ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಚಿರತೆ ಪ್ರತ್ಯಕ್ಷ..! ಹೌಹಾರಿದ ಜನ, ಮನೆಯಿಂದ ಆಚೆ ಬರಲು ಭಯ..

author-image
Veena Gangani
Updated On
ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಚಿರತೆ ಪ್ರತ್ಯಕ್ಷ..! ಹೌಹಾರಿದ ಜನ, ಮನೆಯಿಂದ ಆಚೆ ಬರಲು ಭಯ..
Advertisment
  • ಅರ್ಬೋರ್ಸ್ ಬೈ ದಿ ಲೇಕ್ ಲೇಔಟ್​ನಲ್ಲಿ ಕಾಣಿಸಿಕೊಂಡ ಚಿರತೆ
  • ನಸುಕಿನ ಜಾವ ಮೂರು ಗಂಟೆಯ ಸುಮಾರಿಗೆ ಚಿರತೆ ಓಡಾಟ
  • ಲೇಔಟ್​ನ ಸಿಸಿಟಿವಿ ಕ್ಯಾಮೆರಾದಲ್ಲಿ ಚಿರತೆ ಓಡಾಟದ ದೃಶ್ಯ ಸೆರೆ

ಬೆಂಗಳೂರು: ಜಿಗಣಿ ಸಮೀಪದ ಕ್ಯಾಲಸನಹಳ್ಳಿಯಲ್ಲಿ ಚಿರತೆ ಕಾಣಿಸಿಕೊಂಡಿದೆ. ಚಿರತೆಯು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಓಡಾಡಿರೋ ದೃಶ್ಯ ಸಿಸಿಟಿವಿಯಲ್ಲಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸುದ್ದಿ ತಿಳಿದು ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಇದನ್ನೂ ಓದಿ: ಐವರು ಟ್ರೈನಿ ಪೊಲೀಸ್​ ಸಬ್​​ ಇನ್​ಸ್ಪೆಕ್ಟರ್​​ಗಳು ಅರೆಸ್ಟ್​​; ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರಾ!

publive-image

ಬೆಂಗಳೂರು ಹೊರವಲಯ ಜಿಗಣಿ ಸಮೀಪದ ಕ್ಯಾಲಸನಹಳ್ಳಿಯ ಅರ್ಬೋರ್ಸ್ ಬೈ ದಿ ಲೇಕ್ ಲೇಔಟ್​ನಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ನಸುಕಿನ ಜಾವ ಮೂರು ಗಂಟೆಯಲ್ಲಿ ಚಿರತೆ ಓಡಾಡಿದೆ. ನಾಯಿಗಳು ಬೊಗಳೋ ಶಬ್ಧ ಕೇಳಿ ಸಿಸಿಟಿವಿ ಪರಿಶೀಲನೆ ನಡೆಸಿದ್ದಾಗ ಈ ದೃಶ್ಯ ಬೆಳಕಿಗೆ ಬಂದಿದೆ. ಕೂಡಲೇ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ದೌಡಾಯಿಸಿ ಚಿರತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಚಿರತೆ ಭಯದಲ್ಲಿರುವ ನಿವಾಸಿಗಳು ಆತಂಕ ಪಡುವ ಸ್ಥಿತಿ ನಿರ್ಮಾಣವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment