ದೀರ್ಘಕಾಲ ತೊಂದರೆ ಇರೋರಿಗೆ ಗುಡ್​​ನ್ಯೂಸ್​.. ಯಾವ ರಾಶಿಗೆ ಶುಭ, ಯಾರಿಗೆ ಅಶುಭ..?

ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು. ಶ್ರಾವಣ ಮಾಸ, ಕೃಷ್ಣಪಕ್ಷ, ಸಪ್ತಮಿ ತಿಥಿ, ಅಶ್ವಿನಿ ನಕ್ಷತ್ರ. ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.

author-image
Ganesh Kerekuli
RASHI_BHAVISHA
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

-------------

ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು. ಶ್ರಾವಣ ಮಾಸ, ಕೃಷ್ಣಪಕ್ಷ, ಸಪ್ತಮಿ ತಿಥಿ, ಅಶ್ವಿನಿ ನಕ್ಷತ್ರ. ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ. 

ಮೇಷ

  • ವಿದ್ಯಾರ್ಥಿಗಳಿಗೆ ಶಿಕ್ಷಣ ಕ್ಷೇತ್ರದಲ್ಲಿ ಹಿನ್ನಡೆ, ಅನಾನುಕೂಲ 
  • ಬೇರೆಯವರ ಮಾತಿನಿಂದ ಅವಮಾನಿಸುವ ಅಭ್ಯಾಸ ದೂರಮಾಡಿ 
  • ಆತುರದ ಮಾತು ತೊಂದರೆಯಾಗಬಹುದು, ಇರಲಿ ಎಚ್ಚರ
  • ವಸ್ತು ಖರೀದಿಯಲ್ಲಿ ಚರ್ಚೆ, ಅವಮಾನ, ಕಲಹ ಉಂಟಾಗಬಹುದು
  • ನಕಾರಾತ್ಮಕ ವಿಚಾರಗಳಿಗೆ ಸಮಯ ವ್ಯರ್ಥ ಆಗಲಿದೆ
  • ಕುಟುಂಬದಲ್ಲಿ ಆಶಾಂತಿ, ವಿಷ್ಣು ಸಹಸ್ರನಾಮ ಶ್ರವಣ ಮಾಡಿ

ವೃಷಭ

  • ಕುಟುಂಬದ ಮೂಲವನ್ನು ಸರಿಯಾಗಿ ಹುಡುಕಿ ಸರಿಪಡಿಸಬೇಕಾಗಬಹುದು
  • ದೀರ್ಘಕಾಲದ ತೊಂದರೆಯಿರೋರಿಗೆ ಸ್ವಲ್ಪ ಚೇತರಿಕೆ ಇದೆ 
  • ಸತ್ಯಕ್ಕೆ ಹತ್ತಿರವಾದ ಉಪಯುಕ್ತವಾದ ಚರ್ಚೆ ಮಾಡುವುದು ಉತ್ತಮ 
  • ಅನಗತ್ಯ ವಸ್ತು, ವಿಷಯಗಳಿಗೆ ಕಲಹವಾಗಬಹುದು 
  • ಇಂದು ಸಹೋದರರಲ್ಲಿ ಭಿನ್ನಾಭಿಪ್ರಾಯದ ಮಾತುಗಳಿರಬಹುದು 
  • ನಿಮ್ಮ ಮೊಂಡು ಸ್ವಭಾವ ಪರಿವರ್ತಿಸಿಕೊಳ್ಳಲು ಪ್ರಯತ್ನಬೇಕು 
  • ಸಾಲಿಗ್ರಾಮ ರೂಪೀ ವಿಷ್ಣುವಿನ ಆರಾಧನೆ ಮಾಡಿ

