/newsfirstlive-kannada/media/media_files/2025/08/14/darshan-pavitra-gowda-3-2025-08-14-17-45-15.jpg)
ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದ (Renukaswmy case) ಮೊದಲ ಆರೋಪಿ ಪವಿತ್ರ ಗೌಡ (Pavitra Gowda) ಮತ್ತೆ ಅರೆಸ್ಟ್ ಆಗಿದ್ದಾರೆ. ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೊರ್ಟ್ (Supreme Court) ರದ್ದು ಮಾಡಿದ ಕೆಲವೇ ಹೊತ್ತಿನಲ್ಲಿ ಪವಿತ್ರ ಗೌಡರನ್ನ ಪೊಲೀಸರು ಬಂಧಿಸಿದ್ದಾರೆ.
ಬಂಧನದ ವೇಳೆ ಆಗಿದ್ದೇನು..?
ಅರೆಸ್ಟ್ ವಾರೆಂಟ್ ಹಿಡಿದ ಪೊಲೀಸರು, ನೇರವಾಗಿ ಪವಿತ್ರ ಗೌಡ ಮನೆಗೆ ದೌಡಾಯಿಸಿದ್ದರು. ಪೊಲೀಸರು ಮನೆಗೆ ಬಂದಾಗ ಪವಿತ್ರ ಗೌಡ ಯಾವುದೇ ಮಾತನ್ನಾಡಿಲ್ಲ. ನೋವಿನಲ್ಲೇ ನಿಂತಿದ್ದ ಪವಿತ್ರ, ಪೊಲೀಸರ ಜೊತೆ ಒಂದೇ ಒಂದು ಮಾತನ್ನಾಡಲಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: ‘ಹೇಗಿದ್ದೀರಾ ಸರ್ ವಿಲಿಯಂ..’ ಅರೆಸ್ಟ್ ವೇಳೆ ದರ್ಶನ್ ಏನ್ಮಾಡಿದರು? ಬಂಧನ ಪ್ರಕ್ರಿಯೆ ಹೇಗಿತ್ತು?
ಪವಿತ್ರ ಗೌಡ ಬದಲಾಗಿ ವಕೀಲ ಬಾಲನ್ ಮತ್ತೆ ನಾರಾಯಣಸ್ವಾಮಿ ಪೊಲೀಸರ ಜೊತೆ ಮಾತುಕತೆ ನಡೆಸಿದರು. ಈ ವೇಳೆ ಸ್ಟೇಷನ್ಗೆ ಯಾಕೆ ಕೋರ್ಟ್ಗೆ ಹಾಜರು ಪಡಿಸ್ತೀವಿ ನಡೆಯಿರಿ ಎಂದು ವಕೀಲರು ಹೇಳಿದರು.
ಅರೆಸ್ಟ್ಗೆ ಸೂಚನೆ ಬಂದಿದೆ, ಬಂಧಿಸಲೇಬೇಕು. ತಗೊಳ್ಳಿ ಅರೆಸ್ಟ್ ಮೆಮೊ ಎಂದು ವಕೀಲರಿಗೆ ನೀಡಿದ್ದಾರೆ. ವಕೀಲರ ಒತ್ತಡದ ನಡುವೆಯೂ ಪವಿತ್ರ ಗೌಡರನ್ನು ಪೊಲೀಸರು ಬಂಧಿಸಿ ಕರೆತಂದಿದ್ದಾರೆ. ಪೊಲಿಸರ ಜೀಪ್ ಹತ್ತುವ ವೇಳೆಗೂ ಪವಿತ್ರ ಗೌಡ ಏನೂ ಮಾತನ್ನಾಡಿಲ್ಲ ಎನ್ನಲಾಗಿದೆ.
ಆದರೆ..
ಅರೆಸ್ಟ್ ಮಾಡುವ ವೇಳೆ ವಕೀಲರ ಬಳಿ ಪವಿತ್ರ ಗೌಡ ಪೂಜೆ ಮಾಡೋದಾಗಿ ಹೇಳಿದ್ದಾರೆ. ಪೂಜೆ ಮಾಡಿ ಬರ್ತೀನಿ ಎಂದು ಕಣ್ಣೀರಲ್ಲೇ ದೇವರ ಪೂಜೆ ಮಾಡಿದ್ದಾರೆ. ಪೂಜೆ ಮಾಡಿದ ಬಳಿಕ ಅಮ್ಮನ್ನು ತಬ್ಬಿಕೊಂಡು ಜೊರಾಗಿ ಕಣ್ಣೀರು ಇಟ್ಟಿದ್ದಾರೆ. ಬಳಿಕ ಬಟ್ಟೆ ಪ್ಯಾಕ್ ಮಾಡಿಕೊಂಡು ಪೊಲೀಸರ ಜೊತೆ ಹೆಜ್ಜೆ ಹಾಕಿದ್ದಾಳೆ. ಈ ವೇಳೆ ಅವರ ಮಗಳು ಮನೆಯಲ್ಲಿ ಇರಲಿಲ್ಲ.
ಇದನ್ನೂ ಓದಿ:Breaking ರೇಣುಕಾಸ್ವಾಮಿ ಪ್ರಕರಣದ ಆರೋಪಿ ದರ್ಶನ್ ಮತ್ತೆ ಅರೆಸ್ಟ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