀಸರು ಮೂವರು ಹಂತಕರಲ್ಲಿ ಇಬ್ಬರನ್ನು ಬಂಧಿಸಿ ಕೆಲವೊಂದು ಶಾಕಿಂಗ್ ವಿಚಾರಗಳನ್ನ ಬಾಯ್ಬಿಡಿಸಿದ್ದಾರೆ. ಆ ಮಾಹಿತಿಗಳು ಸ್ಫೋಟಗೊಂಡ ಬಳಿಕವೀಗ ಬಾಬಾ ಸಿದ್ದಿಕಿ ಹತ್ಯೆಯ ಸುತ್ತ ಭಯಾನಕ ಅನುಮಾನಗಳು ಹುಟ್ಟಿಕೊಂಡಿವೆ. ಬಾಬಾ ಸಿದ್ದಿಕಿ ಸಲ್ಮಾನ್ ಜೊತೆ ದೋಸ್ತಿ ಬೆಳೆಸಿದ್ದೇ ಅವರ ಪ್ರಾಣಕ್ಕೆ ಸಂಚಕಾರ ತಂದಿತಾ ಎಂಬ ಗುಮಾನಿ ಹುಟ್ಟುವಂತೆ ಮಾಡಿದೆ!
ಬಾಬಾ ಸಿದ್ದಿಕಿ ಕೊಲೆ ಕೇಸ್‌ನಲ್ಲಿ ಬಂಧಿತರಾಗಿರೋ ಇಬ್ಬರು ಶೂಟರ್‌ಗಳು ನಟೋರಿಯಸ್ ಗ್ಯಾಂಗ್‌ಸ್ಟರ್ ಲಾವೆರನ್ಸ್ ಬಿಷ್ಣೋಯಿ ಹೆಸರನ್ನ ಬಾಯ್ಬಿಟ್ಟಿದ್ದಾರಂತೆ. ನಾವು ಲಾರೆನ್ಸ್ ಸಹಚರರು ಅಂತಾ ಹೇಳ್ಕೊಂಡಿದ್ದಾರಂತೆ. ಹಾಗಾಗಿ, ಲಾರೆನ್ಸ್ ಬಿಷ್ಣೋಯಿಯೇ ಈ ಹತ್ಯೆಗೆ ಸುಪಾರಿ ಕೊಟ್ಟಿದ್ದನಾ ಎಂಬ ಪ್ರಶ್ನೆ ಹುಟ್ಟಿಸಿದೆ. ಯಾಕಂದ್ರೆ, ಲಾರೆನ್ಸ್ ಬಿಷ್ಣೋಯಿ ಸಲ್ಮಾನ್ ಖಾನ್ ಕೊಲೆಗೂ ಸ್ಕೆಚ್ ಹಾಕಿದ್ದ. ಇಂದಿಗೂ ಸಲ್ಮಾನ್ ಖಾನ್‌ಗೆ ಲಾರೆನ್ಸ್ ಗ್ಯಾಂಗ್ ಕಡೆಯಿಂದ ಕೊಲೆ ಬೆದರಿಕೆ ಬರುತ್ತಿರುತ್ತವೆ, ಕೆಲವು ಬಾರಿ ಸಲ್ಮಾನ್ ಹತ್ಯೆಗೆ ಯತ್ನವೂ ನಡೆದಿದೆ. ಹಾಗಾಗಿ, ಲಾರೆನ್ಸ್ ಬಿಷ್ಣೋಯಿಯೇ ಸಲ್ಮಾನ್ ಖಾನ್ ಆತ್ಮೀಯರಾಗಿದ್ದ ಬಾಬಾ ಸಿದ್ದಿಕಿಗೆ ಮುಹೂರ್ತವಿಟ್ಟಿರೋ ಶಂಕೆ ದೊಡ್ಡದಾಗುತ್ತಿದೆ!