ಮಿಥುನ

  • ಸ್ಥಿರ ಮನಸ್ಸಿಲ್ಲದೇ ಅನೇಕ ಗೊಂದಲಗಳಿಗೆ ಸಿಲುಕಬಹುದು 
  • ಜೊತೆಗಿದ್ದ ಸ್ನೇಹತರು ನಿಮ್ಮ ಸ್ವಭಾವದಿಂದ ದೂರವಾಗಬಹುದು 
  • ದಿನದ ಆರಂಭದಲ್ಲಿ ನಿಮಗೆ ತೊಂದರೆ, ಬೇಸರದ ಸೂಚನೆಯಿರಬಹುದು 
  • ನಿಮ್ಮ ಮನಸ್ಸು ಅಧೈರ್ಯದಿಂದ ಕೂಡಿರುತ್ತದೆ, ಸಾಯಂಕಾಲದ ಚರ್ಚೆ ನಿಮಗೆ ಅನುಕೂಲವಲ್ಲ
  • ನೀವು ಎಷ್ಟು ನಯವಾಗಿರುತ್ತಿರೋ ಅಷ್ಟು ಗೌರವ ನಿಮ್ಮದಾಗುತ್ತದೆ 
  • ಭಗವದ್ಗೀತೆಯ ಶ್ಲೋಕ ಪಠಿಸಿ 


ಕಟಕ

  • ಹೊಸ ಸಂಬಂಧದ ವಿಚಾರ ಚರ್ಚೆಯಾಗುತ್ತದೆ
  • ಈ ದಿನ ಮಕ್ಕಳ ಬಗ್ಗೆ ಎಚ್ಚರಿಕೆಯಿರಲಿ
  • ಕೆಲವು ವಿಚಾರಗಳಲ್ಲಿ ಮನೆಯಲ್ಲಿ ನಿಮ್ಮನ್ನು ಪರಿಗಣಿಸಲ್ಲ
  • ಮಹಿಳೆಯರು ಸೌಂದರ್ಯವರ್ಧಕ ವಸ್ತು ಖರೀದಿಯಲ್ಲಿ ಆಸಕ್ತಿ ತೋರಬಹುದು
  • ನಿಮ್ಮ ಕೆಲಸ, ಒತ್ತಡವನ್ನು ಬೇರೆಯವರಿಗೆ ವಹಿಸಬೇಡಿ
  • ಬೇರೆಯವರ ವಿಚಾರಕ್ಕೆ ತಲೆಹಾಕಿ ಅವಮಾನವಾಗಬಹುದು
  • ಮನೋಭವ ಮಂತ್ರ ಉಪಾಸನೆ ಮಾಡಿ

ಸಿಂಹ

  • ಹಣದ ವಿಚಾರಕ್ಕೆ ಕಲಹ, ಜಗಳಬೇಡ
  • ಎಲ್ಲಾ ಕೆಲಸಗಳು ಸುಲಭವಾಗಿ ನಡೆಯಬಹುದು
  • ವ್ಯಕ್ತಿತ್ವ, ಸ್ವಭಾವದಲ್ಲಿ ಕೆಲವು ಬದಲಾವಣೆಗಳಾಗಬಹುದು
  • ಆರೋಗ್ಯದಲ್ಲಿ ತುಂಬಾ ಏರು ಪೇರು ಕಾಣಲಿದೆ
  • ಮನೆಯಲ್ಲಿ ಗಾಜಿನ ಪದಾರ್ಥ ಒಡೆಯೋದು ಅಪಶಕುನದ ಭಾವ
  • ಆಯಾಸದಿಂದ ಕಿರಿಕಿರಿ ಆಗಬಹುದು
  • ಸಾಯಂಕಾಲದಲ್ಲಿ ವ್ಯವಹಾರ ಮಾಡಲು ಸೂಕ್ತ ಸಮಯ
  • ರುದ್ರ ಮಂತ್ರ ಶ್ರವಣ ಮಾಡಿ


