newsfirstkannada.com

ಬೆಂಗಳೂರಲ್ಲಿ ಮತ್ತೆ ಚಿರತೆ ​ಹೆಜ್ಜೆ ಗುರುತು.. ಬೆಚ್ಚಿ ಬಿದ್ದ ಲೇಔಟ್‌ ನಿವಾಸಿಗಳು

Share :

Published April 1, 2024 at 3:16pm

Update April 1, 2024 at 3:17pm

    ಎಸ್ಆರ್​ಆರ್ ಲೇಔಟ್​ನಲ್ಲಿ ಪತ್ತೆಯಾಯ್ತು ಚಿರತೆ ಹೆಜ್ಜೆಯ ಗುರುತು

    ಲೇಔಟ್​ನ ಸುತ್ತಮುತ್ತಲಿನ ಕಡೆ ಚಿರತೆ ಓಡಾಟ ನಡೆಸಿದ ಬಗ್ಗೆ ಶಂಕೆ

    ಚಿರತೆ ಯಾವ ಕಡೆ ಹೋಗಿದೆ ಅಂತ ಅರಣ್ಯ ಅಧಿಕಾರಿಗಳಿಂದ ಶೋಧ

ಬೆಂಗಳೂರು: ಚಿರತೆ ಹೋಯ್ತು ಅಂತ ನಿಟ್ಟುಸಿರು ಬಿಟ್ಟಿದ್ದ ಸಿಲಿಕಾನ್​ ಸಿಟಿ ಜನರಿಗೆ ಮತ್ತೆ ಚಿರತೆ ಹಾವಳಿ ಎದುರಾಗಿದೆ. ಎಸ್ಆರ್​ಆರ್​​ ಲೇಔಟ್​ನಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದೆ. ಹೀಗಾಗಿ ಆನೇಕಲ್​​ನ ನಿವಾಸಿಗಳಿಗೆ ಮತ್ತೆ ಟೆನ್ಷನ್ ಶುರುವಾಗಿದೆ.

ಇದನ್ನೂ ಓದಿ: ತಲೆಗೆ ದುಪ್ಪಟ ಕಟ್ಟಿ ಮೊಬೈಲ್​​ನಲ್ಲಿ ಟಾಕಿಂಗ್ ಟ್ರಾವೆಲ್; ಬೆಂಗಳೂರು ಪೊಲೀಸರಿಂದ ಮಹಿಳೆಗೆ 5000 ರೂ ದಂಡ..!

ಆನೇಕಲ್ ಪಟ್ಟಣದ ಚಂದಾಪುರ ಮುಖ್ಯ ರಸ್ತೆಯ ಎಸ್ಆರ್​ಆರ್​ ಲೇಔಟ್​ನಲ್ಲಿ ನಾಯಿ ಬೇಟೆಗೆ ಚಿರತೆ ಬಂದಿದ್ದ ಹೆಜ್ಜೆ ಗುರುತು ಪತ್ತೆಯಾಗಿದೆ. ಇದೇ ಲೇಔಟ್​ನ ಸುತ್ತಮುತ್ತಲಿನ ಕಡೆ ಚಿರತೆ ಓಡಾಟ ನಡೆಸಿದೆ ಎಂದು ಮತ್ತೆ ಹಚ್ಚಲಾಗಿದೆ. ಹೀಗಾಗಿ ಅಲ್ಲಿನ ಜನರಲ್ಲಿ ಆತಂಕ ಹೆಚ್ಚಾಗಿದೆ. ಕೂಡಲೇ ಅಲ್ಲಿನ ನಿವಾಸಿಗಳು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಹೆಜ್ಜೆ ಗುರುತುಗಳನ್ನ ಪರಿಶೀಲನೆ ನಡೆಸುತ್ತಿದ್ದಾರೆ. ಚಿರತೆ ಯಾವ ಕಡೆಗೆ ತೆರಳಿದೆ ಎನ್ನುವ ಬಗ್ಗೆ ಕಾರ್ಯಾಚರಣೆ ಮುಂದುವರೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಲ್ಲಿ ಮತ್ತೆ ಚಿರತೆ ​ಹೆಜ್ಜೆ ಗುರುತು.. ಬೆಚ್ಚಿ ಬಿದ್ದ ಲೇಔಟ್‌ ನಿವಾಸಿಗಳು

https://newsfirstlive.com/wp-content/uploads/2024/04/srr-chita.jpg

Load More