ಪತ್ನಿ ಕೈಯಲ್ಲಿ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪತಿರಾಯನಿಗೆ ಧರ್ಮದೇಟು
ಗಂಡ ಹೆಂಡತಿ ಮಧ್ಯೆ ಬಂದ ಆ ಯುವತಿಗೆ ಹಿಗ್ಗಾಮುಗ್ಗ ಥಳಿಸಿದ ಪತ್ನಿ
2 ವರ್ಷ ಚೆನ್ನಾಗಿದ್ದ ಈಗ ನಾನು ಅವನಿಗೆ ಇಷ್ಟ ಇಲ್ಲವಂತೆ ಪತ್ನಿ ಆರೋಪ
ಹೆಂಡತಿ ಏನನಾದ್ರೂ ಸಹಿಸಿಕೊಳ್ತಾಳೆ. ಆದ್ರೆ ತನ್ನ ಸ್ಥಾನವನ್ನ ಇನ್ನೊಬ್ಬ ಮಹಿಳೆ ಕಸಿದುಕೊಳ್ತಾಳೆ ಅಂದ್ರೆ ನಾರಿ ಮಾರಿಯಾಗೋದು ಪಕ್ಕ. ಇಲ್ಲೊಬ್ಬ ಆಸಾಮಿ ಮದುವೆಯಾಗಿದ್ರೂ ಹೆಂಡತಿಯನ್ನ ಬಿಟ್ಟು ಪ್ರಿಯತಮೆ ಜೊತೆ ವಾಸವಿದ್ದ. ಗಂಡನನ್ನ ಪ್ರೇಯಸಿ ಜೊತೆ ರೆಡ್ ಹ್ಯಾಂಡಾಗಿ ಲಾಕ್ ಮಾಡಿದ ಪತ್ನಿ ಧರ್ಮದೇಟು ಕೊಟ್ಟಿದ್ದಾಳೆ. ಫಟ್ ಫಟ್ ಅಂತ ಬಾರಿಸಿ ದೊಡ್ಡ ಹೈಡ್ರಾಮಾವನ್ನೆ ಸೃಷ್ಟಿಸಿದ್ದಾಳೆ.
ಪತ್ನಿ ಕೈಯಲ್ಲಿ ರೆಡ್ಹ್ಯಾಂಡಾಗಿ ಸಿಕ್ಕಿಬಿದ್ದ ಗಂಡ! ಬಿತ್ತು ಧರ್ಮದೇಟು..
ಹೆಂಡತಿ ಗಂಡ ಅಂತಲೂ ನೋಡದೇ ಕಪಾಳಕ್ಕೆ ಹೊಡೆದಿದ್ದಾಳೆ. ಆದ್ರೆ ಈ ಆಸಾಮಿ ತನ್ನ ಪ್ರೇಯಸಿಯನ್ನ ರಕ್ಷಣೆ ಮಾಡೋದಕ್ಕೆ ಯತ್ನಿಸ್ತಿದ್ದಾನೆ. ಅಯ್ಯೋ ಇವಳನ್ನ ಬಿಟ್ಟು ಬಿಡಿ ಅಂತ ಅವರಿಂದ ತಪ್ಪಿಸಿಕೊಳುವ ಯತ್ನ ನಡೆಸಿದ್ದಾನೆ. ಆದ್ರೆ ಹೆಂಡತಿ ರೋಷಾವೇಷದ ಮುಂದೆ ಗಂಡನ ನಾಟಕವೆಲ್ಲ ಥಂಡಾ ಹೊಡೆದಿದೆ. ಧರ್ಮದೇಟು ಮುಂದುವರಿದಿದೆ. ಹೆಣ್ಣು ಗಂಡ ಯಾವ ತಪ್ಪನಾದ್ರೂ ಕ್ಷಮಿಸಿಬಿಡ್ತಾಳೆ. ಆದ್ರೆ ಗಂಡ ತನ್ನ ಸ್ಥಾನವನ್ನು ಇನ್ನೊಂದು ಮಹಿಳೆಗೆ ಕೊಡ್ತಾನೆ ಅಂದ್ರೆ ಆಕೆ ಮಾರಿಯಾಗಿ ಬಿಡ್ತಾಳೆ. ಇಲ್ಲಾಗಿದ್ದೂ ಇದೇ. ತಾಳಿ ಕಟ್ಟಿದ ಗಂಡ ಪರಸ್ತ್ತೀ ಸಹವಾಸ ಮಾಡಿದ್ದ. ಈ ವಿಚಾರ ಗೊತ್ತಾಗಿದೆ ಗಂಡನ ಪ್ರೇಯಸಿ ಮನೆಗೆ ಅಟ್ಯಾಕ್ ಮಾಡಿದ ಪತ್ನಿ ಗಂಡನಿಗೂ, ಜೊತೆಗಿದ್ದ ಪ್ರೇಯಸಿಗೂ ಹಿಗ್ಗಮುಗ್ಗಾ ಬಾರಿಸಿದ್ದಾಳೆ. ಮನೆ ತುಂಬಾ ಅಟ್ಟಾಡಿಸಿ ಮನಸೋ ಇಚ್ಛೆ ಬಾರಿಸಿದ್ದಾಳೆ. ಪತ್ನಿ ಮಾರಿ ಅವತಾರ ಕಂಡು ಗಂಡ ಅಕ್ಷರಶಃ ಪತರುಗುಟ್ಟಿ ಹೋಗಿದ್ದಾನೆ.
