/newsfirstlive-kannada/media/media_files/2025/12/14/lionel-messi-1-2025-12-14-13-21-54.jpg)
ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಮೂರು ದಿನಗಳ ಪ್ರವಾಸದಲ್ಲಿದ್ದಾರೆ. ವಿಶೇಷ ಅಂದ್ರೆ ಮೆಸ್ಸಿ ತಮ್ಮ ವಿಶೇಷ ಐಷಾರಾಮಿ ಜೆಟ್ ಮೂಲಕ ಭಾರತಕ್ಕೆ ಆಗಮಿಸಿದ್ದು, ಅವರು ಪ್ರಯಾಣ ಮಾಡುವ ವಿಮಾನ ಭಾರೀ ಚರ್ಚೆಯಲ್ಲಿದೆ.
ವರದಿಗಳ ಪ್ರಕಾರ.. ವಿಮಾನದ ಹೆಸರು ಗಲ್ಫ್‌ಸ್ಟ್ರೀಮ್ ವಿ (Gulfstream V). ಇದೊಂದು ಐಷಾರಾಮಿ ಬ್ಯುಸಿನೆಸ್​ ಜೆಟ್ ಆಗಿದೆ. ಇದು 6,500 ನಾಟಿಕಲ್ ಮೈಲುಗಳವರೆಗೆ ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ.
ಇದರ ಬೆಲೆ ಸುಮಾರು 1 ಬಿಲಿಯನ್
ಜಿವಿ ವಿಮಾನವು 51,000 ಅಡಿ ಎತ್ತರದಲ್ಲಿ ಹಾರಲು ಪ್ರಮಾಣೀಕರಿಸಲ್ಪಟ್ಟಿದೆ. ಅಂದರೆ ಇದು ಹೆಚ್ಚಿನ 550 mph ಗಿಂತ ಹೆಚ್ಚಿನ ವೇಗದಲ್ಲಿ ಹಾರಾಟ ನಡೆಸುತ್ತದೆ. ಇದರ ಕ್ಯಾಬಿನ್ 96.42 ಅಡಿ ಉದ್ದ ಮತ್ತು 25.83 ಅಡಿ ಎತ್ತರವಿದೆ. ಇದು ಗಲ್ಫ್‌ಸ್ಟ್ರೀಮ್‌ನ G500 ಮತ್ತು G550 ಮಾದರಿಗಳಿಗಿಂತ ಸ್ವಲ್ಪ ಹೆಚ್ಚು ವಿಶಾಲವಾಗಿದೆ. 13 ರಿಂದ 14 ಆಸನಗಳಿವೆ.
ಗಲ್ಫ್‌ಸ್ಟ್ರೀಮ್ V (GV) ವಿಮಾನಗಳ ಬೆಲೆ ಸುಮಾರು 9 ಮಿಲಿಯನ್ ಡಾಲರ್​ನಿಂದ 14 ಮಿಲಿಯನ್ ಡಾಲರ್​​. ಅಂದರೆ ಸುಮಾರು 75 ಕೋಟಿಯಿಂದ 116 ಕೋಟಿ ರೂಪಾಯಿ ಆಗಲಿದೆ. ಆದರೆ ಹೊಸ GVಗಳು 40 ಮಿಲಿಯನ್ ಡಾಲರ್​ಗಿಂತ ಹೆಚ್ಚು ಎನ್ನಲಾಗಿದೆ. ಇಂಧನ, ಸಿಬ್ಬಂದಿ, ನಿರ್ವಹಣೆ ಸೇರಿದಂತೆ ವಾರ್ಷಿಕ ನಿರ್ವಹಣಾ ವೆಚ್ಚವು ಸುಮಾರು 18 ರಿಂದ 36 ಕೋಟಿ ರೂಪಾಯಿ ಆಗಲಿದೆ.
ಇದನ್ನೂ ಓದಿ: ‘ಕೊಲ್ಹಾಪುರಿ ಚಪ್ಪಲಿ’ಗಳಿಗೆ ಗ್ಲೋಬಲ್ ಟಚ್.. ಈಗ ಒಂದು ಜೋಡಿಗೆ 84,000 ರೂಪಾಯಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us