ಮಹಾರಾಷ್ಟ್ರದ ಪವರ್‌ಫುಲ್ ಲೀಡರ್ ಬಾಬಾ ಸಿದ್ದಿಕಿ ಹತ್ಯೆ ಅಚ್ಚರಿ ಅನ್ನಿಸುವ ಸಂಗತಿಯೊಂದು ಸ್ಫೋಟಗೊಂಡಿದೆ. ಅದೇನಂದ್ರೆ, ಸದ್ಯ ಅಹಮದಾಬಾದ್ ಸಾಬರಮತಿ ಸೆಂಟ್ರಲ್ ಜೈಲಿನಲ್ಲಿರೋ ಲಾರೆನ್ಸ್ ಬಿಷ್ಣೋಯಿ. ಕಳೆದ ಕೆಲ ದಿನಗಳಿಂದ ಮೌನವ್ರತ ಮಾಡ್ತಿದ್ದನಂತೆ. ಯಾರೊಟ್ಟಿಗೂ ಮಾತನಾಡದೆ ಸುಮ್ಮನೆ ಗಂಟೆಗಳ ಕಾಲ ಒಂಟಿಯಾಗಿ ಕೂರುತ್ತಿದ್ದಾನಂತೆ. ಹೀಗೆ, ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಮೌನವ್ರತ ಮಾಡಿರೋದು ಇದೇ ಮೊದಲ ಬಾರಿಯಲ್ಲ. ಅದ್ರೂ ಕೂಡ ಜೈಲು ಅಧಿಕಾರಿಗಳಿಗೆ.. ಜೈಲಿನ ಸಹ ಕೈದಿಗಳಿಗೆ ಲಾರೆನ್ಸ್ ಪ್ರತಿಬಾರಿ ಮೌನವ್ರತಕ್ಕೆ ಮುಂದಾದಾಗ ಆತಂಕ, ಎದೆಬಡಿತ ಹೆಚ್ಚುತ್ತದೆಯಂತೆ. ಕಾರಣ, ಯಾರದಾದ್ರೂ ಹತ್ಯೆಗೆ ತೆಗೆಯೋಕೆ ಸ್ಕೆಚ್ ಹಾಕಿ ಮುಹೂರ್ತವಿಟ್ಟ ಸಂದರ್ಭದಲ್ಲಿ ಲಾರೆನ್ಸ್ ಹೀಗೆ ಮೌನವ್ರತ ಮಾಡ್ತಾನಂತೆ. ಈಗ, ಕಳೆದ ಕೆಲ ದಿನಗಳಿಂದಲೂ ಲಾರೆನ್ಸ್ ಮೌನವ್ರತ ಮಾಡ್ತಿದ್ದಾನಂತೆ
ಇದನ್ನೂ ಓದಿ:ಸಲ್ಮಾನ್ ಹಾಗೂ ಶಾರುಖ್ ನಡುವೆ ಸೇತುವೆಯಂತಿದ್ದ ಬಾಬಾ ಸಿದ್ಧಕಿ; ಇಫ್ತಾರ್ಕೂಟದಲ್ಲಿಯೇ ಆಗುತ್ತಿತ್ತು ಸಂಧಾನ
ಈ ಬಾಬಾ ಸಿದ್ದಿಕಿ ಹತ್ಯೆ ಮಾಡಿಸಿರೋದು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿಯೇ ಅನ್ನೋ ಶಂಕೆ ಪ್ರಬಲವಾಗ್ತಿದೆ. ಇನ್ನೂ ಶಾಕಿಂಗ್ ಅಂದ್ರೆ, ಕೆಲ ದಿನಗಳ ಹಿಂದೆ ಲಾರೆನ್ಸ್ ಬಿಷ್ಣೋಯಿ ಜೈಲಿನಿಂದಲೇ ಪಾಕಿಸ್ತಾನದ ಗ್ಯಾಂಗ್‌ಸ್ಟರ್ ಒಬ್ಬನಿಗೆ ವಿಡಿಯೋ ಕಾಲ್ ಮಾಡಿರೋ ಬಗ್ಗೆ ಸುದ್ದಿ ಸ್ಫೋಟಗೊಂಡಿದೆ. ಅದು ಸತ್ಯನಾ ಸುಳ್ಳಾ ಗೊತ್ತಿಲ್ಲ. ಈ ಕೊಲೆಗೂ ಲಾರೆನ್ಸ್ಗೂ ಲಿಂಕ್ ಇರೋ ಶಂಕೆ ಹುಟ್ಟಿಕೊಂಡಿರೋ ಹೊತ್ತಲ್ಲಿ, ಪಾಕಿಸ್ತಾನದ ಗ್ಯಾಂಗ್‌ಸ್ಟಾರ್‌ಗೆ ಈತ ವಿಡಿಯೋ ಕಾಲ್ ಮಾಡಿದ್ದಾನೆಂಬ ಸುದ್ದಿ ಅನುಮಾನದ ಬೆಂಕಿಗೆ ತುಪ್ಪ ಚೆಲ್ಲುತ್ತಿರೋದಂತೂ ಸತ್ಯ.