ಹೆಂಡತಿಯಿದ್ರೂ ಪರಸ್ತ್ರೀ ಸಹವಾಸ! ಕಿರಿಕ್ ಸಂಸಾರದಲ್ಲಿ ಆಗಿದ್ದೇನು?
ಹೀಗೆ ಗಂಡನ ಮೇಲೆ ಮುಗಿಬಿದ್ದಿರುವ ಪತ್ನಿ ಹೆಸರು ಹರಿತಾ ಅಂತ. ಇನ್ನೂ ಈಕೆ ಗಂಡನ ಹೆಸರು ವಿವೇಕ್ ಅಂತ. ವಿವೇಕ್ ಮತ್ತು ಹರಿತಾಗೆ 2020ರಲ್ಲಿ ಮದುವೆಯಾಗಿತ್ತು. ದುರಂತ ಏನಂದ್ರೆ ಹರಿತಾಳನ್ನ ಈ ವಿವೇಕ್ ಪ್ರೀತಿ ಮಾಡಿಯೇ ಮದುವೆಯಾಗಿದ್ನಂತೆ. ಆದ್ರೆ ಮದುವೆಯಾಗಿ ಇನ್ನೂ ಮೂರು ವರ್ಷ ಕಳೆದಿಲ್ಲ. ಅಷ್ಟರಲ್ಲೇ ವಿವೇಕ್ಗೆ ಪತ್ನಿ ಬೇಡವಾಗಿದ್ದಾಳೆ. ಹೀಗಾಗಿ ಡಿವೋರ್ಸ್ಗೂ ಕೂಡ ವಿವೇಕ್ ಅರ್ಜಿ ಸಲ್ಲಿಸಿದ್ನಾಂತೆ. ಆದ್ರೆ ಹರಿತಾಗೆ ಮಾತ್ರ ಗಂಡನಿಂದ ದೂರವಾಗೋದು ಇಷ್ಟವಿಲ್ಲ. ಒಟ್ಟಿಗೆ ಇರೋಣ ಅಂತೇಳಿ ತಿಳಿ ಹೇಳಿದ್ದಾಳೆ. ಆದ್ರೆ ವಿವೇಕ್ ಪತ್ನಿ ಮಾತು ಕೇಳಿಲ್ಲ. ಇದಾದ ಮೇಲೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ವಿವೇಕ್ ಬೇರೊಬ್ಬರ ಹುಡಗಿಯ ಸಹವಾಸಕ್ಕೆ ಬಿದ್ದು ಆಕೆ ಜೊತೆ ಪ್ರತ್ಯೇಕವಾಗಿ ಇರೋದಕ್ಕೆ ಶುರು ಮಾಡಿದ್ದಾನೆ. ಯಾವಾಗ ಈ ವಿಚಾರ ಹರಿತಾಗೆ ಗೊತ್ತಾಯ್ತೊ ಹರಿತಾ ಗಂಡ ಮತ್ತು ಆತನ ಪ್ರೇಯಸಿ ಒಟ್ಟಿಗೆ ಮನೆಗೆ ಹೋಗಿ ಇಬ್ಬರನ್ನ ರೆಡ್ ಹ್ಯಾಂಡಾಗಿ ಲಾಕ್ ಮಾಡಿದ್ದಾಳೆ. ಗಂಡನನ್ನ ಇನ್ನೊಬ್ಬ ಸ್ತ್ರಿಯೊಂದಿಗೆ ನೋಡಿದ್ದ ತಡ ಹರಿತಾ ಕೋಪದ ಕಟ್ಟೆ ಒಡೆದಿದೆ. ಗಂಡನಿಗೂ ಮತ್ತು ಆಕೆ ಪ್ರೇಯಸಿಗೂ ಧರ್ಮದೇಟು ಬಾರಿಸಿದ್ದಾಳೆ. ಇಲ್ಲಿ ತನಕ ಕೂಡ ಹರಿತಾ ಗಂಡ ವಿವೇಕ ಬದಲಾಗ್ತಾನೆ. ಸರಿ ದಾರಿಗೆ ಬರ್ತಾನೆ, ನೆಟ್ಟಗೆ ಸಂಸಾರ ಮಾಡ್ಕೊಂಡು ಹೋಗ್ತಾನೆ ಅಂತ ಅಂದುಕೊಂಡಿದ್ಲು. ಆದ್ರೆ ವಿವೇಕ ತನ್ನ ಚಾಳಿ ಬಿಟ್ಟಿರಲಿಲ್ಲ. ಹೀಗಾಗಿ ಮನೆಯವರನ್ನೆಲ್ಲ ಕರ್ಕೊಂಡು ಹೋಗಿ ಗಂಡನಿಗೆ ತಕ್ಕ ಶಾಸ್ತಿ ಮಾಡಿದ್ದಾಳೆ. ತನಗೆ ನ್ಯಾಯ ಬೇಕು ಅಂತ ಗಂಡನಿಗೆ ಸರಿಯಾದ ಪಾಠ ಕಲಿಸಿದ್ದಾಳೆ.
ಇದನ್ನೂ ಓದಿ: ಹೆಂಡತಿ ಬಿಟ್ಟು ಪರಸ್ತ್ರೀ ಸಂಗ.. ಗರ್ಲ್ ಫ್ರೆಂಡ್ ಮನೆಯಲ್ಲಿ ತಗ್ಲಾಕೊಂಡ ಗಂಡನಿಗೆ ಹಿಗ್ಗಾಮುಗ್ಗ ಥಳಿತ
ನನಗೆ ಡಿವೋರ್ಸ್ ಬೇಕು. ನನಗೆ ನೀನು ಬೇಡ. ನನಗೆ ನಿನಗೆ ಏನು ಸಂಬಂಧವಿಲ್ಲ ಅಂತ ಹೇಳ್ತಿದ್ದ. ಮದುವೆಯಾಗಿ ಮೂರು ವರ್ಷ ಆಗಿದೆ. ಎರಡು ವರ್ಷ ಚೆನ್ನಾಗಿದ್ದ. ನಮ್ದು ಲವ್ ಮ್ಯಾರೇಜ್. ಆದ್ರೀಗ ನಾನು ಇಷ್ಟ ಇಲ್ಲ ಅಂತ ಹೇಳ್ತಿದ್ದಾನೆ. ಈ ತರಹ ಎಲ್ಲ ಹೇಳಿ ಕಳೆದ ಎರಡು ತಿಂಗಳಿಂದ ಅವರಿಬ್ಬರ ರಿಲೇಷನ್ನಲ್ಲಿದ್ದಾರೆ. ನಾನು ಬದಲಾಗ್ತಾನೆ ಬದಲಾಗ್ತಾನೆ ಅಂತ ಅಂದುಕೊಂಡು ಸುಮ್ನೆ ಇದ್ದೆ. ಇಲ್ಲಿತ ನಕ ಅವನು ಬದಲಾಗಿಲ್ಲ. ಅವರಿಬ್ಬರು ಒಟ್ಟಿಗೆ ಸಂಸಾರ ನಡೆಸ್ತಿದ್ದಾರೆ. ನನಗೆ ನ್ಯಾಯ ಬೇಕು. ಒಂದು ಸ್ಪಾನಲ್ಲಿ ಈ ಹುಡುಗಿ ಪರಿಚಯವಾಗಿದೆ. ಇವಳು ಸ್ಪಾನಲ್ಲಿ ಕೆಲಸ ಮಾಡ್ತಿದ್ಳು. ಇವನು ಸ್ಪಾಗೆ ಹೋದಾಗ ಸ್ನೇಹ ಮಾಡ್ಕೊಂಡಿದ್ದಾನೆ. ಅಲ್ಲಿಂದ ಇಲ್ಲಿತನಕ ನಾನು ಅವನಿಂದ ದೂರ ಇರು. ನಮಗೆ ಮದುವೆಯಾಗಿದೆ. ನಾವಿಬ್ಬರು ಚೆನ್ನಾಗಿದ್ದೇವೆ ನಮಗೆ ತೊಂದರೆ ಕೊಡಬೇಡ ಅಂತ ಹೇಳಿದ್ದೆ. ಆದ್ರೆ ಅವಳು ನನ್ನ ಮಾತು ಕೇಳಿಲ್ಲ.
