newsfirstkannada.com

’ಬಡ ಹೆಣ್ಣು ಮಕ್ಕಳನ್ನು ಪೈಲಟ್ ಮಾಡೋಣ’- ಬೆಂಗಳೂರಲ್ಲಿ ಬೋಯಿಂಗ್ ಸೆಂಟರ್ ಉದ್ಘಾಟಿಸಿದ ಪ್ರಧಾನಿ ಮೋದಿ

Share :

Published January 19, 2024 at 4:32pm

    ಬೆಂಗಳೂರು ಬೋಯಿಂಗ್​ ಸಂಸ್ಥೆಯ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗಿ

    ಸಿಲಿಕಾನ್​ ಸಿಟಿ ಬೆಂಗಳೂರನ್ನು ಹಾಡಿ ಹೊಗಳಿದ ಪ್ರಧಾನಿ ಮೋದಿ

    ಬೆಂಗಳೂರಿನಿಂದ ತಮಿಳುನಾಡಿಗೆ ಪ್ರಯಾಣ ಬೆಳೆಸಿದ PM ಮೋದಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ದೇವನಹಳ್ಳಿಯ ಏರೋಸ್ಪೇಸ್ ಪಾರ್ಕ್‌ನಲ್ಲಿ ನಿರ್ಮಾಣವಾಗಿರುವ ಅತ್ಯಾಧುನಿಕ ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೇಂದ್ರ ಕ್ಯಾಂಪಸ್‌ ಅನ್ನ ಉದ್ಘಾಟಿಸಿದ್ದಾರೆ.

ಇದನ್ನು ಓದಿ: ಮೋದಿ ಇಂದು ಬೆಂಗಳೂರಿಗೆ.. ದೇವನಹಳ್ಳಿಗೆ ಬರಲಿರುವ ಪ್ರಧಾನಿ.. ವಾಹನ ಸವಾರರಿಗೆ ಮಾರ್ಗ ಬದಲಾವಣೆ ಹೀಗಿದೆ

ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ವಿವಿಧ ಪುಣ್ಯಕ್ಷೇತ್ರಗಳ ದರ್ಶನ ಮಾಡ್ತಿದ್ದಾರೆ. ಜೊತೆಗೆ ಕೆಲ ಅಭಿವೃದ್ಧಿ ಕಾರ್ಯಗಳಿಗೂ ನಮೋ ಚಾಲನೆ ಕೊಟ್ಟಿದ್ದಾರೆ. ಅದರ ಭಾಗವಾಗಿ ಇವತ್ತು ಪ್ರಧಾನಿ ಮೋದಿ ರಾಜ್ಯಕ್ಕೆ ಬಂದಿದ್ದಾರೆ. ಪ್ರಧಾನಿ ಮೋದಿ ಅವರು ದೇವನಹಳ್ಳಿಯ ಏರೋಸ್ಪೇಸ್ ಪಾರ್ಕ್​ಗೆ ಭೇಟಿ ಕೊಟ್ಟು ಬೋಯಿಂಗ್ ಸೆಂಟರ್‌ನ ಮಾಹಿತಿ ಪಡೆದಿದ್ದಾರೆ.

ಇನ್ನು, ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೇಂದ್ರ ಕ್ಯಾಂಪಸ್‍ನ್ನ ಉದ್ಘಾಟನೆ ಮಾಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತಾಡಿದ್ದಾರೆ. ಇಂತಹ ಅದ್ಭುತ ಸಂಸ್ಥೆ ಬೆಂಗಳೂರಿನಲ್ಲಿ ನಿರ್ಮಾಣ ಆಗಿರುವುದು‌ ಸಂತಸದ ವಿಚಾರ. ಹೆಣ್ಣು ಮಕ್ಕಳೇ ಇಂದು‌ ಸ್ವಾತಂತ್ರ್ಯವಾಗಿ ವಿಮಾನ ಚಾಲನೆಯಲ್ಲಿದ್ದಾರೆ. ಶೇ.15% ರಷ್ಟು ಮಹಿಳೆಯರು ಸ್ವಾತಂತ್ರ್ಯವಾಗಿ‌ ಈ ಕ್ಷೇತ್ರದಲ್ಲಿದ್ದಾರೆ. ಇಂದು ಬೋಯಿಂಗ್ ಸುಕನ್ಯ ಕಾರ್ಯಕ್ರಮ ಆರಂಭವಾಗಿದೆ.

