newsfirstkannada.com

ಮಗು ಅಂದ್ರೆ ಮಾರಾಟದ ವಸ್ತುನಾ.. ಸೋನು ಗೌಡಗೆ ಚಳಿ ಬಿಡಿಸಿದ CWC ಅಧಿಕಾರಿ; ಮಾಡಿದ ತಪ್ಪಿಗೆ ಶಿಕ್ಷೆ ಏನು?

Share :

Published March 22, 2024 at 3:52pm

    ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿದ್ದರು ಬಿಗ್​ಬಾಸ್​​ ಮಾಜಿ ಸ್ಪರ್ಧಿ ಸೋನು ಗೌಡ

    ಬ್ಯಾಡರಹಳ್ಳಿ ಪೊಲೀಸ್​ ಠಾಣೆಯಲ್ಲಿ ಸೋನು ಗೌಡ ಮೇಲೆ ಎಫ್​ಐಆರ್​ ದಾಖಲು

    ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿತ್ತು ಸೋನು ಗೌಡ ವಿಡಿಯೋ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್ ಮಾಜಿ ಸ್ಪರ್ಧಿ ಹಾಗೂ ಸೆಲೆಬ್ರಿಟಿಯಾಗಿರೋ ಸೋನು ಶ್ರೀನಿವಾಸ್ ಗೌಡ ಬಂಧನವಾಗಿದೆ. ಮಗುವನ್ನು ಅನಧಿಕೃತವಾಗಿ ಮನೆಯಲ್ಲಿ ಇಟ್ಟುಕೊಂಡಿದ್ದ ಆರೋಪದ ಅಡಿ ಸೋನು ಗೌಡ ಅವರನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸ್ ಜಂಟಿ ಕಾರ್ಯಚರಣೆ ವೇಳೆ ಬಂಧನವಾಗಿದೆ.

ಇದನ್ನು ಓದಿ: ಇಂಗ್ಲಿಷ್ ಮೀಡಿಯಂಗೆ ಸೇರಿಸುತ್ತೇನೆ ಅಂತ ಕರೆ ತಂದ ಸೋನುಗೌಡ; ವಿಚಾರಣೆಯಲ್ಲಿ ಮಗು ಕಣ್ಣೀರು

ಇತ್ತೀಚಿಗಷ್ಟೇ ಸೋನು ಶ್ರೀನಿವಾಸ್ ಗೌಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಗು ದತ್ತು ಪಡೆದಿರುವ ಬಗ್ಗೆ ಟ್ರೋಲ್ ಆಗಿದ್ದರು. ಆ ವೇಳೆ ಖುದ್ದು ಸೋನು ಗೌಡ ಅವರೇ ಆ ಮಗುವಿನ ಜತೆ ವಿಡಿಯೋ ಕೂಡ ಮಾಡಿದ್ದರು. ಸೋನು ಗೌಡ ಸಾಮಾಜಿಕ ಜಾಲತಾಣದಲ್ಲಿ ಈ ಮಗುವಿನ ಬಗ್ಗೆ ಪರಿಚಯ ಸಹ ಮಾಡಿದ್ದರು. ಇದೀಗ ದತ್ತು ಪಡೆಯುವ ಯಾವುದೇ ನಿಯಮವನ್ನು ಪಾಲಿಸದೇ ಇರುವ ಕಾರಣಕ್ಕಾಗಿ ಮಕ್ಕಳ ಹಕ್ಕು ಕಸಿದಿರುವ ಆರೋಪ ಮೇಲೆ ಅವರನ್ನು ಬಂಧಿಸಲಾಗಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತಾಡಿದ ಮಕ್ಕಳ ರಕ್ಷಣಾ ನಿರ್ದೇಶನಾಲಯದ ಕಾನೂನು ಪರಿವೀಕ್ಷಣಾಧಿಕಾರಿ ಗೀತಾ ಅವರು, ಸೋನು ಶ್ರೀನಿವಾಸ ಗೌಡ ಒಂದು ಮಗುವನ್ನು ದತ್ತು ಪಡೆದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದರು. ಆದರೆ ಮಗುವನ್ನು ಅಕ್ರಮವಾಗಿ ದತ್ತು ಪಡೆದಿರುವ ಎಂಬ ಆರೋಪ ಬಂದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ. ನಿಯಮಗಳ ಪ್ರಕಾರ ಮಗುವನ್ನು ದತ್ತು ಪಡೆಯುವಾಗ ಅರ್ಜಿ ಸಲ್ಲಿಸಬೇಕು. ಆದರೆ ಸೋನುಗೌಡ ಅರ್ಜಿ ಸಲ್ಲಿಸಿರಲಿಲ್ಲ. ಮಗುವನ್ನು ಹೊರಗಡೆ ತೋರಿಸುವಂತಿಲ್ಲ ಮತ್ತು ಕುಟುಂಬದವರ ಮಾಹಿತಿಯನ್ನು ಬಹಿರಂಗಪಡಿಸುವಂತಿಲ್ಲ. ಆದರೆ ಲೈವ್‌ ಮಾಡುವ ಮೂಲಕ ಈ ವಿಚಾರವನ್ನು ಬಹಿರಂಗಪಡಿಸಲಾಗಿದೆ.

