/newsfirstlive-kannada/media/post_attachments/wp-content/uploads/2024/09/CJI-D-Y-CHANDRACHUDA.jpg)
ನವದೆಹಲಿ: ಮ್ಯಾಟ್ರಿಮೋನಿಯ ಮೂಕದ್ದಮೆ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ ಅವರು ಮಹಿಳೆಯೊಬ್ಬರಿಗೆ ಕಿವಿ ಮಾತನ್ನು ಹೇಳಿದ್ದಾರೆ. ಒಟ್ಟಿಗೆ ಬಾಳಲು ಇಷ್ಟವಿಲ್ಲದಿದ್ದಲ್ಲಿ ಒಮ್ಮತ ನಿರ್ಧಾರಕ್ಕೆ ಬಂದು ಬೇರೆಯಾಗಿ. ನಿರಂತರ ಕಾನೂನು ಹೋರಾಟದಿಂದ ಕೇವಲ ವಕೀಲರಿಗೆ ಮಾತ್ರ ಲಾಭ. ಇದರಿಂದ ನಿಮ್ಮ ಬದುಕು ಸರಿಯಾಗುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ:1.6 ಕೋಟಿ ರೂಪಾಯಿ ಫೇಕ್ ನೋಟ್ಗಳಲ್ಲಿ ಅನುಪಮ್ ಖೇರ್; ಈ ಬಗ್ಗೆ ನಟ ಹೇಳಿದ್ದೇನು ಗೊತ್ತಾ?
ಇದೇ ವೇಳೆ ಚೀಫ್ ಜಸ್ಟಿಸ್ ಮಹಿಳೆಯ ವಿದ್ಯಾಭ್ಯಾಸದ ಬಗ್ಗೆ ವಿಚಾರ ಮಾಡಿದ್ದಾರೆ. ಅವರು ನನ್ನದು MTech ಆಗಿದ್ದು ಯುಎಸ್ ವಿಶ್ವವಿದ್ಯಾಲಯದಲ್ಲಿ ಪಿಹೆಚ್ಡಿ ಮಾಡಿದ್ದೇನೆ ಎಂದಿದ್ದಾರೆ. ಎಲ್ಲಿ ಕೆಲಸ ಮಾಡುತ್ತಿದ್ದೀರಾ ಎಂದು ಕೇಳಿದಾಗ ಮಹಿಳೆ ಎಲ್ಲಿಯೂ ಇಲ್ಲ ಎಂದಿದ್ದಾರೆ. ಅದಕ್ಕೆ ನ್ಯಾಯಮೂರ್ತಿಗಲು ಮೊದಲು ನೀವು ಒಂದು ಕೆಲಸಕ್ಕೆ ಸೇರಿಕೊಳ್ಳಿ ಎಂದು ಕಿವಿಮಾತನ್ನು ಹೇಳಿದ್ದಾರೆ.
ಇದನ್ನೂ ಓದಿ:ಕಟ್ಟಡ ಧ್ವಂಸಗೊಳಿಸುವಾಗ ವ್ಯಕ್ತಿಯ ನೆತ್ತಿ ಸೀಳಿತು ತೂರಿ ಬಂದ ಕಲ್ಲು; ವಿಡಿಯೋ ನೋಡಿದ್ರೆ ಬೆಚ್ಚಿ ಬೀಳೋದು ಗ್ಯಾರಂಟಿ
ನೀವು ಶಿಕ್ಷಿತರು ಆದರೂ ಕೂಡ ನೀವು ಕೆಲಸದಲ್ಲಿಲ್ಲ. ಮೊದಲು ನೀವು ಒಂದು ಕೆಲಸ ಹುಡುಕಿಕೊಳ್ಳಿ ಎಂದು ತಿಳಿ ಮಾತನ್ನು ಹೇಳಿದ್ದಾರೆ. ನೀವು ಈಗಾಗಲೇ ಈ ಪ್ರಕರಣದಲ್ಲಿ ಹತ್ತು ವರ್ಷ ಕಳೆದಿದ್ದೀರಾ, ಇದು ಇನ್ನೂ 10 ವರ್ಷ ತಳ್ಳಿಕೊಂಡು ಹೋಗಬಹುದು ಇದರಿಂದ ವಕೀಲರುಗಳಿಗೆ ಲಾಭವೇ ಹೊರತು ನಿಮ್ಮ ಬದುಕಿನಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಯಾಕೆ ನೀವು ಒಬ್ಬರಿಗೊಬ್ಬರು ಒಮ್ಮತದಿಂದ ವಿಚ್ಛೇದನಕ್ಕೆ ಮುಂದಾಗಬಾರದು ಒಮ್ಮೆ ಯೋಚಿಸಿ ನೋಡಿ ಎಂದು ಹೇಳಿದ್ದಾರೆ.
ನೀವು ಮತ್ತೆ ಒಂದಾಗಲು ಈಗ ಸಾಧ್ಯವಿಲ್ಲ ಎಂಬುದು ನಿಮಗೆ ಗೊತ್ತಿದೆ. ನೀವು ಅನಕ್ಷರಸ್ಥರಾಗಿದ್ದರೆ ಅದೊಂದು ಮಾತು ಬೇರೆ ಇತ್ತು. ಆದರೆ ನೀವು ಒಳ್ಳೆಯ ಶೈಕ್ಷಣಿಕ ಹಿನ್ನೆಲೆ ಇದ್ದವರು. ಹೀಗಾಗಿ ಮೊದಲು ನಿಮಗಾಗಿ ಒಂದು ಕೆಲಸ ಹುಡುಕಿಕೊಳ್ಳಿ ಎಂದು ನ್ಯಾಯಮೂರ್ತಿಗಳು ಸಲಹೆ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