/newsfirstlive-kannada/media/post_attachments/wp-content/uploads/2024/08/disha-madan1.jpg)
ಕನ್ನಡ ಕಿರುತೆರೆಯಲ್ಲೇ ಲಕ್ಷ್ಮೀ ನಿವಾಸ ಧಾರಾವಾಹಿ ವಿಭಿನ್ನವಾಗಿ ಮೂಡಿ ಬರ್ತಿದೆ. ಪ್ರತಿ ಪಾತ್ರಕ್ಕೂ ಅದರದ್ದೇ ಆದ ತೂಕ, ವ್ಯಕ್ತಿತ್ವ ಇದ್ದು, ನಿರ್ದೇಶಕರು ಅದನ್ನು ಅಚ್ಚುಕಟ್ಟಾಗಿ ಪ್ರೆಸೆಂಟ್ ಮಾಡುತ್ತಿದ್ದಾರೆ. ಹೀಗಾಗಿ ಅಪಾರ ವೀಕ್ಷಕರನ್ನ ಸಂಪಾದಿಸಿದೆ ಸೀರಿಯಲ್. ಲಕ್ಷ್ಮಿ ನಿವಾಸ ಸೀರಿಯಲ್‌ನಲ್ಲಿ ಭಾವನಾ ಪಾತ್ರದ ಮೂಲಕ ಮೆಚ್ಚುಗೆ ಗಳಿಸಿಕೊಂಡಿದ್ದಾರೆ ನಟಿ ದಿಶಾ ಮದನ್.
ಇದನ್ನೂ ಓದಿ: ಒಂದು ವರ್ಷದಿಂದಲೇ ಡಿವೋರ್ಸ್ ಪ್ಲಾನ್.. ಚಂದನ್ ನಂಗೆ ಬೇಡ ಅಂತ ನಿವೇದಿತಾ ಡಿಸೈಡ್ ಮಾಡಿದ್ದೇಕೆ?
ಈ ಸೀರಿಯಲ್‌ನಲ್ಲಿ ನಟಿ ದಿಶಾ ಮದನ್ ಅವರು ಚೆಂದವಾಗಿ ಸೀರೆಯನ್ನು ಉಟ್ಟುಗೊಂಡು ಆಫೀಸ್ ಹೋಗುತ್ತಾರೆ. ಇದೇ ನಟಿ ದಿಶಾ ಮದನ್ ಅವರು ಕಲರ್ಸ್ ವಾಹಿನಿಯ ಕುಲವಧು ಧಾರಾವಾಹಿ ವಚನ ಪಾತ್ರದ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದಿಕೊಂಡಿದ್ದರು. ಬಹು ವರ್ಷಗಳ ನಂತರ ಲಕ್ಷ್ಮೀ ಸೀರಿಯಲ್ ಮೂಲಕ ಕಿರುತೆರೆಗೆ ಕಮ್ಬ್ಯಾಕ್ ಮಾಡಿದ್ದಾರೆ. ಭಾವನಾ ಪಾತ್ರದ ಮೂಲಕ ಅದರಲ್ಲೂ ಸಿದ್ದೇಗೌಡ ಜೋಡಿಯಾಗಿ ಸಖತ್ ಮಿಂಚುತ್ತಿದ್ದಾರೆ.
