ಗಣೇಶನಿಗೆ ಇಷ್ಟವಾದ ಮೋದಕ ಜಸ್ಟ್ 10 ನಿಮಿಷದಲ್ಲಿ ಮಾಡೋದು ಹೇಗೆ? ಇಲ್ಲಿದೆ ಸುಲಭ ವಿಧಾನ!

ಮನೆಯಲ್ಲಿ ಮೋದಕವನ್ನು ಮಾಡೋದು ಕಷ್ಟ ಅಂತ ಬೇಕರಿಯಿಂದ ತೆಗೆದುಕೊಂಡು ಗಣೇಶನ ಮುಂದೆ ಇಡುತ್ತಾರೆ. ಆದರೆ ಬಹುತೇಕರಿಗೆ ಸುಲಭವಾಗಿ ಮೋದಕವನ್ನು ಮನೆಯಲ್ಲೇ ಅದರಲ್ಲೂ ಬರೀ 10 ನಿಮಿಷದಲ್ಲಿ ಮೋದಕವನ್ನು ತಯಾರಿಸುವುದು ಗೊತ್ತಿಲ್ಲ.

author-image
Veenashree Gangani
ganesh chaturthi
Advertisment

ಗೌರಿ-ಗಣೇಶ ಹಬ್ಬ ಬಂದೇ ಬಿಟ್ಟಿದೆ. ಹೀಗಾಗಿ ಭಕ್ತರು ತಮ್ಮ ತಮ್ಮ ಏರಿಯಾದಲ್ಲಿ ಗಣೇಶನನ್ನು ಕೂರಿಸಲು ಸಕಲ ಸಿದ್ಧತೆ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೇ ಸಾಕಷ್ಟು ಮಂದಿ ಮನೆಯಲ್ಲೇ ಗೌರಿ, ಗಣಪತಿಯ ವಿಗ್ರಹಗಳನ್ನ ಪ್ರತಿಷ್ಠಾಪಿಸಿ ನೈವೇದ್ಯಕ್ಕಾಗಿ ವಿವಿಧ ರೀತಿಯ ಭಕ್ಷ್ಯ, ಕರಿಗಡುಬು ಮತ್ತು ಸಿಹಿ ತಿಂಡಿ ಸೇರಿದಂತೆ ಹಣ್ಣುಗಳನ್ನು ಪೂಜೆಯಲ್ಲಿಟ್ಟು ಇಷ್ಟಾರ್ಥ ಸಿದ್ಧಿ ನೆರವೇರಿಸು ಪ್ರಾರ್ಥಿಸುತ್ತಾರೆ.

ganesh chaturthi(2)

ಇದನ್ನೂ ಓದಿ: ಮುಂಬೈನ GSB ಮಂಡಲ ಗಣೇಶನಿಗೆ ಬರೋಬ್ಬರಿ ₹474 ಕೋಟಿ ಇನ್ಸೂರೆನ್ಸ್‌.. ಹಳೆಯ ರೆಕಾರ್ಡ್ ಬ್ರೇಕ್!

ಗಣೇಶ ಚತುರ್ಥಿಯ ಒಂದು ದಿನದ ಮುಂಚೆ ಪಾರ್ವತಿ ದೇವಿಯ ಅವತಾರವಾದ ಗೌರಿ ದೇವಿಯನ್ನು ಇಂದು ಮನೆಗೆ ತಂದು ಪೂಜಿಸಲಾಗುತ್ತದೆ. ಈ ಹಬ್ಬವನ್ನು ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಭಾರೀ ವಿಜ್ರಂಭಣೆಯಿಂದ ಮಾಡಲಾಗುತ್ತದೆ. ಗೌರಿ ಗಣೇಶನನ್ನು ಬರಮಾಡಿಕೊಳ್ಳಲು ಸಕಲ ತಯಾರಿ ನಡೆಸುತ್ತಿದ್ದಾರೆ. ಇನ್ನು ಪ್ರತಿ ಗಣೇಶ ಹಬ್ಬದಂದು ಗಣೇಶನಿಗೆ ಪ್ರಿಯವಾದ ಮೋದಕವನ್ನು ನೈವೇದ್ಯವಾಗಿ ತಯಾರಿಸಲಾಗುತ್ತದೆ.

ganesh chaturthi(3)

ಗಣೇಶನಿಗೆ ಪ್ರಿಯವಾದ ತಿನಿಸುಗಳಲ್ಲಿ ಮೋದಕವು ಒಂದು. ಹಬ್ಬದ ಸಮಯದಲ್ಲಿ ಈ ಮೋದಕ ಇದ್ದೇ ಇರುತ್ತದೆ. ಈ ಮೋದಕದಲ್ಲಿ ನಾನಾ ವಿಧಗಳಿವೆ, ಸ್ಟೀಮ್ ಮೋದಕ, ರವೆ ಮೋದಕ, ಕರಿದ ಮೋದಕ, ಖೋವಾ ಮೋದಕ, ಚಾಕೊಲೇಟ್ ಮೋದಕ ಸೇರಿದಂತೆ ನಾನಾ ರೀತಿಯ ಮೋದಕಗಳನ್ನು ತಯಾರಿಸಲಾಗುತ್ತದೆ. ಬಹುತೇಕರು ಮನೆಯಲ್ಲಿ ಮೋದಕವನ್ನು ಮಾಡೋದು ಕಷ್ಟ ಅಂತ ಬೇಕರಿಯಿಂದ ತೆಗೆದುಕೊಂಡು ಗಣೇಶನ ಮುಂದೆ ಇಡುತ್ತಾರೆ. ಆದರೆ ಬಹುತೇಕರಿಗೆ ಸುಲಭವಾಗಿ ಮೋದಕವನ್ನು ಮನೆಯಲ್ಲೇ ಅದರಲ್ಲೂ ಬರೀ 10 ನಿಮಿಷದಲ್ಲಿ ಮೋದಕವನ್ನು ತಯಾರಿಸುವುದು ಗೊತ್ತಿಲ್ಲ.

