ವಿರಾಮದ ಬಳಿಕ ಮತ್ತೆ ಕಮ್ಬ್ಯಾಕ್ ಮಾಡಲಿರುವ ಎಲ್ಜಿ
ಸ್ಮಾರ್ಟ್ಫೋನ್ನತ್ತ ಮತ್ತೆ ಚಿತ್ತ ಹರಿಸಿದ ದಕ್ಷಿಣ ಕೊರಿಯಾದ ಕಂಪನಿ
ಸ್ಯಾಮ್ಸಂಗ್ ಮುಂದೆ ತೊಡೆತಟ್ಟಿ ನಿಲ್ಲುತ್ತಾ ಲಕ್ಕಿ ಗೋಲ್ಡ್ಸ್ಟಾರ್ ಕಂಪನಿ
ಜನಪ್ರಿಯ ಲಕ್ಕಿ ಗೋಲ್ಡ್ಸ್ಟಾರ್(LG) ಕಂಪನಿ ಬಗ್ಗೆ ಬಹುತೇಕರಿಗೆ ತಿಳಿದಿದೆ. ಇದೀಗ ದಕ್ಷಿಣ ಕೊರಿಯಾ ಮೂಲದ ಈ ಕಂಪನಿ ವಿರಾಮದ ಬಳಿಕ ಮತ್ತೆ ಸ್ಮಾರ್ಟ್ಫೋನ್ ಉತ್ಪಾದಿಸಲು ಮುಂದಾಗಿದೆ. ಆ ಮೂಲಕ ಗ್ರಾಹಕರಿಗೆ ಹೊಸ ಸುದ್ದಿಯನ್ನು ತಂದಿದೆ.
ಎಲ್ಜಿ ಕಂಪನಿ ರೋಲ್ ಮಾಡಬಹುದಾದ ಸ್ಮಾರ್ಟ್ಫೋನ್ ತರಲು ಮುಂದಾಗಿದೆ. ಅದಕ್ಕಾಗಿ ಪೇಟೆಂಟ್ಗೆ ಅರ್ಜಿ ಸಲ್ಲಿಸಿದೆ. ಆ ಮೂಲಕ 2021ರ ಎಪ್ರಿಲ್ನಲ್ಲಿ ನಿರ್ಗಮಿಸಿದ ಕ್ಷೇತ್ರವನ್ನು ಮರು ಪ್ರವೇಶಿಸುವ ಉದ್ದೇಶವನ್ನು ಹೊಂದಿದೆ.
ಹಿಂದೊಮ್ಮೆ ಎಲ್ಜಿ ಜಾಗತಿಕವಾಗಿ ಪ್ರಮುಖ ಮೊಬೈಲ್ ತಯಾರಕರಲ್ಲಿ ಒಂದಾಗಿ ಗುರುತಿಸಲ್ಪಟ್ಟಿದೆ. ನವೀನ ವಿನ್ಯಾಸ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಂಡು ಪರಿಚಯಿಸಿತ್ತು. ಆದರೆ ಬದಲಾಗುತ್ತಿರುವ ಮಾರುಕಟ್ಟೆಯಲ್ಲಿ ಉಳಿದ ಸ್ಮಾರ್ಟ್ಫೋನ್ ಕಂಪನಿಗಳ ವಿರುದ್ಧ ಸ್ಪರ್ಧಿಸಲಾಗದೆ ಮೊಬೈಲ್ ವಿಭಾಗವನ್ನು ಮುಚ್ಚಿತ್ತು.
ಇದನ್ನೂ ಓದಿ: ದೀಪಾವಳಿ ಸ್ಪೆಷಲ್; ಅತೀ ಕಡಿಮೆ ಬಜೆಟ್ನಲ್ಲಿ ಲಕ್ಷ ಲಕ್ಷ ದುಡಿಯೋ ವ್ಯಾಪಾರಗಳು ಇವೇ ನೋಡಿ!
ಎಲ್ಜಿ ಕಂಪನಿ ಗೃಹಉಪಯೋಗಿ ಎಲೆಕ್ಟ್ರಿಕ್ ಸಾಧನಗಳನ್ನು ಉತ್ಪಾದಿಸುತ್ತಾ ಬಂದಿದೆ. ಅದರ ಜೊತೆಗೆ ಸ್ಮಾರ್ಟ್ಫೋನ್ ಡಿಸ್ಪ್ಲೇ ಮತ್ತು ಕ್ಯಾಮೆರಾ ಸಂವೇದಕವನ್ನು ಹಿಡಿದು ಸ್ಮಾರ್ಟ್ಟಿವಿಗಳವರೆಗೆ ಎಲ್ಲವನ್ನೂ ಉತ್ಪಾದಿಸುತ್ತದೆ. ಇದೀಗ ರೋಲ್ ಮಾಡಬಹುದಾದ ಸ್ಮಾರ್ಟ್ಫೋನ್ ತಯಾರಿಸಲು ಪೇಟೆಂಟ್ಗೆ ಅರ್ಜಿ ಸಲ್ಲಿಸಿದೆ.
ಇದನ್ನೂ ಓದಿ: WhatsApp: 80 ಲಕ್ಷಕ್ಕೂ ಅಧಿಕ ಭಾರತೀಯರ ಖಾತೆಗಳು ಬ್ಯಾನ್! ಇಷ್ಟಕ್ಕೆಲ್ಲಾ ಕಾರಣ ಏನು ಗೊತ್ತಾ?
ಈಗಾಗಲೇ ಸ್ಯಾಮ್ಸಂಗ್ ಮಡಚಬಹುದಾದ ಸ್ಮಾರ್ಟ್ಫೋನನ್ನು ಪರಿಚಯಿಸಿದೆ. ಒಂದು ವೇಳೆ ಎಲ್ಜಿ ಇಂತಹದ್ದೇ ಸ್ಮಾರ್ಟ್ಫೋನ್ ಪರಿಚಯಿಸಿದರೆ ಸ್ಯಾಮ್ಸಂಗ್ಗೆ ಪ್ರತಿಸ್ಪರ್ಧಿಯಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