ನಮ್ಮ ಹೆಣ್ಣು ಮಕ್ಕಳಿಗಾಗಿಯೇ ಈ ಯೋಜನೆ. ಬಡವರ ಮನೆಯ ಹೆಣ್ಣು ಮಕ್ಕಳನ್ನು ಪೈಲಟ್ ಮಾಡೋಣ. ಕೆಲ ತಿಂಗಳ ಹಿಂದೆ ಚಂದ್ರಯಾನಕ್ಕೆ ಉಪಗ್ರಹ ಹೋಗಿದೆ. ಈವರೆಗೂ ಯಾರೂ ತಲುಪದ ಸ್ಥಳ ನಾವು ತಲುಪಿದ್ದೇವೆ. ಭಾರತ ವಿಶ್ವದ ಮೂರ‌ನೇ ಅತಿ‌ ದೇಶ. ದೇಶೀಯ ಪ್ರಯಾಣಿಕನಲ್ಲಿ ಮೂರನೇ ಸ್ಥಾನ‌ ಪಡೆದುಕೊಂಡಿದೆ. ಭಾರತದಲ್ಲಿ 2014 ರಲ್ಲಿ 70 ವಿಮಾನ ನಿಲ್ದಾಣಗಳಿತ್ತು. ಈಗ 150 ಕ್ಕೆ ಏರಿಕೆಯಾಗಿದೆ. ನಾವು ವಿಮಾನಯಾನದಲ್ಲಿ ಅಭಿವೃದ್ಧಿ ಆಗುತ್ತಿದ್ದೇವೆ. ಭಾರತದಲ್ಲಿ ಒಂದು ಸ್ಥಿರವಾದ ಸರ್ಕಾರ ಇದೆ. ಭಾರತದಲ್ಲಿ ಮೇಕ್ ಇನ್ ಇಂಡಿಯಾ ಯೋಜನೆ ಇದೆ. ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ. ನನಗೆ ಸಂಸ್ಥೆ ಬಗ್ಗೆ ಹೇಳುವಾಗ ಭಾವನೆಗಳು ಕೂಡ ವ್ಯಕ್ತವಾಗಿದೆ ಹೀಗಾಗಿ, ನಿಮಗೆ ಒಳ್ಳೆಯದಾಗಲಿ ಎಂದು ಹೇಳಿದ್ದಾರೆ.

ಬೋಯಿಂಗ್ ಸೆಂಟರ್ ವಿಶೇಷತೆ ಏನು? 

ಇದು ಅಮೆರಿಕ ಹೊರಗೆ ಬೋಯಿಂಗ್‍ನ ಅತಿದೊಡ್ಡ ಹೂಡಿಕೆಯಾಗಿದೆ. ಅಮೆರಿಕ ಬಿಟ್ಟರೆ ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಬೋಯಿಂಗ್ ಸೆಂಟರ್ ನಿರ್ಮಾಣಗೊಂಡಿದೆ. ಮಾತ್ರ  1,600 ಕೋಟಿ ರೂ.ಗಳ ಹೂಡಿಕೆಯೊಂದಿಗೆ ನಿರ್ಮಿಸಲಾದ 43 ಎಕರೆ ಕ್ಯಾಂಪಸ್ ನಿರ್ಮಾಣ ಆಗಿದೆ. ದೇಶದಲ್ಲಿ ಬೆಳೆಯುತ್ತಿರುವ ವಾಯುಯಾನ ಕ್ಷೇತ್ರಕ್ಕೆ ಹೆಣ್ಣು ಮಕ್ಕಳ ಪ್ರವೇಶವನ್ನ ಬೆಂಬಲಿಸುವ ಗುರಿಯನ್ನ ಈ ಯೋಜನೆ ಹೊಂದಿದೆ. ಹೆಣ್ಣುಮಕ್ಕಳಿಗೆ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತ ಕ್ಷೇತ್ರಗಳಲ್ಲಿ ಕೌಶಲ್ಯಗಳನ್ನು ಕಲಿಯಲು ಮತ್ತು ವಾಯುಯಾನ ವಲಯದಲ್ಲಿ ಉದ್ಯೋಗಗಳಿಗೆ ತರಬೇತಿ ನೀಡಲು ಅವಕಾಶ ಒದಗಿಸಲಿದೆ.

ಇನ್ನು ಮೋದಿ ಅವರು ಬೆಂಗಳೂರಿಗೆ ಆಗಮಿಸಿದ ಸಮಯದಲ್ಲಿ ಸಚಿವ ಕೆ.ಜೆ. ಜಾರ್ಜ್, ಮುಖ್ಯ ಕಾರ್ಯದರ್ಶಿಗಳಾದ ಡಾ. ರಜನೀಶ್ ಗೋಯಲ್, ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಅಲೋಕ್ ಮೋಹನ್, ಬಿ. ದಯಾನಂದ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಲೋಕಸಭಾ‌ ಸದಸ್ಯ ಪಿ.ಸಿ. ಮೋಹನ್, ಬಿಜೆಪಿ ರಾಜ್ಯಧ್ಯಕ್ಷರಾದ ಬಿ. ವೈ. ವಿಜಯೇಂದ್ರ ಹಾಗೂ ಶಾಸಕರು, ಸಿಎಂ ಸಿದ್ದರಾಮಯ್ಯನವರು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

’ಬಡ ಹೆಣ್ಣು ಮಕ್ಕಳನ್ನು ಪೈಲಟ್ ಮಾಡೋಣ’- ಬೆಂಗಳೂರಲ್ಲಿ ಬೋಯಿಂಗ್ ಸೆಂಟರ್ ಉದ್ಘಾಟಿಸಿದ ಪ್ರಧಾನಿ ಮೋದಿ

https://newsfirstlive.com/wp-content/uploads/2024/01/pm-modi-74.jpg

Load More