newsfirstkannada.com

ಮಕ್ಕಳ ಗೆಲ್ಲಿಸುವಲ್ಲಿ ಸೋತ ಮೂವರು ಸಚಿವರು.. ತೀವ್ರ ಮುಖಭಂಗ, ಸ್ಥಾನಕ್ಕೆ ಬಂತಾ ಕುತ್ತು..?

Share :

Published June 5, 2024 at 9:01am

Update June 5, 2024 at 9:03am

    ಹೈಕಮಾಂಡ್ ಟಾಸ್ಕ್​​ನಲ್ಲಿ ಜಾರಕಿಹೊಳಿ, ಖಂಡ್ರೆ ಯಶಸ್ವಿ

    ಡಿಸಿಎಂ ಡಿ.ಕೆ.ಶಿವಕುಮಾರ್​​ಗೆ ನಿರಾಸೆ ತಂದ ಚುನಾವಣೆ

    ಕರ್ನಾಟಕದ 9 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್

ಭಾರಿ ನಿರೀಕ್ಷೆ ಹುಟ್ಟಿಸಿದ್ದ ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟ ಆಗಿದೆ. ಕರ್ನಾಟಕದಲ್ಲಿ ಕಳೆದ 20 ವರ್ಷಗಳಲ್ಲಿ ಕಾಂಗ್ರೆಸ್ ಅಭೂತಪೂರ್ವ ಸಾಧನೆ ತೋರಿದೆ. ಉತ್ತರದಲ್ಲಿ ಖರ್ಗೆ ಖದರ್ ತೋರಿದ್ದಾರೆ. ಆದ್ರೆ ಕಾಂಗ್ರೆಸ್ ಡಬಲ್ ಡಿಜಿಟ್ ನಿರೀಕ್ಷೆ ಹುಸಿಯಾಗಿದೆ. ಪ್ರಮುಖ ನಾಯಕರು ಹಾಗೂ ಅವರ ಮಕ್ಕಳಿಗೆ ಸೋಲಿನ ಆಘಾತವಾಗಿದೆ.

ಅದರಲ್ಲಿ ಲೋಕಸಭಾ ಚುನಾವಣೆಯಲ್ಲಿ ಗಮನ ಸೆಳೆದ ಕ್ಷೇತ್ರದಲ್ಲಿ ಬೆಳಗಾವಿ ಒಂದು. ಇಲ್ಲಿ ಕಣಕ್ಕಿಳಿದಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಗೆಲುವಿನ ನಿರೀಕ್ಷೆಯಲ್ಲಿದ್ದರು. ಆದ್ರೆ ಬೆಳಗಾವಿಯ ಮನೆ ಮಗನಿಗೆ ಮತದಾರರು ಕೈ ಕೊಟ್ಟಿದ್ದಾರೆ. ಕ್ಷೇತ್ರಕ್ಕೆ ವಲಸಿಗರಾದ್ರೂ ಅನುಭವಿ ಜಗದೀಶ್ ಶೆಟ್ಟರ್​​ಗೆ ಮಣೆ ಹಾಕಿದ್ದರು. ಮಗನ ಸೋಲು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ಗೆ ಅಘಾತ ತಂದಿದೆ.

ಇದನ್ನೂ ಓದಿ:ಕರ್ನಾಟಕ ಕಾಂಗ್ರೆಸ್​ಗೆ ನವರತ್ನ.. ಸಿದ್ದುಗೆ ಪೂರಕ.. ಡಿಕೆಶಿಗೆ ಆಘಾತ.. ಹೇಗೆ ಗೊತ್ತಾ?