1998 ರಲ್ಲಿ ಸಲ್ಮಾನ್ ಖಾನ್ ಕೃಷ್ಣಮಗ ಬೇಟೆಯಾಡಿದ ಆರೋಪ ಹೊತ್ತ ಸಂದರ್ಭದಿಂದಲೂ ಲಾರೆನ್ಸ್ ಬಿಷ್ಣೋಯಿ ದುಃಸ್ವಪ್ನದಂತೆ ಕಾಡ್ತಿದ್ದಾರೆ. ಲಾರೆನ್ಸ್ ಬಿಷ್ಣೋಯಿ ಜನಿಸಿರೋ ಸಮುದಾಯ ಕೃಷ್ಣಮೃಗವನ್ನು ಪೂಜ್ಯ ಭಾವನೆಯಿಂದ ಕಾಣುತ್ತೆ. ಹಾಗಾಗಿ, ಗ್ಯಾಂಗ್‌ಸ್ಟರ್‌ಗೆ ಸಲ್ಮಾನ್ ಖಾನ್ ಮೇಲೆ ದ್ವೇಷವಿದೆ ಎನ್ನಲಾಗ್ತಿದೆ. ಹಲವು ಬಾರಿ ಸಲ್ಮಾನ್ ಖಾನ್ ಹತ್ಯೆಗೆ ಲಾರೆನ್ಸ್ ಗ್ಯಾಂಗ್ ಪ್ರಯತ್ನಿಸಿ ವಿಫಲವಾಗಿದೆ. ಈಗ, ಬಾಬಾ ಸಿದ್ದಿಕಿ ಸಲ್ಮಾನ್ ಖಾನ್‌ನ ಆಪ್ತ ಎಂಬ ಕಾರಣಕ್ಕಾಗಿಯೇ ಈ ಕೊಲೆ ಮಾಡಿಸಿದ್ದಾನೆ ಅನ್ನೋ ಶಂಕೆ ಹುಟ್ಟಿಕೊಂಡಿದೆ. ಹಂತಕರು ನೀಡಿರೋ ಹೇಳಿಕೆ ಆ ಶಂಕೆಗೆ ರೆಕ್ಕೆ ಪುಕ್ಕ ಹುಟ್ಟಿಸಿದೆ. ಜೊತೆಗೆ ಇನ್ನೂ ಹಲವು ಅನುಮಾನಗಳು ಭುಗಿಲೆದ್ದಿವೆ!
ಇದನ್ನೂ ಓದಿ:ನೋಡ ನೋಡ್ತಿದ್ದಂತೆ ಭಸ್ಮಾಸುರನಂತೆ ನುಗ್ಗಿ ಬಂದ ಕಾರು.. ಭಯಾನಕ ವಿಡಿಯೋ ಸೆರೆ!
ಸಲ್ಮಾನ್ ಖಾನ್‌ಗೆ ಹಲವಾರು ಆಪ್ತರಿದ್ದಾರೆ. ಬಾಬಾ ಸಿದ್ದಿಕಿಯನ್ನೇ ಟಾರ್ಗೆಟ್ ಮಾಡಿದ್ಯಾಕೆ? ಇದೊಂದು ಪ್ರಶ್ನೆ ಎಲ್ಲರನ್ನೂ ಕಾಡ್ತಿದೆ. ಅಥವಾ, ಲಾರೆನ್ಸ್ ಬಿಷ್ಣೋಯಿಗೆ ಬಾಬಾ ಸಿದ್ದಿಕಿ ಮೇಲೆ ವೈಯಕ್ತಿಕ ದ್ವೇಷವೇನಾದ್ರೂ ಇತ್ತಾ? ಈ ಬಗ್ಗೆ ಪೊಲೀಸರು ತನಿಖೆ ನಡೆಸ್ತಿದ್ದಾರೆ. ಇದಾಗಲೇ 5 ತಂಡಗಳು ಅಖಾಡಕ್ಕೆ ಇಳಿದು ತನಿಖೆ ಚುರುಕುಗೊಳಿಸಿವೆ. ಈ ಬಾಬಾ ಸಿದ್ದಿಕಿ ಹತ್ಯೆ ರಾಜಕೀಯ ಸ್ವರೂಪ ಪಡ್ಕೊಂಡಿದ್ದು ನಾಯಕರ ನಡುವಿನ ವಾಕ್ಸಮರಕ್ಕೂ ಕಾರಣವಾಗಿದೆ. ಅಲ್ಲದೆ, ಮುಂಬೈನಲ್ಲಿ ಮತ್ತೆ ತೊಂಬತ್ತರ ದಶಕದ ಭೂಗತ ಲೋಕ ಮರುಜನ್ಮ ಪಡೆದುಳ್ತಿದೆಯಾ ಎಂಬ ಆತಂಕವನ್ನೂ ಹುಟ್ಸಿದೆ.