ಹಿಂದೂ ದತ್ತು ಮತ್ತು ನಿರ್ವಹಣೆ ಕಾಯಿದೆ 1956ರ ಪ್ರಕಾರ ದತ್ತು ಪಡೆಯುವ ಪ್ರಕ್ರಿಯೆ ಕುರಿತ ಸಂಪೂರ್ಣ ಮಾಹಿತಿಯನ್ನು ನೀಡಬೇಕಾಗುತ್ತದೆ. ಮಕ್ಕಳ ರಕ್ಷಣಾ ಘಟಕ, ರಾಜ್ಯ ದತ್ತು ಪ್ರಾಧಿಕಾರ, ಆಕೆ ನೆಲೆಸಿರುವ ಅರ್ಜಿ ವಿಳಾಸ ಎಲ್ಲಾ ಮಾಹಿತಿಗಳನ್ನು ಪಡೆದು ಎಲ್ಲಾ ನಿಯಮಗಳನ್ನು ಪಾಲಿಸಿದ ಬಳಿಕ ಮಕ್ಕಳ ಕಲ್ಯಾಣ ಸಮಿತಿಯ ಸಮ್ಮುಖದಲ್ಲಿ ಮಕ್ಕಳನ್ನು ದತ್ತು ಪಡೆಯಬೇಕು. ಬಾಲ ನ್ಯಾಯ ಕಾಯಿದೆ 2000 ಕಲಂ 29ರ ಪ್ರಕಾರ ಪೋಷಕರು ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿ ಸಮಿತಿ ಆದೇಶದ ಪ್ರಕಾರವೇ ದತ್ತು ನೀಡಬೇಕು ಎಂದು ಹೇಳಿದ್ದಾರೆ. ಕಾನೂನು ಪ್ರಕಾರ ದತ್ತು ಪಡೆಯದೇ ಮಗುವನ್ನು ಬಳಸಿಕೊಂಡಿದ್ದಕ್ಕೆ ಶಿಕ್ಷೆಗೂ ಗುರಿಯಾಗುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಗು ಅಂದ್ರೆ ಮಾರಾಟದ ವಸ್ತುನಾ.. ಸೋನು ಗೌಡಗೆ ಚಳಿ ಬಿಡಿಸಿದ CWC ಅಧಿಕಾರಿ; ಮಾಡಿದ ತಪ್ಪಿಗೆ ಶಿಕ್ಷೆ ಏನು?

https://newsfirstlive.com/wp-content/uploads/2024/03/sonu-gowda-4.jpg

Load More