ಮತ್ತೊಂದೆಡೆ ಬಾಗಲಕೋಟೆ ಕ್ಷೇತ್ರದಲ್ಲಿ ಸತತ ಸೋಲಿನಿಂದ ಕಂಗೆಟ್ಟಿದ್ದ ಕಾಂಗ್ರೆಸ್ ಈ ಬಾರಿ ಸಚಿವ ಶಿವಾನಂದ ಪಾಟೀಲ್ ಪುತ್ರಿ ಹೊಸ ಮುಖ ಸಂಯಕ್ತಾ ಪಾಟೀಲ್​​​ರನ್ನು ಕಣಕ್ಕಿಳಿಸಿತ್ತು. ಬಂಡಾಯದ ಬಿಸಿ ಹಾಗೂ ಇನ್ನಿತರ ಕಾರಣಗಳಿಂದ ಸಂಯುಕ್ತ ಪಾಟೀಲ್​​ಗೆ ಸೋಲಾಗಿದೆ. ಇತ್ತ ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಸೋತಿದ್ದ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾರೆಡ್ಡಿ ಲೋಕಸಭಾ ಚುನಾವಣೆಯಲ್ಲೂ ಸೋಲಿನ ಕಹಿ ಉಂಡಿದ್ದಾರೆ. ಇನ್ನು ಸತೀಶ್ ಜಾರಕಿಹೊಳಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ತಮ್ಮ ಪುತ್ರಿಯನ್ನು ಗೆಲ್ಲಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾರೆ. ಅದೇ ರೀತಿ ಈಶ್ವರ್​ ಖಂಡ್ರೆ ಅವರು ಬೀದರ್ ಲೋಕಸಭಾ ಕ್ಷೇತ್ರದಿಂದ ತಮ್ಮ ಪುತ್ರ ಸಾಗರ್ ಖಂಡ್ರೆಯನ್ನು ಗೆಲ್ಲಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾರೆ.​

ಇದನ್ನೂ ಓದಿ:ಮೋದಿ ಅಲ್ಲವೇ ಅಲ್ಲ.. NDA ಒಕ್ಕೂಟದಲ್ಲಿ ಇಬ್ಬರು ಕಿಂಗ್ ಮೇಕರ್..! ಕುಮಾರಸ್ವಾಮಿಗೂ ಬಂತು ಬುಲಾವ್..!

ಈ ಬಾರಿಯ ಲೋಕಸಭಾ ಚುನಾವಣಾ ಫಲಿತಾಂಶ ರಾಜ್ಯ ಕಾಂಗ್ರೆಸ್​​​ಗೆ ಸ್ವಲ್ಪಮಟ್ಟಿನ ಸಮಾಧಾನ ತಂದಿದೆ. ಅದರಲ್ಲೂ ಸಿಎಂ ಸಿದ್ದರಾಮಯ್ಯ ಕುರ್ಚಿ ಅಲುಗಾಡದಂತೆ ಹಿಡಿದಿದೆ. ಆದರೆ, ಡಿಕೆ ಸುರೇಶ್‌ ಸೇರಿದಂತೆ ತಮ್ಮ ಹಿಂಬಾಲಕರಲ್ಲೇ ಹಲವರು ಸೋತಿರುವುದರಿಂದ ಡಿಸಿಎಂ ಡಿ.ಕೆ.ಶಿವಕುಮಾರ್​​ಗಂತೂ ಇದು ನಿರಾಸೆ ತಂದ ಚುನಾವಣೆ ಎಂದರೆ ತಪ್ಪಾಗಲಾರದು.

ಇದನ್ನೂ ಓದಿಉತ್ತರ ಪ್ರದೇಶ, ಮಹಾರಾಷ್ಟ್ರ ಅಲ್ಲವೇ ಅಲ್ಲ.. ಪ್ರಧಾನಿ ಮೋದಿ ಕೈ ಹಿಡಿದಿದ್ದು ಈ ಮೂರು ರಾಜ್ಯಗಳು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಕ್ಕಳ ಗೆಲ್ಲಿಸುವಲ್ಲಿ ಸೋತ ಮೂವರು ಸಚಿವರು.. ತೀವ್ರ ಮುಖಭಂಗ, ಸ್ಥಾನಕ್ಕೆ ಬಂತಾ ಕುತ್ತು..?

https://newsfirstlive.com/wp-content/uploads/2024/06/SOUMYA.jpg

Load More