ವಿವೇಕ್ ಪತ್ನಿ ಹರಿತಾ
ಅಸಲಿಗೆ ಹರಿತಾ ಗಂಡ ವಿವೇಕ್ಗೆ ಈ ಹುಡುಗಿ ಸ್ಪಾ ಒಂದರಲ್ಲಿ ಪರಿಚಯವಾಗಿದ್ಳಂತೆ. ಅಲ್ಲಿಂದ ಇಬ್ಬರ ಮಧ್ಯೆ ಸ್ನೇಹ ಬೆಳೆದು ಆ ಸ್ನೇಹ ಒಟ್ಟಿಗೆ ಸಂಸಾರ ಮಾಡೋ ಮಟ್ಟಿಗೆ ಬಂದು ನಿಂತಿದೆ. ಈ ವಿಚಾರ ಗೊತ್ತಾದ್ಮೇಲು ಹರಿತಾ ಈ ಹುಡುಗಿಗೆ ಕಾಲ್ ಮಾಡಿ ನಮ್ಮ ಸಂಸಾರ ಹಾಳು ಮಾಡಬೇಡ ತನ್ನ ಗಂಡನಿಂದ ದೂರ ಇರುವಂತೆ ಕೇಳಿಕೊಂಡಿದ್ದಾಳೆ. ಆದ್ರೂ ಈ ಹುಡುಗಿ ವಿವೇಕ್ ಸಹವಾಸ ಬಿಟ್ಟಿಲ್ಲ. ಕೊನೆಗೆ ಇವತ್ತು ಇಬ್ಬರು ಹರಿತಾ ಕೈಯಲ್ಲಿ ಸಿಕ್ಕು ಹಣ್ಣುಗಾಯಿ ನೀರುಗಾಯಿ ಆಗಿದ್ದಾರೆ. ಇತ್ತ ವಿವೇಕ್ ಕೂಡ ಹೆಂಡತಿ ವಿರುದ್ಧ ತಿರುಗಿಬಿದ್ದಿದ್ದಾನೆ. ಆಕೆ ಏನ ಮಾಡಿದ್ದಾಳೆ ಎಲ್ಲ ಸಾಕ್ಷಿಗಳು ನನ್ನ ಬಳಿ ಇವೆ. ನಾನು ಉತ್ತರ ಕೊಡ್ತೀನಿ ಅಂತ ಹೇಳಿದ್ದಾನೆ. ಅವಳ ಜೊತೆ ಸಂಬಂಧದಲ್ಲಿರೋದು ನಿಜ ಅವಳನ್ನ ನಾನು ಮದುವೆಯಾಗೋದು ನಿಜ ಅಂತ ಹೇಳಿದ್ದಾನೆ.
ಮೂರು ವರ್ಷ ಆಗಿದೆ ಮದುವೆಯಾಗಿ. ಅವಳು ಏನ್ ಮಾಡಿದ್ದಾಳೆ ಅಂತ ನನಗೆ ಗೊತ್ತು. ನನ್ನ ಬಳಿ ಸಾಕ್ಷಿಗಳಿವೆ ನಾನು ಮಾತಾಡ್ತೀನಿ. ನಾನು ಆ ಹುಡುಗಿ ಜೊತೆ ರಿಲೇಷನ್ನಲ್ಲಿದ್ದೀನಿ. ಅವಳನ್ನ ಮದುವೆ ಕೂಡ ಆಗ್ತೀನಿ.
ವಿವೇಕ್
ಒಟ್ಟಿನಲ್ಲಿ ಈ ಕಿರಿಕ್ ಸಂಸಾರದಲ್ಲಿ ಗಂಡ ಹೆಂಡತಿ ಮಧ್ಯೆ ಏನಾಗಿದೆ ಗೊತ್ತಿಲ್ಲ. ಸದ್ಯ ಗಂಡ ಮಾತ್ರ ಪತ್ನಿ ಕೈಯಲ್ಲಿ ಲಾಕ್ ಆಗಿ ಸರಿಯಾಗಿ ಧರ್ಮದೇಟು ತಿಂದಿದ್ದಾನೆ. ಮುಂದೆ ಪೊಲೀಸರ ತನಿಖೆ ಬಳಿಕ ಈ ಗಲಾಟೆ ಸಂಸಾರದ ಅಸಲಿ ಸತ್ಯ ಏನು ಅನ್ನೋದು ಗೊತ್ತಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