ಕನ್ಯಾ

  • ದಾಂಪತ್ಯದಲ್ಲಿ ವಿರಸ, ಬಿರುಕು ತೋರುತ್ತದೆ ಹೊಂದಾಣಿಕೆ ಅಗತ್ಯವಿದೆ
  • ನಿಮ್ಮ ಮನಸ್ಸಿಗೆ ಸಮಾಧಾನವಾಗುವಂತ ಕೆಲಸ ಮಾಡಿ
  • ಹೊಟ್ಟೆಗೆ ಸಂಬಂಧಿಸಿದ ತೊಂದರೆಯಾಗಬಹುದು
  • ನಿಗೂಢ ವಿಷಯಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ
  • ಉದ್ಯಮಿಗಳಿಗೆ ಹಣದ ಏರುಪೇರಿನಿಂದ ತೊಂದರೆಯಾಗಬಹುದು
  • ಮನೆಯಲ್ಲಿ ಕಹಿ ವಿಚಾರಗಳನ್ನು ಮಾತನಾಡಬೇಡಿ
  • ಐಕ್ಯಮತ್ಯ ಮಂತ್ರ ಶ್ರವಣ ಮಾಡಿ


ತುಲಾ

  • ಬಂಧುಗಳಲ್ಲಿದ್ದ ವಿರಸ, ಭಿನ್ನಾಭಿಪ್ರಾಯ ದೂರವಾಗುತ್ತದೆ
  • ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಕೆಲವು ಗೊಂದಲಗಳು ಕಾಡಬಹುದು
  • ಇಂದು ಮುದ್ರಕರಿಗೆ ಶುಭ ದಿನ
  • ಸಾಕು ಪ್ರಾಣಿಯ ಬಗ್ಗೆ ಸ್ವಲ್ಪ ಎಚ್ಚರಿಕೆ ವಹಿಸಿ, ತೊಂದರೆಯಾಗಬಹುದು
  • ಅರಿಯದ ವಿಚಾರಗಳಲ್ಲಿ ಸಿಲುಕಬಹುದು
  • ಮನೆಯಲ್ಲಿ ಮಂಗಳ ಕಾರ್ಯದ ವಿಚಾರ ಪ್ರಸ್ತಾಪಿಸಬಹುದು
  • ಈಶ್ವರನ ಆರಾಧನೆ ಮಾಡಿ

ವೃಶ್ಚಿಕ

  • ಕುಟುಂಬದ ನಿರ್ವಹಣೆ ಹಣದ ದೃಷ್ಟಿಯಿಂದ ಕಷ್ಟವಾಗಬಹುದು
  • ಶುಭಕಾರ್ಯಕ್ಕೆ ಹೋಗಲು ಮನಸ್ಸಿರುವುದಿಲ್ಲ
  • ನೌಕರಿಯ ಬಗ್ಗೆ ಸ್ನೇಹಿತರಿಂದ ತೊಂದರೆಯಿದೆ
  • ವಸ್ತು ಖರೀದಿ ಅಥವಾ ವ್ಯಾಪಾರದಲ್ಲಿ ಲಾಭವಿದೆ
  • ಸಾಯಂಕಾಲದ ವೇಳೆಗೆ ಅಶುಭವಾರ್ತೆ ಮನೆಯಲ್ಲಿ ಆತಂಕ
  • ತಂದೆಯವರ ಸಂಪೂರ್ಣ ಸಹಾಯ, ಸಹಕಾರ ಸಿಗಲಿದೆ
  • ಗುರು ದತ್ತಾತ್ರೇಯರನ್ನು ಪ್ರಾರ್ಥಿಸಿ

ಧನಸ್ಸು

  • ಉದ್ಯೋಗದಲ್ಲಿ ಸ್ಥಾನ ಮಾನಗಳು ಸಿಗಬಹುದು
  • ಬರಬೇಕಾದ ಬಾಕಿ ಹಣವಿದ್ದರೆ ಇಂದು ಬರುವ ಯೋಗವಿದೆ
  • ಮನಸ್ಸಿನಿಂದ ವೃತ್ತಿ, ಉದ್ಯೋಗದ ಚಿಂತೆ ದೂರವಾಗುತ್ತದೆ
  • ನಿಮ್ಮ ಪರಿಶ್ರಮವು ಲೆಕ್ಕಕ್ಕೆ ಬರುವುದಿಲ್ಲ 
  • ಇಂದು ವಿದ್ಯಾರ್ಥಿಗಳಿಗೆ ಯಶಸ್ಸಿದೆ
  • ಪ್ರಯಾಣದಲ್ಲಿ ತೊಂದರೆಯಿದೆ ಎಚ್ಚರಿಕೆ
  • ಕುಲದೇವತಾ ಆರಾಧನೆ ಮಾಡಿ