ganesh chaturthi(1)

ಮೊದಲಿಗೆ ಒಂದು ಬೌಲ್​ಗೆ ಒಂದು ಕಪ್​ ಮೈದಾ ಹಿಟ್ಟು, ಒಂದು ಕಪ್​ ಗೋದಿ ಹಿಟ್ಟು, ರುಚಿಗೆ ತಕ್ಕಂತೆ ಉಪ್ಪು, ಸಕ್ಕರೆ ಸೇರಿಸಿ. ಬಳಿಕ 2 ಚಮಚ ತುಪ್ಪವನ್ನು ಬಿಸಿ ಮಾಡಿ ಅದಕ್ಕೆ ಸೇರಿಸಿ. ಬಳಿಕ ಚೆನ್ನಾಗಿ ಮಿಶ್ರಣ ಮಾಡಿ. ಇಲ್ಲಿ ತುಪ್ಪದ ಬದಲು ಎಣ್ಣೆಯನ್ನು ಕೂಡ ಬಳಸಬಹುದಾಗಿದೆ. 2 ರಿಂದ ಮೂರು ನಿಮಿಷ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಕೊಂಚ ನೀರು ಸೇರಿಸುತ್ತಾ ಉಂಡೆ ಕಟ್ಟಲು ಆಗುವಂತೆ ಮಿಶ್ರಣ ಮಾಡಬೇಕು. ಬರಿ ಗೋಧಿ ಹಿಟ್ಟಿನಲ್ಲೂ ಮೋದಕ ತಯಾರಿಸಬಹುದಾಗಿದೆ. ಒಂದು ವೇಳೆ ಹಿಟ್ಟು ಕೈಯಲ್ಲಿ ಅಂಟಿಕೊಂಡರೆ ಕೈಗೆ ತೆಂಗಿನ ಎಣ್ಣೆ ಸವರಿ ಸರಿಯಾಗಿ ಮಿಶ್ರಣ ಮಾಡಿ. ಬಳಿಕ 14 ರಿಂದ 15 ನಿಮಿಷ ಹಾಗೆಯೇ ಬಿಡಿ.

ganesh chaturthi(4)

ಮೋದಕ ಮಾಡುವ ವಿಧಾನ..

ಮತ್ತೊಂದು ಬಾಣಲೆ ತೆಗೆದುಕೊಂಡು ಹೂರ್ಣ ತಯಾರಿಸಬೇಕು. ಅದಕ್ಕಾಗಿ ಹದ ಬಿಸಿಯಲ್ಲಿರುವ ಬಾಣಲೆಗೆ ಒಂದೂವರೆ ಕಪ್​ ತೆಂಗಿನ ತುರಿ, ಒಂದು ಕಪ್​ ಚೆನ್ನಾಗಿ ಹುಂಡಿ ಮಾಡಿದ ಬೆಲ್ಲ ಸೇರಿಸಿ ಮಿಶ್ರಣ ಮಾಡಿ. ಬೆಂಕಿಯ ಬಿಸಿಗೆ ಬೆಲ್ಲ ಕರಗಲು ಪ್ರಾರಂಭವಾಗುತ್ತದೆ. ಬೆಲ್ಲ ಕರಗಿದ ಬಳಿಕ ಬಾಣಲೆಯನ್ನು ಬೆಂಕಿಯಿಂದ ಕೆಳಗಿಳಿಸಿ. ಬೇಕಿದ್ದರೆ ಕೊಂಚ ಏಲಕ್ಕಿ, ಡ್ರೈ ಫ್ರುಟ್ಸ್, ತುಪ್ಪ ಸೇರಿಸಬಹುದು. ​

ಇಷ್ಟಾದ ಬಳಿಕ ಮಿಶ್ರಣ ಮಾಡಿದ ಹಿಟ್ಟನ್ನು ಕೊಂಚ ಮೈದಕ್ಕೆ ಅದ್ದಿ ಚಪಾತಿಯಂತೆ ಲಟ್ಟಿಸಬೇಕು. ಬೇಕಾದ ಗಾತ್ರಕ್ಕೆ ಹಿಟ್ಟನ್ನು ಲಟ್ಟಿಸಬಹುದು. ಬಳಿಕ ತಯಾರಿಸಿಟ್ಟ ಹೂರ್ಣವನ್ನು ಅದರ ಮಧ್ಯಕ್ಕೆ ಇಟ್ಟು ಕೈಯಲ್ಲೇ ತಿರುಗಿಸುತ್ತಾ ಸರಿಯಾದ ಆಕಾರಕ್ಕೆ ತರಬೇಕು. ಬಳಿಕ ಕುದಿಯುವ ಎಣ್ಣೆಗೆ ಅದನ್ನು ಬಿಡಬೇಕು. ಸರಿಯಾಗಿ ಬೆಂದ ಬಳಿಕ ಎಣ್ಣೆಯಿಂದ ಮೇಲೆತ್ತಬೇಕು. ಇದಾದ ಬಳಿಕ ರೆಡಿಯಾದ ಮೋದಕದ ಮೇಲೆ ತುಪ್ಪ ಕೂಡ ಹಾಕಬಹುದು. ಈಗ ಮೋದಕ ರೆಡಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ganesh festival, ganesh chaturthi, ಗಣೇಶ್​ ಹಬ್ಬ
Advertisment