1990 ರ ದಶಕದಲ್ಲಿ ಮುಂಬೈನಲ್ಲಿ ಅಂಡರ್‌ವರ್ಲ್ಡ್ ಮಾಫಿಯಾದ ದೊಡ್ಡ ಅಟ್ಟಹಾಸವಿತ್ತು. ಮುಂಬೈ ಪೊಲೀಸರು ಅಂಡರ್‌ವರ್ಲ್ಡ್ ಮಾಫಿಯಾನ ಬೇರುಗಳನ್ನು ಕಿತ್ತು ಹಾಕಿದ್ರು. ದಾವುದ್ ಇಬ್ರಾಹಿಂ, ಚೋಟಾ ರಾಜನ್, ಅರುಣ್ ಗಾವ್ಲಿ, ಸಮೇತ ಹಲವಾರು ನಟೋರಿಯಲ್ ಡಾನ್‌ಗಳ ಕಂಟ್ರೋಲ್‌ನಲ್ಲಿ ಮುಂಬೈ ನಲುಗಿತ್ತು. ಹಫ್ತಾ ವಸೂಲಿ, ಸ್ಮಗ್ಲಿಂಗ್, ಕಾಂಟ್ರ್ಯಾಕ್ಟ್ ಕಿಲ್ಲಿಂಗ್, ಲ್ಯಾಂಡ್ ಮಾಫಿಯಾಗಳನ್ನು ನಡೆಸಿ ಮುಂಬೈ ನಗರದಲ್ಲಿ ಅಗೋಚರ ಭಯದ ಕಾರ್ಮೋಡ ಕವಿಯುವಂತೆ ಮಾಡಿದ್ರು. ಮುಂಬೈ ಪೊಲೀಸರು ಇತರೆ ಪೊಲೀಸ್ ಫೋರ್ಸ್ ಜೊತೆ ಸೇರಿಕೊಂಡು ಅಂಡರ್‌ವರ್ಲ್ಡ್ ಮಾಫಿಯಾನ ಹುಟ್ಟಡಗಿಸಿದ್ರು.
ಇದನ್ನೂ ಓದಿ: ಗೀತಾ ಜಯಂತಿ ಎಕ್ಸ್ಪ್ರೆಸ್ ರೈಲಿನಲ್ಲಿ ಕಾಣಿಸಿಕೊಂಡ ಬೆಂಕಿ! ಆಮೇಲೆ ಆಗಿದ್ದೇನು?
ಆ್ಯಂಟಿ ಟೆರರಿಸಂ ಸ್ಕ್ವಾಡ್ - ಎಟಿಎಸ್ ಡಾನ್‌ಗಳ ಪಾಲಿಗೆ ದುಸ್ವಪ್ನವಾಗಿ ಕಾಡಿತ್ತು. ಎನ್‌ಕೌಂಟರ್ ಸ್ಪೆಷಲಿಸ್ಟ್‌ಗಳಾದ ದಯಾನಾಯಕ್, ಪ್ರದೀಪ್ ಶರ್ಮಾ, ವಿಜಯ್ ಸಾಸಾಲ್ಕರ್ ಸೇರಿದಂತೆ ಖಡಕ್ ಕಾಕಿಗಳು ನಟೋರಿಯಸ್ ರೌಡಿಗಳು, ಡಾನ್‌ಗಳ ಚಳಿ ಬಿಡಿಸಿದ್ರು. ಕಂಡ ಕಂಡಲ್ಲಿ ಎನ್‌ಕೌಂಟರ್ ಮಾಡಿ ಅಸುರ ಸಂಹಾರ ಮಾಡಿದ್ರು. 1993 ರಲ್ಲಿ ಮುಂಬೈನಲ್ಲಿ ದಾವುದ್ ಇಬ್ರಾಹಿಂ ಸಂಚಿನಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಬಳಿಕ ಎಟಿಎಸ್ ರಚನೆಯಾಗಿತ್ತು. ಅಲ್ಲಿಂದ ಮುಂಡೈನ ಅಂಡರ್‌ವರ್ಲ್ಡ್ ಗೆ ಕಡಿವಾಣ ಹಾಕುತ್ತಾ ಬರಲಾಗಿತ್ತು. ಈಗ ಬಾಬಾ ಸಿದ್ದಿಕಿ ಹತ್ಯೆ ತೊಂಬತ್ತರ ದಶಕದ ಅಂಡರ್‌ವರ್ಲ್ಡ್ ಮರುಜನ್ಮ ಪಡೆದುಕೊಂಡಿದೆಯಾ ಎಂಬ ಚರ್ಚೆ ಶುರುವಾಗುವಂತೆ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