ಮಕರ 

  • ಮಾನಸಿಕ ಒತ್ತಡ, ಕೋಪ ಬರಬಹುದು 
  • ಎಲ್ಲಾ ಅನುಕೂಲಗಳಿದ್ದರೂ ಅನುಭವಿಸುವ ಯೋಗವಿರುವುದಿಲ್ಲ
  • ನಕಾರಾತ್ಮಕ ಆಲೋಚನೆಗಳು ಬರದಂತೆ ತಡೆಯಿರಿ
  • ನಿಮಗಾಗದ ಮಾತನ್ನು ಕೇಳಿ ಬೇಸರವಾಗಬಹುದು
  • ತಲೆ ನೋವಿನ ಸಮಸ್ಯೆ ಕಾಡಬಹುದು
  • ಮೇಲಾಧಿಕಾರಿಗಳಿಂದ ನಿಂದನೆಗೊಳಗಾಗುತ್ತೀರಿ
  • ನವಗ್ರಹ ಸ್ತೋತ್ರ ಪಠಿಸಿ

ಕುಂಭ 

  • ಈ ದಿನ ವ್ಯಾಪಾರ ಮಾಡುವವರಿಗೆ ಲಾಭವಿದೆ
  • ದೈಹಿಕ ತೊಂದರೆಯಿದೆ, ಚಿಕಿತ್ಸೆ ಅಗತ್ಯ
  • ವೈವಾಹಿಕ ಜೀವನದಲ್ಲಿ ಮಾತು ಬಿರುಕು ತರಬಹುದು
  • ಸ್ತ್ರೀಯರಿಂದ ಉಪಕಾರ, ಧನಲಾಭವಿದೆ
  • ಇಂದು ಶತ್ರುಗಳ ಕಾಟ
  • ಉದ್ಯೋಗ ಹುಡುಕುತ್ತಿರುವವರಿಗೆ ಅನುಕೂಲವಿದೆ
  • ಪ್ರತ್ಯಂಗಿರಾ ಉಪಾಸನೆ ಮಾಡಿ

ಮೀನ 

  • ಹಳೆಯ ರೋಗಗಳಿಂದ ಮುಕ್ತಿ ಸಿಗಲಿದೆ
  • ಒಂದಕ್ಕಿಂತ ಹೆಚ್ಚು ಕೆಲಸಗಳನ್ನು ಮಾಡಲು ಪ್ರಯತ್ನಿಸಿ ವಿಫಲರಾಗುತ್ತೀರಿ
  • ಇಂದು ಭಾವನೆಗಳನ್ನು ನಿಯಂತ್ರಿಸಿ
  • ಇಷ್ಟಾರ್ಥಗಳು ಈಡೇರುತ್ತವೆ ದುರಾಸೆ ತಪ್ಪಿದ್ದಲ್ಲ
  • ಬೇಕಾದವರಿಗಾಗಿ ಸ್ವಲ್ಪ ಸಮಯ ಮೀಸಲಾಗಿಡುತ್ತೀರಿ 
  • ನಿಮ್ಮ ದಿನಚರಿಯಲ್ಲಿ ಸ್ವಲ್ಪ ಬದಲಾವಣೆಯಾಗಬಹುದು
  • ಬಂಡಿಕೇಶ್ವರನನ್ನು ಪ್ರಾರ್ಥಿಸಿ

ಇದನ್ನೂ ಓದಿ:ಪೂಜೆ ಮಾಡಿ ಅಮ್ಮನ ತಬ್ಬಿ ಕಣ್ಣೀರಿಟ್ಟ ಪವಿತ್ರ ಗೌಡ.. ಅರೆಸ್ಟ್ ಮಾಡುವ ಮುನ್ನ ನಡೆದಿದ್ದು ಏನು..?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Rashi Bhavishya Kannada News
Advertisment