/newsfirstlive-kannada/media/media_files/2025/09/30/gleeden-2025-09-30-09-51-18.jpg)
ಮದುವೆ ಆದವರಿಗೆ ಒಂದು ಸಮಸ್ಯೆ, ಆಗದೇ ಇದ್ದವರಿಗೆ ಇನ್ನೊಂದು ಸಮಸ್ಯೆ. ಎಲ್ಲವೂ ಇರೋರಿಗೆ ಮತ್ತೆನೋ ಒಂದು ಸಮಸ್ಯೆ.. ಅದಕ್ಕೆ ಇರೋದೆಂದೇ ದಾರಿ ಅಂತಾ ಅನೇಕ ವಿವಾಹೇತರ ಅಪ್ಲಿಕೇಷನ್​​ಗಳು ಹುಟ್ಟಿಕೊಂಡಿವೆ. ಎಂದೆಂದಿಗೂ ಸುಖವಾಗಿರಿ ಅಂತಾ ಅನೇಕ ಡೇಟಿಂಗ್ ಆ್ಯಪ್​ಗಳು ಮುಕ್ತ, ಗುಪ್ತ ಅವಕಾಶ ಕಲ್ಪಿಸಿಕೊಡ್ತಿವೆ. ಇದೀಗ ಗ್ಲೀಡೆನ್ (Gleeden) ಅಚ್ಚರಿಯ ಮಾಹಿತಿಯನ್ನ ಹೊರ ಹಾಕಿದೆ.
ಕಂಪನಿಯ ಪ್ರಕಾರ, ಗ್ಲೀಡೆನ್ ಭಾರತದಲ್ಲಿ 3 ಮಿಲಿಯನ್ ಬಳಕೆದಾರರನ್ನು (30 ಲಕ್ಷ) ನೋಂದಾಯಿಸಿದೆ. ಗ್ಲೀಡೆನ್​ನ ಒಂದು ಹೇಳಿಕೆಯಲ್ಲಿ.. 2024ರಲ್ಲಿ ಅಪ್ಲಿಕೇಶನ್ ತನ್ನ ಬಳಕೆದಾರರ ಸಂಖ್ಯೆಯಲ್ಲಿ ಶೇಕಡಾ 270 ರಷ್ಟು ಏರಿಕೆ ಕಂಡಿದೆ ಎಂದಿದೆ. ಅದರಲ್ಲೂ ಮಹಿಳಾ ಬಳಕೆದಾರರಲ್ಲಿ ಶೇಕಡಾ 128 ರಷ್ಟು ಹೆಚ್ಚಳ ಕಂಡುಬಂದಿದೆ. ಪ್ರಸ್ತುತ ಗ್ಲೀಡೆನ್‌ನ ಬಳಕೆದಾರರಲ್ಲಿ ಮಹಿಳೆಯರು ಶೇಕಡಾ 58 ರಷ್ಟಿದ್ದಾರೆ. ಅವರಲ್ಲಿ ಶೇಕಡಾ 40 ರಷ್ಟು ಜನ ಪ್ರತಿದಿನ 45 ನಿಮಿಷಗಳವರೆಗೆ ಅಪ್ಲಿಕೇಶನ್‌ನಲ್ಲಿ ಕಳೆಯುತ್ತಾರೆ. ಅವರೆಲ್ಲ ಸುಮಾರು 30-45 ವಯಸ್ಸಿನ ಆಸು, ಪಾಸಿನವರಾಗಿದ್ದಾರೆ.
ಗ್ಲೀಡೆನ್‌ನ ಬಳಕೆದಾರರಲ್ಲಿ ಬೆಂಗಳೂರು ಅಗ್ರ ಸ್ಥಾನದಲ್ಲಿದೆ. ಶೇ. 20 ರಷ್ಟು ಮಂದಿ ಬೆಂಗಳೂರಿನಲ್ಲೇ ಇದ್ದಾರೆ. ಮುಂಬೈ ಶೇ. 19 ರಷ್ಟು, ಕೋಲ್ಕತ್ತಾ ಶೇ. 18 ರಷ್ಟು ಮತ್ತು ದೆಹಲಿ ಶೇ. 15 ರಷ್ಟು ಬಳಕೆದಾರರನ್ನು ಹೊಂದಿದೆ. ಮೆಟ್ರೋ ನಗರಗಳು ಗರಿಷ್ಠ ಬಳಕೆದಾರರನ್ನು ಹೊಂದಿದ್ದರೆ, ಭೋಪಾಲ್, ವಡೋದರಾ ಮತ್ತು ಕೊಚ್ಚಿಯಂತಹ ಸಣ್ಣ ನಗರಗಳಿಂದ ಬಳಕೆದಾರರಲ್ಲಿ ತ್ವರಿತ ಏರಿಕೆ ಕಂಡುಬಂದಿದೆ ಎಂದು ವರದಿಗಳು ಹೇಳಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