ತೆರೆ ಮೇಲೆ ಹೇಗೆ ಅಂದವಾಗಿ ಚೂಡಿದಾರ್, ಸೀರೆಯುಟ್ಟು ಜಡೆಗೆ ಹೂವನ್ನು ಮುಡಿದುಕೊಂಡು ದೇವಸ್ಥಾನಕ್ಕೆ ಹೋಗುವ ಇವರು, ತೆರೆ ಹಿಂದೆ ಕೂಡ ಅಷ್ಟೇ ಮಾಡರ್ನ್ ಹುಡುಗಿ. ಇದೇ ಭಾವನಾ ರಿಯಲ್ ಲೈಫ್‌ನಲ್ಲಿ ಮಾಡರ್ನ್ ಹುಡುಗಿ. ದಿಶಾ ಮದನ್ ಅವರು 2017ರಲ್ಲಿ ಶಶಾಂಕ್ ಗೋಪಾಲ್ ವಾಸುಕಿ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಈ ದಂಪತಿಗೆ ವಿಯಾನ್ ಮತ್ತು ಅವೀರಾ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಮದುವೆಯ ಬಳಿಕ ಕೊಂಚ ಬ್ರೇಕ್ ತೆಗೆದುಕೊಂಡಿದ್ದ ನಟಿ ಕಮ್ಬ್ಯಾಕ್ ಮಾಡುವ ಮೂಲಕ ಸಾಕಷ್ಟು ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ. ಸಾಕಷ್ಟು ಜನರು ದಿಶಾ ಮದನ್ ಅವರ ಮಾಡರ್ನ್ ಲುಕ್‌ನ ಫಿದಾ ಆಗಿದ್ದಾರೆ. ಜೊತೆಗೆ ಡ್ಯಾನ್ಸರ್ ಕೂಡ ಆಗಿರೋ ಇವ್ರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಜೊತೆಗೆ ನಟಿ ದಿಶಾ ಅವರು ಹಸಿರು ಬಣ್ಣ ಸಿಂಗಲ್ ಟಾಪ್ನಲ್ಲಿ ಕಾಣಿಸಿಕೊಂಡಿದ್ದಾರು. ಆಗ ಅಭಿಮಾನಿಯೊಬ್ಬ ಅವರನ್ನು ಮೆಡಿಮಿಕ್ಸ್ ಮಮ್ಮಿ ಅಂತ ಕಾಮೆಂಟ್ ಹಾಕಿದ್ದ.
ಇದನ್ನೂ ಓದಿ: ಜಸ್ಟ್ ₹800 ಪೆನ್ಷನ್.. ಕಲ್ಯಾಣ ಕರ್ನಾಟಕಕ್ಕೆ ಭಗೀರಥನಾದ ಡ್ಯಾಂ ತಜ್ಞ ಕನ್ನಯ್ಯ; ಇವ್ರು ಇಷ್ಟೊಂದು ಸಿಂಪಲ್ಲಾ!
ನಟಿ ದಿಶಾ ಅವರು ಇನ್ಸ್ಟಾಗ್ರಾಮ್ ಖಾತೆಯಲ್ಲಿ 9 ಲಕ್ಷ 33 ಸಾವಿರ ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ಸುಮಾರು ವರ್ಷಗಳ ನಂತರ ಕನ್ನಡ ಕಿರುತೆರೆ ಮತ್ತೆ ಕಾಲಿಟ್ಟು ಕಮಾಲ್ ಮಾಡುತ್ತಿದ್ದಾರೆ. ಲಕ್ಷ್ಮಿ ನಿವಾಸ ಸೀರಿಯಲ್‌ನಲ್ಲಿ ನಟಿ ದೊಶಾ ಅವರು ಸಾಕಷ್ಟು ಕಾಟನ್ ಸೀರೆಗಳನ್ನು ಹಾಕಿಕೊಳ್ಳುತ್ತಾರೆ. ಕಾಟನ್ ಸೀರೆಯಲ್ಲಿ ನಟಿಯನ್ನು ನೋಡಿದ ಮನಸೋತಿದ್ದಾರೆ. ಮದುವೆ ಸೆಟ್ ಆಗದ ಹೆಣ್ಣು ಮಕ್ಕಳ ಮನಸ್ಥಿತಿ ಹೇಗಿರುತ್ತದೆ ಹಾಗೂ ಯಾರಿಗೂ ಗೊತ್ತಿಲ್ಲದೆ ಕುತ್ತಿಗೆಯಲ್ಲಿ ತಾಳಿ ಇಟ್ಟುಕೊಂಡು ಜೀವನ ಮಾಡುವ ಭಾವನಾ ಪರಿಸ್ಥಿತಿ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